ಸಿನಿಮಾ ತಾರೆಯರಿಂದ ಕಳೆಗಟ್ಟಿದ ಶಿವಮೊಗ್ಗ ದಸರಾ: ನಟಿ ಉಮಾಶ್ರೀ, ಭೀಮಾ ಖ್ಯಾತಿಯ ಪ್ರಿಯಾ ಕಣ್ತುಂಬಿಕೊಂಡ ಜನ!

By Girish Goudar  |  First Published Oct 4, 2024, 5:47 PM IST

ನಟಿ, ಮಾಜಿ ಸಚಿವೆ ಉಮಾಶ್ರೀ ಅವರು ಕಾರ್ಯಕ್ರಮವನ್ನ ಉದ್ಘಾಟಿಸಿದ್ದಾರೆ. ಭೀಮಾ ಸಿನಿಮಾ ಖ್ಯಾತಿಯ ನಟಿ ಪ್ರಿಯಾ ಶಠಮರ್ಷಣ್‌ ಕಾರ್ಯಕ್ರಮದ ಮುಖ್ಯ ಹೈಲೈಟ್‌ ಆಗಿದ್ದರು.  ಕಾರ್ಯಕ್ರಮದ ಬಳಿಕ ಚಲನಚಿತ್ರ ಮತ್ತು ಸಾಹಿತ್ಯ ಕುರಿತು ಸಿನಿಮಾ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್‌ ಅವರ ಸಂವಾದ ನಡೆದಿದೆ. 


ಶಿವಮೊಗ್ಗ(ಅ.04):  ಕನ್ನಡ ಸಿನಿಮಾ ತಾರೆಯರಿಂದ ಈ ಬಾರಿಯ ಶಿವಮೊಗ್ಗ ದಸರಾ ಕೆಳೆಗಟ್ಟಿದೆ. ಹೌದು, ಶಿವಮೊಗ್ಗ ದಸರಾ ಕಾರ್ಯಕ್ರಮದಲ್ಲಿ ಹಿರಿಯ ನಟಿ ಉಮಾಶ್ರೀ, ಭೀಮಾ ಚಿತ್ರ ಖ್ಯಾತಿಯ ಪ್ರಿಯಾ ಅವರನ್ನ ಜನರು ಕಣ್ತುಂಬಿಕೊಂಡಿದ್ದಾರೆ. 

ಶಿವಮೊಗ್ಗ ದಸರಾದಲ್ಲಿ ಇಂದು(ಶುಕ್ರವಾರ) ಚಲನಚಿತ್ರ ದಸರಾಗೆ ಚಾಲನೆ ನೀಡಲಾಗಿದೆ. ನಟಿ, ಮಾಜಿ ಸಚಿವೆ ಉಮಾಶ್ರೀ ಅವರು ಕಾರ್ಯಕ್ರಮವನ್ನ ಉದ್ಘಾಟಿಸಿದ್ದಾರೆ. ಭೀಮಾ ಸಿನಿಮಾ ಖ್ಯಾತಿಯ ನಟಿ ಪ್ರಿಯಾ ಶಠಮರ್ಷಣ್‌ ಕಾರ್ಯಕ್ರಮದ ಮುಖ್ಯ ಹೈಲೈಟ್‌ ಆಗಿದ್ದರು.  

Tap to resize

Latest Videos

undefined

ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಇನ್ಮುಂದೆ ವಾರದ ಏಳು ದಿನವೂ ಬಿಸಿಯೂಟದ ಜೊತೆ ಮೊಟ್ಟೆ ವಿತರಣೆ!

ನಗರದ ಡಾ. ಅಂಬೇಡ್ಕರ್‌ ಭವನದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದೆ. ನಾಯಕ ನಟ, ರಂಗಭೂಮಿ ಕಲಾವಿದ ಅವಿನಾಶ್‌ ಶಠಮರ್ಷಣ್‌, ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ, ಶಾಖಾಹಾರಿ ಸಿನಿಮಾ ನಿರ್ಮಾಪಕ ರಾಜೇಶ್‌ ಕೀಳಂಬಿ, ನಿರ್ದೇಶಕ ಸಂದೀಪ್‌ ಸುಂಕದ್‌, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್‌, ತಹಶೀಲ್ದಾರ್‌ ಗಿರೀಶ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. 

ಕಾರ್ಯಕ್ರಮದ ಬಳಿಕ ಚಲನಚಿತ್ರ ಮತ್ತು ಸಾಹಿತ್ಯ ಕುರಿತು ಸಿನಿಮಾ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್‌ ಅವರ ಸಂವಾದ ನಡೆದಿದೆ. 

click me!