ಕರ್ನಾಟಕದಲ್ಲಿ ಮಹಾಮಾರಿ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬಾರದಷ್ಟು ಹೆಚ್ಚುತ್ತಿದೆ. ಅದರಲ್ಲೂ ಬೆಂಗಳೂರಿನ ಸ್ಥಿತಿ ನೋಡಬಾರದು. ಸೋಂಕು ಹರದಂತೆ ಸರ್ಕಾರ ಮತ್ತೊಂದು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ.
ಬೆಂಗಳೂರು, (ಏ.30): ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಮಿತಿ ಮೀರಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನಿಯಂತ್ರಣಕ್ಕೆ ಬಾರದಷ್ಟು ಹೆಚ್ಚುತ್ತಿದೆ.
ಗಾಳಿಯ ಮೂಲಕವೂ ಕೊರೋನಾ ಹರಡಲಿದೆ ಎಂಬ ಕಾರಣದಿಂದಾಗಿ ನಗರದಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸರ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
undefined
ಮುಂದೆ ಕಾದಿದೆ ದೊಡ್ಡ ಗಂಡಾಂತರ : 5 ಲಕ್ಷ ಐಸಿಯು ಬೇಕು!
ಹೌದು... ನಾಳೆಯಿಂದ (ಶನಿವಾರ) 10 ದಿನಗಳ ಕಾಲ ಡ್ರೋನ್ ಮೂಲಕ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಇದಕ್ಕೆ ಇಂದು (ಶನಿವಾರ) ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ಅಂದಹಾಗೆ ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ 10 ದಿನಗಳ ಕಾಲ 3 ಡ್ರೋನ್ ಮೂಲಕ ಸ್ಯಾನಿಟೈಷೇಷನ್ ಸಿಂಪಡಣೆ ಕಾರ್ಯ ನಡೆಯಲಿದೆ.
ಸಂಸದ ಪಿ ಸಿ ಮೋಹನ್ ಅವರು ಸ್ವಂತ ಖರ್ಚಿನಲ್ಲಿ ಚೆನ್ನೈಯಿಂದ ಈ ಡ್ರೋಣ್‌ಗಳನ್ನು ತರಿಸಿದ್ದು, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತದೆ.