ಚುನಾವಣಾ ಹೊತ್ತಿನಲ್ಲಿ ಪ್ರತಿಮೆ ವಿಚಾರದಲ್ಲಿ ಕಿರಿಕ್
ಕಾಫಿನಾಡಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್
ಶಾಸಕ ಸಿ.ಟಿ.ರವಿ ಆಪ್ತ ಪುಪ್ಪರಾಜ್ ಗೆ ಘೇರಾವ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.25): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಚುನಾವಣಾ ಹೊತ್ತಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿದೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ನಾಮಫಲಕ ವಿಚಾರದಲ್ಲಿ ಸಂಗೊಳ್ಳಿ ರಾಯಣ್ಣ ವೇದಿಕೆಯ ಅಧ್ಯಕ್ಷ ಶಾಸಕ ಸಿ.ಟಿ.ರವಿ ಆಪ್ತ ಪುಪ್ಪರಾಜ್‌ಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ಸ್ಥಳದಿಂದ ಕಾಲ್ಕಿತ್ತು ಬಚಾವಾಗಿದ್ದಾರೆ.
undefined
ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ದಂಟರಮಕ್ಕಿ ಜನ ಕೂಡ ನಾವು ಹಣ ನೀಡುತ್ತೇವೆ ಒಳ್ಳೆ ಪ್ರತಿಮೆ ಮಾಡೋಣ ಅಂತ ಮುಂದೆ ಬಂದಿದ್ದರು. ಆದರೆ, ಸರ್ಕಾರ ಎಲ್ಲರೂ ಹಣ ಹಾಕೋದು ಬೇಡ. ಸರ್ಕಾರದ ಅನುದಾನದಲ್ಲಿ ಮಾಡೋಣ ಎಂದು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿತ್ತು. ದೇವಸ್ಥಾನದಲ್ಲಿ ಮಾತುಕತೆ ಸಂದರ್ಭದಲ್ಲಿ ಪ್ರತಿಮೆಯಲ್ಲಿ ಬೇರೆ ಯಾರ ಹೆಸರೂ ಬೇಡ. ಶಾಸಕ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹೆಸರು ಮಾತ್ರ ಇರಲಿ ಎಂದು ತೀರ್ಮಾನವಾಗಿತ್ತು.
ಇದನ್ನೂ ಓದಿ: ನನ್ನ ಖಡ್ಗ ಕಾಫಿಗರ ರಕ್ತಕ್ಕಾಗಿ ತಹತಹಿಸುತ್ತಿದೆ: ಟಿಪ್ಪು ಖಡ್ಗದ ಮೇಲಿನ ಬರಹ ರಿವೀಲ್
ಗಾಯತ್ರಿ ಶಾಂತೇಗೌಡರ ಹೆಸರು ಸೇರಿಸಿ: ಆದರೆ, ಇಂದು ನಾಮಫಲಕದಲ್ಲಿ ಸಿ.ಟಿ.ರವಿ, ಭೈರತಿ ಬಸವರಾಜ್ ಜೊತೆ ಗಾಯತ್ರಿ ಶಾಂತೇಗೌಡ ಹೆಸರಿಲ್ಲ. ಇದು ಸ್ಥಳಿಯರು, ಗಾಯತ್ರಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಮೆ ನಿರ್ಮಾಣದ ವೇಳೆ ನೀವು ಅವತ್ತು ಹೇಳಿದ್ದೇನು? ಆದರೆ ಇವತ್ತು ನೀವು ಮಾಡುತ್ತಿರುವುದೇನು ಎಂದು ಬಿಜೆಪಿಗರಿಗೆ ರಾಯಣ್ಣನ ಪ್ರತಿಮೆ ಬಳಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂದು ದೇವಸ್ಥಾನದಲ್ಲಿ ಕೊಟ್ಟಿರುವ ಮಾತಿನಂತೆ ನಡೆದುಕೊಳ್ಳಲಿ ಎಂದು ಪುಟ್ಟೇಗೌಡರ ನೇತೃತ್ವದಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ದಂಟರಮಕ್ಕಿ ಬಡಾವಣೆಯ ಜನರು ರೆಬಲ್ : ಕೆ.ಎಂ. ರಸ್ತೆಯಲ್ಲಿರುವ ದಂಟರಮಕ್ಕಿ ವೃತ್ತದಲ್ಲಿ ನಿರ್ಮಾಣ ಮಾಡಿರುವ ಸಂಗೋಳ್ಳಿ ರಾಯಣ್ಣ ಪ್ರತಿಮೆ ನಾಳೆ (ಭಾನುವಾರ ) ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಟಿ. ರವಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕೂಡ ಭಾಗವಹಿಸಲಿದ್ದಾರೆ. ಈ ಪ್ರತಿಮೆ ನಿರ್ಮಾಣ ಹಾಗೂ ಪ್ರತಿಷ್ಟಾಪನೆಯ ಉಸ್ತುವಾರಿಯನ್ನು ಜಿಲ್ಲಾ ಸಂಗೋಳ್ಳಿ ರಾಯಣ್ಣ ವೇದಿಕೆ ನೋಡಿಕೊಳ್ಳುತ್ತಿದೆ.
ಹೇಳಿದ್ದೊಂದು, ಮಾಡೋದು ಮತ್ತೊಂದು: ಪ್ರತಿಮೆಯ ಕೆಳ ಭಾಗದಲ್ಲಿ ಅಳವಡಿಸಲು ನಾಮಫಲಕ ಸಿದ್ಧಪಡಿಸಲಾಗಿದ್ದು, ಇಂದು ಅಳವಡಿಸುವ ಕೆಲಸಕ್ಕೆ ಇಂದು ಬಜೆಪಿ ನಾಯಕರು ಆಗಮಿಸಿದ್ದರು. ಈ ವೇಳೆ ದಂಟರಮಕ್ಕಿ ಬಡಾವಣೆಯ ಕುರುಬ ಸಮುದಾಯದವರು ಆಗಮಿಸಿ ಫಲಕವನ್ನು ನೋಡಿದಾಗ ಇಲ್ಲಿನ ಸ್ಥಳೀಯರನ್ನು ಕಡೆಗಣಿಸಲಾಗಿದೆ ಎಂದು ಸಂಗೊಳ್ಳಿ ರಾಯಣ್ಣ ವೇದಿಕೆಯ ಅಧ್ಯಕ್ಷರು ಕೆಂಪನಹಳ್ಳಿ ಬಡಾವಣೆಯವರು ಆಗಿದ್ದು, ತಮ್ಮ ಬಡಾವಣೆಯಲ್ಲಿ ಮಾತ್ರ ಉಸ್ತುವಾರಿ ನೋಡಿಕೊಳ್ಳಲಿ, ಇಲ್ಲಿಗೆ ಬರುವುದು ಬೇಡ ಎಂದು ತರಾಟೆ ತೆಗೆದುಕೊಂಡರು. ಇನ್ನು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಸಂಗೊಳ್ಳಿ ರಾಯಣ್ಣ ವೇದಿಕೆಯ ಅಧ್ಯಕ್ಷರು ಕಾರು ಹತ್ತಿ ಸ್ಥಳದಿಂದ ತೆರಳಿದರು.
ಮಲೆನಾಡಿನಲ್ಲಿ ಮೂಲ ಸೌಕರ್ಯ ಕೊರತೆ: ಹಲವು ಗ್ರಾಮಗಳಿಂದ ಚುನಾವಣಾ ಬಹಿಷ್ಕಾರ
ಪ್ರತಿಮೆ ಉದ್ಘಾಟನೆ ಫಲಕ ಅಳವಡಿಕೆ ಇಲ್ಲ: ಇನ್ನು ಸಂಗೊಳ್ಳಿ ರಾಣ್ಣ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದ ಮೊದಲು ನಾಮಫಲಕ ಅಳವಡಿಸುವ ಕೆಲಸವನ್ನು ಬಿಜೆಪಿ ನಾಯಕರು ಅರ್ಧಕ್ಕೆ ಕೈಬಿಟ್ಟಿದ್ದಾರೆ. ಒಟ್ಟಾರೆ ಬಿಜೆಪಿಯ ಈ ಪ್ರತಿಮೆ ರಾಜಕಾರಣಕ್ಕೆ ಚಿಕ್ಕಮಗಳೂರು ನಗರದ ಜನ ಬಿಜೆಪಿ ಮುಖಂಡರ ಮೇಲೆ ಕಿಡಿಕಾರ್ತಿದ್ದಾರೆ. ಅವತ್ತು ನಾವೇ ಹಣ ಕೊಡ್ತೀವಿ ಅಂತ ಹೇಳಿದರೂ ಬೇಡವೆಂದು ಹೇಳಿದ್ದರು. ದೇವಸ್ಥಾನದಲ್ಲಿ ಒಂದು ಮಾತು ನೀಡಿ ಇಂದು ರಸ್ತೆ ಮಧ್ಯೆ ಮತ್ತೊಂದು ಕೆಲಸ ಮಾಡಿದ್ದಾರೆ. ಹೀಗಾಗಿ, ಪ್ರತಿಮೆ ಕೆಳಗಡೆ ಪ್ರತಿಷ್ಠಾಪಿಸಲು ತಂದಿದ್ದ ನೇಮ್ ಬೋರ್ಡ್ ಕಲ್ಲನ್ನ ಹಾಕಲು ಬಿಡದೆ ವಾಪಸ್ ಕಳಿಸಿದ್ದಾರೆ. ಇದೀಗ, ಸ್ಥಳಿಯ ಆಡಳಿತ ಕಲ್ಲನ್ನೇ ಬದಲಿಸುತ್ತೋ ಇಲ್ಲ ಅದೇ ಕಲ್ಲನ್ನ ಹಾಕುತ್ತೋ ಅನ್ನೋದನ್ನ ಕಾದುನೋಡಬೇಕು.