ನೆಚ್ಚಿನ ನಟಿಯ ಸಂಕಷ್ಟನಿವಾರಣೆಗೆ ವಿಶೇಷ ಪೂಜೆ | ಅವರಿಗೆ ಮೋಸ, ವಂಚನೆ ಮಾಡುವುದು ಗೊತ್ತಿಲ್ಲ | ರಾಧಿಕಾ ಪ್ರಕರಣ ಮುಂದುವರೆಸಿದರೆ ಪ್ರತಿಭಟನೆ
ಮಂಡ್ಯ(ಜ.10): ನಟಿ ರಾಧಿಕಾ ಕುಮಾರಸ್ವಾಮಿಗೆ ಎದುರಾಗಿರುವ ಸಿಸಿಬಿ(ಕೇಂದ್ರ ಅಪರಾಧ ವಿಭಾಗ) ಸಂಕಷ್ಟಶೀಘ್ರ ಪರಿಹಾರವಾಗಲೆಂದು ಅಭಿಮಾನಿಯೊಬ್ಬ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉರುಳುಸೇವೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮೂಲತಃ ಕೆ.ಎಂ.ದೊಡ್ಡಿ ನಿವಾಸಿಯಾಗಿರುವ ವೆಂಕಟೇಶ್ ಶನಿವಾರ ಮಂಡ್ಯ ನಗರದ ಚಾಮುಂಡೇಶ್ವರಿ ನಗರದಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸತತ 4 ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಬಳಿಕ ರಾಧಿಕಾ ಕುಮಾರಸ್ವಾಮಿ ಹೇಳಿದ್ದು ಹೀಗೆ...!
ಸಂಕಷ್ಟಶೀಘ್ರ ಪರಿಹಾರವಾಗಲೆಂದು ಉರುಳುಸೇವೆ ಮಾಡಿದ ವ್ಯಕ್ತಿ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಧಿಕಾ ಕುಮಾರಸ್ವಾಮಿ ಅವರು ಯಾವ ತಪ್ಪನ್ನೂ ಮಾಡಿಲ್ಲ. ಅವರೊಬ್ಬ ಉತ್ತಮ ನಟಿ. ಹಲವಾರು ಉತ್ತಮ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ ಎಂದು ಅಭಿಮಾನ ತೋರಿದ್ದಾರೆ.
ಅವರಿಗೆ ಸಿಸಿಬಿ ಸಂಕಷ್ಟಎದುರಾಗಿರುವುದನ್ನು ನನ್ನಿಂದ ಸಹಿಸಲಾಗುತ್ತಿಲ್ಲ ಎಂದು ಭಾವುಕನಾಗಿ ಕಣ್ಣೀರಿಟ್ಟನು. ಈತ ಮೈತುಂಬಾ ರಾಧಿಕಾ ಕುಮಾರಸ್ವಾಮಿ ಹೆಸರು ಹಚ್ಚೆ ಹಾಕಿಸಿಕೊಂಡಿದ್ದಾನೆ.