ಜು. 3ರಿಂದ 13ರ ವರೆಗೆ ಪಟ್ಟಣ ಲಾಕ್‌ಡೌನ್| ಬೆಳಗ್ಗೆ 6ರಿಂದ ಮಾತ್ರ ಮಧ್ಯಾಹ್ನ 2ರ ವರೆಗೆ ಅಗತ್ಯ ವಸ್ತುಗಳು ಲಭ್ಯ|ಪಟ್ಟಣದ ವತರ್ಕರು, ಗಣ್ಯರ ಸಭೆಯಲ್ಲಿ ತೀರ್ಮಾಣ|
ಅಣ್ಣಿಗೇರಿ(ಜು.03): ಕೊರೋನಾ ಹಾವಳಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಣ್ಣಿಗೇರಿಯಲ್ಲಿ ಸಾರ್ವಜನಿಕರು 10 ದಿನಗಳವರೆಗೂ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪರ್ವತಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಈ ನಿರ್ಣಯ ಕೈಗೊಂಡಿದ್ದಾರೆ. ಇದರಿಂದಾಗಿ ಜು. 3ರಿಂದ 13ರ ವರೆಗೆ ಪಟ್ಟಣ ಲಾಕ್‌ಡೌನ್ ಆಗಲಿದೆ. ಬೆಳಗ್ಗೆ 6ರಿಂದ ಮಾತ್ರ ಮಧ್ಯಾಹ್ನ 2ರ ವರೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಬೇಕು.
ಪರ್ವತ ಮಲ್ಲೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಪಟ್ಟಣದ ವರ್ತಕರು, ಗಣ್ಯರು, ಮುಖಂಡರು, ಸಾರ್ವಜನಿಕರು ಈ ನಿರ್ಣಯಕೈಗೊಂಡಿದ್ದಾರೆ. ನಿತ್ಯ ದಿನಸಿ, ಇನ್ನೀತರ ವ್ಯಾಪಾರ ವಹಿವಾಟು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆದು ನಂತರ ಬಂದ್ ಮಾಡಲು ತೀರ್ಮಾನಿಸಿದರು. ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮನೆಯಿಂದ ಯಾರು ಹೊರಗೆ ಬರದಂತೆ ಜಾಗೃತಿ ವಹಿಸಬೇಕು. ಮನೆಯಲ್ಲೇ ಇದ್ದು ತಮ್ಮ ಆರೋಗ್ಯ ಕಡೆಗೆ ಹೆಚ್ಚು ಗಮನಹರಿಸಬೇಕು. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸಬೇಕು ಎಂದು ಸಭೆಯಲ್ಲಿದ್ದ ಹಿರಿಯರು ಹೇಳಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲರೂ ಒಪ್ಪಿಗೆ ಸೂಚಿಸಿದರು.
undefined
ಧಾರವಾಡದಲ್ಲಿ ಕೊರೋನಾ ಸ್ಫೋಟ: 35 ಕೋವಿಡ್ ಪಾಸಿಟಿವ್ ಕೇಸ್
ಕೊರೋನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಜನತೆಯ ಹಿತರಕ್ಷಣೆಗೆ ನಾವೆಲ್ಲ ಸರ್ಕಾರ, ಆರೋಗ್ಯ ಇಲಾಖೆ ನೀಡುವ ಕಟ್ಟುನಿಟ್ಟಿನ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕಿದೆ. ಕಳೆದ ತಿಂಗಳು ಸೋಂಕಿತರು ಪಟ್ಟಣದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಸಮಸ್ತ ನಾಗರಿಕ ಸಮಿತಿ, ಲಾಕ್‌ಡೌನ್ ನಿಯಮಗಳನ್ನು ಪಾಲಿಸುವ ನಿರ್ಣಯ ಮೇರೆಗೆ ನಾಳೆಯಿಂದ 10 ದಿನಗಳು ಅಣ್ಣಿಗೇರಿ ಪಟ್ಟಣ ಲಾಕ್‌ಡೌನ್ ಆಗಲಿದೆ.