ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಉಡುಗೊರೆ| ವಿನೂತನವಾಗಿ ಕೊರೋನಾ ಜಾಗೃತಿ| ಮದುವೆಯಲ್ಲಿ ಕೊರೋನಾ ವಾರಿಯರ್‌ಗಳಾದ ಪೌರಕಾರ್ಮಿಕರಿಗೆ ಸನ್ಮಾನ|
ಹುಬ್ಬಳ್ಳಿ(ಜು.03): ಕೊರೋನಾ ಮದುವೆ ಸಂಪ್ರದಾಯವನ್ನೂ ಬದಲಿಸುತ್ತಿದೆ. ಇಲ್ಲಿನ ಕಮರಿಪೇಟೆಯ ನಿವಾಸಿ ಕಿರಣ ಕಲಬುರ್ಗಿ ಹಾಗೂ ಮಂಜುಶ್ರಿ ಅವರ ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ನೀಡುವ ಮೂಲಕ ವಿಶೇಷವಾಗಿ ಕೊರೋನಾ ಜಾಗೃತಿ ಮೂಡಿಸಿದರು.
ಗುರುವಾರ ನಗರದಲ್ಲಿ ನಡೆದ ಮದುವೆಯಲ್ಲಿ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ನೀಡಲಾಗಿದೆ.
ಅಣ್ಣಿಗೇರಿ: ಇಂದಿನಿಂದ 10 ದಿನ ಸ್ವಯಂ ಲಾಕ್‌ಡೌನ್
ಈ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದು ವಿಶೇಷ. ಇದಲ್ಲದೆ ಮದುವೆಯಲ್ಲಿ ಕೊರೋನಾ ವಾರಿಯರ್‌ಗಳಾದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.