ನಮಾಝ್ ಬೇಗ ಮುಗಿಸಲು ಸೂಚನೆ..!

Kannadaprabha News   | Asianet News
Published : Mar 18, 2020, 01:52 PM IST
ನಮಾಝ್ ಬೇಗ ಮುಗಿಸಲು ಸೂಚನೆ..!

ಸಾರಾಂಶ

ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ಮಾಡುವಾಗ ಹೆಚ್ಚಿನ ಜನ ಸೇರುವುದರಿಂದ ಬೇಗನೆ ನಮಾಝ್ ಮುಗಿಸಲು ಸೂಚನೆ ನೀಡಲಾಗಿದೆ. ಹಾಗೆಯೇ ಮಸೀದಿಗಳಲ್ಲಿ ಟ್ಯಾಂಕ್ ನೀರಿನ ಬದಲು ನಳ್ಳಿ ನೀರು ಉಪಯೋಗಿಸಲು ಸೂಚಿಸಲಾಗಿದೆ.  

ಉಡುಪಿ(ಮಾ.18): ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ಮಾಡುವಾಗ ಹೆಚ್ಚಿನ ಜನ ಸೇರುವುದರಿಂದ ಬೇಗನೆ ನಮಾಝ್ ಮುಗಿಸಲು ಸೂಚನೆ ನೀಡಲಾಗಿದೆ. ಹಾಗೆಯೇ ಮಸೀದಿಗಳಲ್ಲಿ ಟ್ಯಾಂಕ್ ನೀರಿನ ಬದಲು ನಳ್ಳಿ ನೀರು ಉಪಯೋಗಿಸಲು ಸೂಚಿಸಲಾಗಿದೆ.

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಕಾನೂನುಗಳನ್ನು ಪಾಲಿಸುವಂತೆಯೂ ಜನಸಂಖ್ಯೆ ಒಟ್ಟಾಗುವ ಸಮಾರಂಭಗಳನ್ನು ಸದ್ಯಕ್ಕೆ ಕೈಬಿಡಬೇಕು ಎಂದು ಉಡುಪಿ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್‌ ಖಾಝಿ ಶೈಖುನಾ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್‌ ತಿಳಿಸಿರುವುದಾಗಿ ಜಿಲ್ಲಾ ಸಂಯುಕ್ತ ಜಮಾಅತ್‌ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್‌ ನೇಜಾರು ವಿನಂತಿಸಿದ್ದಾರೆ.

ಕೊಡಗು: ಸ್ವಯಂ ಪ್ರೇರಿತವಾಗಿ 600ಕ್ಕೂ ಹೆಚ್ಚು ಹೋಂ ಸ್ಟೇ ಬಂದ್..!

ಮಸೀದಿಗಳಲ್ಲಿ ನಡೆಸುವ ನಮಾಝ್‌ ಮುಂತಾದ ಆರಾಧನೆಗಳನ್ನು ಶೀಘ್ರವಾಗಿ ಮುಗಿಸಬೇಕೆಂದೂ, ಸಾರ್ವಜನಿಕರು ಉಪಯೋಗಿಸುವ ಟ್ಯಾಂಕ್‌ ನೀರನ್ನು ಬಳಸುವುದನ್ನು ನಿಲ್ಲಿಸಿ, ನಳ್ಳಿ ನೀರನ್ನು ಬಳಸಿ ಜಾಗರೂಕರಾಗಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ