ನಾನಾ ದೇಗುಲಗಳ ಪ್ರವೇಶ ನಿರ್ಬಂಧ| ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮ| ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಎಲ್ಲ ಪ್ರವೇಶ ನಿರ್ಬಂಧ| ಅನ್ನ ದಾಸೋಹ ಸ್ಥಗಿತ|
ಬಾಗಲಕೋಟೆ(ಮಾ.18): ಜಿಲ್ಲೆಯಾದ್ಯಂತ ಕೊರೋನಾ ಭೀತಿ ಮುಂದುವರಿದಿದ್ದು, ಐತಿಹಾಸಿಕ ಕೂಡಲಸಂಗಮದ ಸಂಗಮೇಶ್ವರ ದೇಗುಲ ಹಾಗೂ ಐಕ್ಯ ಮಂಟಪದ ಪ್ರವೇಶವನ್ನು ನಿರ್ಬಂಧಿಸಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪ್ತಿಯಲ್ಲಿ ಬರುವ ಬಸವನ ಬಾಗೇವಾಡಿಯ ಬಸವೇಶ್ವರ ದೇಗುಲ, ಬಸವ ಸ್ಮಾರಕ, ಯಾತ್ರಿ ನಿವಾಸ, ಇಂಗಳೇಶ್ವರ ಸ್ಮಾರಕ, ಚಿಕ್ಕ ಸಂಗಮದ ಸಂಗಮೇಶ್ವರ ದೇಗುಲ, ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿನ ಗಂಗಾಂಬಿಕೆ ಐಕ್ಯ ಮಂಟಪ, ಮುದ್ದೇಬಿಹಾಳ ತಾಲೂಕಿನ ತಂಗಡಗಿ ಶರಣೆ ನೀಲಾಂಬಿಕೆ ಐಕ್ಯ ಮಂಟಪಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಪ್ರಾಧಿಕಾರದ ಆಯುಕ್ತೆ ರಾಜೇಶ್ವರಿ ಆದೇಶಿಸಿದ್ದಾರೆ. ಜೊತೆಗೆ ಯಾತ್ರಿ ನಿವಾಸದ ಅನ್ನ ದಾಸೋಹವನ್ನು ಸ್ಥಗಿತಗೊಳಿಸಿದ್ದಾರೆ.
ಬೆಂಗಳೂರಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢ
ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಸಾಯಿ ಮಂದಿರದ ಭಕ್ತಭವನದ ಆವರಣದಲ್ಲಿ ಏಕಕಾಲದಲ್ಲಿ ಹೆಚ್ಚಿನ ಭಕ್ತರು ಸೇರುವುದನ್ನು ಆಡಳಿತ ಮಂಡಳಿ ನಿಷೇಧಿಸಿದ್ದು, ಮಹಾಮಂಗಳಾರತಿ ಕಾರ್ಯಕ್ರಮ, ಪ್ರಸಾದ ವ್ಯವಸ್ಥೆಯನ್ನು ಸಹ ನಿಷೇಧಿಸಲಾಗಿದೆ.
ಐಸೊಲೇಶನ್‌ನಲ್ಲಿ 110 ಜನ:
ಬಾಗಲಕೋಟೆ ಜಿಲ್ಲೆಯಲ್ಲಿ ಮಂಗಳವಾರದವರೆಗೆ ಒಟ್ಟು 110 ವ್ಯಕ್ತಿಗಳನ್ನು ತೀವ್ರ ನಿಗಾದಲ್ಲಿಡಲಾಗಿದ್ದು, ಅದರಲ್ಲಿ 105 ಜನರನ್ನು 14 ದಿನಗಳ ಕಾಲ ಹೋಮ್ ಐಸೊಲೇಶನ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ಒದಗಿಸಿದೆ.
5 ಲಕ್ಷ ರಿಲಯನ್ಸ್ ಸಿಬ್ಬಂದಿ ಕೊರೋನಾದಿಂದ ಸೇಫ್: ಅಂಬಾನಿ ಮಾಡಿದ ಪ್ಲಾನ್ ಇದು
ಆಸ್ಪತ್ರೆಯಲ್ಲಿ ಐಸೊಲೇಶನ್‌ನಲ್ಲಿ ಒಬ್ಬರಿದ್ದು ಇಲ್ಲಿಯವರೆಗೆ 14 ದಿನಗಳ ಐಸೊಲೇಶನ್ ಮುಗಿಸಿದವರ ಸಂಖ್ಯೆ 5 ಆಗಿದೆ. ಇಬ್ಬರ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳಿಸಿಕೊಡಲಾಗಿತ್ತು. ಅದರಲ್ಲಿ ಒಬ್ಬರದು ನೆಗೆಟಿವ್ ಬಂದಿದೆ. ಇನ್ನೊಬ್ಬರ ಸ್ಯಾಂಪಲ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.