ಅರಣ್ಯಾಧಿಕಾರಿ ಗುಂಡೇಟು : ಶ್ರೀಗಂಧ ಕಳ್ಳ ಬಲಿ

Kannadaprabha News   | Asianet News
Published : Aug 22, 2021, 08:08 AM IST
ಅರಣ್ಯಾಧಿಕಾರಿ ಗುಂಡೇಟು : ಶ್ರೀಗಂಧ ಕಳ್ಳ ಬಲಿ

ಸಾರಾಂಶ

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯಾಧಿಕಾರಿ ಗುಂಡಿನ ದಾಳಿ ಅರಣ್ಯಾಧಿಕಾರಿಗಳು ಹಾರಿಸಿದ ಗುಂಡಿಗೆ ಓರ್ವ ಸ್ಥಳದಲ್ಲೇ ಸಾವು

ಕುಣಿಗಲ್‌ (ಆ.22): ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಹಾರಿಸಿದ ಗುಂಡಿಗೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಕೆಂಕೆರೆ ಮೀಸಲು ಅರಣ್ಯದಲ್ಲಿ ನಡೆದಿದೆ. 

ಕಲಬುರಗಿ; ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದಿದ್ದ ಮಹಿಳೆಗೆ 5 ವರ್ಷ ಶಿಕ್ಷೆ!

ಗುಂಡೇಟಿಗೆ ಬಲಿಯಾದವನ ಗುರುತು ಇನ್ನೂ ಪತ್ತೆಯಾಗಿಲ್ಲ. ಗುಂಡೇಟಿಗೆ ಬಲಿಯಾದವನು ಸೇರಿದಂತೆ ಮೂವರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದರು ಎನ್ನಲಾಗಿದೆ. 

ಈ ವೇಳೆ ಆರೋಪಿಗಳು ಅರಣ್ಯಾಧಿಕಾರಿಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವರಿಗೆ ಪೆಟ್ಟಾಗಿದೆ. ಆಗ ಅರಣ್ಯಾಧಿಕಾರಿಗಳು ಹಾರಿಸಿದ ಗುಂಡು ಚೋರನ ಬೆನ್ನಿಗೆ ತಾಗಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರು ಪರಾರಿಯಾಗಿದ್ದಾರೆ.

PREV
click me!

Recommended Stories

ಕೊಡಗು ಜಿಲ್ಲೆಯ ಈ ಗ್ರಾಮದಲ್ಲಿ ರೆಸಾರ್ಟ್‌, ಹೋಮ್‌ಸ್ಟೇ ಬ್ಯಾನ್‌!
State News Live: ಸಹಾಯಕ ನಿರ್ದೇಶಕ ಗಣತಿದಾರ, ಎಫ್‌ಡಿಎ ಮೇಲ್ವಿಚಾರಕ!