ಪತ್ನಿಯ ಮಂಚದಾಟ ನೋಡಿ ಪತಿ ಶಾಕ್, ಸಿಕ್ಕಿಬಿದ್ದಿದ್ದು ತಿಳಿಬಾರ್ದುದೆಂದು ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ

Published : Jul 30, 2025, 01:31 PM IST
Sakaleshpur Illicit Affair

ಸಾರಾಂಶ

ಸಕಲೇಶಪುರ ತಾಲ್ಲೂಕಿನಲ್ಲಿ ಪತ್ನಿ ಮತ್ತು ಪ್ರಿಯಕರನ ಅಕ್ರಮ ಸಂಬಂಧ ಬಯಲಿಗೆ ಬಂದಾಗ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಲಕ್ಮೀಪುರದಲ್ಲಿ ಪತ್ನಿ ಮತ್ತು ಪ್ರಿಯಕರ ಪತಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಯಾವಾಗ ಸಿಕ್ಕಿಬಿದ್ದರೋ ಪತಿ ಮೇಲೆ ಪ್ರಿಯಕರ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಪಕ್ಕದ ಹೊಸಪೇಟೆ ಗ್ರಾಮದ ಸುಜಿತ್ ಎಂಬ ಯುವಕ, ಲಕ್ಮೀಪುರದ ನಂದೀಶ್ ಎಂಬ ವ್ಯಕ್ತಿಯ ಪತ್ನಿ ಶ್ರುತಿ ಜೊತೆಗೆ ಕಳೆದ ಆರು ತಿಂಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಲಕ್ಹ್ಮೀಪುರದ ನಂದೀಶ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪತಿ, ಪಕ್ಕದ ಹೊಸಪೇಟೆ ಗ್ರಾಮದ ಸುಜಿತ್ ಹಾಗೂ ನಂದೀಶನ ಪತ್ನಿ ಶ್ರುತಿ ನಡುವೆ ಅಕ್ರಮ ಸಂಬಂಧ ಇತ್ತು. ಸುಜಿತ್ ಹೋಂ ಗಾರ್ಡ್ ವೃತ್ತಿಯಲ್ಲಿದ್ದು, ಕಳೆದ ಆರು ತಿಂಗಳಿನಿಂದ ಶ್ರುತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ. 

ಸೋಮವಾರ ಎಂದಿನಂತೆ ಕೆಲಸಕ್ಕೆ ನಂದೀಶ್ ಹೋಗಿದ್ದ ವೇಳೆ, ಕೆಲಸವಿಲ್ಲವೆಂದು ಅರ್ಧ ಗಂಟೆಯಲ್ಲಿ ನಂದೀಶ್ ಮನೆಗೆ ವಾಪಸ್ ಬಂದಿದ್ದಾನೆ. ಈ ವೇಳೆ ಮನೆಯೊಳಗೇ ಶ್ರುತಿ ಮತ್ತು ಸುಜಿತ್ ಇಬ್ಬರೇ ಇರುವುದನ್ನು ಕಂಡು ನಂದೀಶ್ ಹೌಹಾರಿದ್ದಾನೆ. ಈ ನಡುವೆ ಅಕ್ರಮ ಸಂಬಂಧ ಬಯಲಾಗುತ್ತದೆ ಎಂದು ನಂದೀಶ್ ಮೇಲೆ ಸುಜಿತ್ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ತೀವ್ರವಾಗಿ ಗಾಯಗೊಂಡಿರುವ ನಂದೀಶ್ ಅವರನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದೀಶ್ ಮತ್ತು ಅವರ ಸಂಬಂಧಿಕರು, ಸುಜಿತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಮುಡಾ ಹಗರಣದಲ್ಲಿ ಕೋರ್ಟ್ ಹೊಸ ಆದೇಶ, ಜೈಲಲ್ಲಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತೆ ಪೊಲೀಸ್‌ ಕಸ್ಟಡಿಗೆ!
ಲೋಕಾಯುಕ್ತ ದಾಳಿ: ₹50 ಸಾವಿರ ಹಣ ಟಾಯ್ಲಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಕೃಷಿ ಅಧಿಕಾರಿ!