ಶಿರಹಟ್ಟಿ: PSI ನೇಮಕಾತಿಯಲ್ಲಿ ರಾಜ್ಯಕ್ಕೆ 26ನೇ ರ‌್ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ ಸಹನಾ

Kannadaprabha News   | Asianet News
Published : Sep 13, 2020, 12:26 PM IST
ಶಿರಹಟ್ಟಿ: PSI ನೇಮಕಾತಿಯಲ್ಲಿ ರಾಜ್ಯಕ್ಕೆ 26ನೇ ರ‌್ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ ಸಹನಾ

ಸಾರಾಂಶ

ಪಿಎಸ್‌ಐ ನೇಮಕಾತಿಯಲ್ಲಿ ಸಹನಾ ರಾಜ್ಯಕ್ಕೆ 26ನೇ ರ‌್ಯಾಂಕ್| ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರ ಗ್ರಾಮೀಣ ಪ್ರದೇಶದ ಪ್ರತಿಭೆಯಿಂದ ಸಾಧನೆ| ಸಹನಾ ಪಿಎಸ್‌ಐ ಆಗುತ್ತಿರುವುದು ಗ್ರಾಮೀಣ ಭಾಗದ ಯುವ ಜನರಿಗೆ, ಯುವತಿಯರಿಗೆ ಸ್ಫೂರ್ತಿ| 

ಶಿರಹಟ್ಟಿ(ಸೆ.13): ಒಂದು ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ ಆದರ ಹಿಂದೆ ಕಠಿಣ ಪರಿಶ್ರಮ ಅಗತ್ಯ. ಪ್ರೋತ್ಸಾಹ ಕಠಿಣ ಶ್ರಮದಿಂದ ಯಶಸ್ಸು ಸಾಧ್ಯ. ಇದೇ ಮಾತುಗಳನ್ನು ತಮ್ಮ ಜೀವನದಲ್ಲಿ ನಿಜವಾಗಿಸಿದ್ದಾರೆ ಕೆಎಸ್‌ಪಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 26ನೇ ರ‌್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಹನಾ ಫಕ್ಕೀರಗೌಡ ಪಾಟೀಲ.

ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರ ಗ್ರಾಮದ ಯುವತಿ ಮೂಲತಃ ಕೃಷಿ ಮನೆತನದಿಂದ ಬಂದವಳಾಗಿದ್ದು, ಮನೆಯಲ್ಲಿ ಹೆಚ್ಚಿಗೆ ಓದಿದವರಿಲ್ಲದಿದ್ದರೂ ಅವರ ಸಹೋದರ ವೀರನಗೌಡ ಪಾಟೀಲ ಅವರ ಪ್ರೋತ್ಸಾಹದಿಂದ ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪಕ್ಕದ ಮಾಚೇನಹಳ್ಳಿ ಗ್ರಾಮದಲ್ಲಿ ಹೈಸ್ಕೂಲ್‌ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿದ್ದಾರೆ. ನಂತರ ಕಾಲೇಜು ಶಿಕ್ಷಣವನ್ನು ಶಿರಹಟ್ಟಿ ಪಟ್ಟಣದ ಎಫ್‌.ಎಂ. ಡಬಾಲಿ ಕಾಲೇಜಿನಲ್ಲಿ ಪಿಯುಸಿ, ಪಟ್ಟಣದ ಫಕ್ಕೀರೇಶ್ವರ ಪ್ರಥಮ ದರ್ಜೆ ಕಾಲೇಜನಲ್ಲಿ ಪದವಿ, ಧಾರವಾಡ ಕವಿವಿಯಲ್ಲಿ ಎಂಎ ಓದಿದ್ದಾರೆ. ನಂತರ ಮನೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಂಡಿದ್ದರು. 2ನೇ ಪ್ರಯತ್ನ ಗೆಲುವು ಸಾಧಿಸಿದ್ದಾರೆ.
ಶುಕ್ರವಾರ ಪ್ರಕಟವಾದ ಪಿಎಸ್‌ಐ ನೇಮಕಾತಿ ಪಟ್ಟಿಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ 26ನೇ ರ‌್ಯಾಂಕ್ ಗಳಿಸುವ ಮೂಲಕ ಸಹನಾ ಪಿಎಸ್‌ಐ ಆಗುತ್ತಿರುವುದು ಗ್ರಾಮೀಣ ಭಾಗದ ಯುವ ಜನರಿಗೆ, ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.

ಗದಗ: ಒಂದು ಕಾಲದಲ್ಲಿ ಹನಿ ನೀರಿಗೂ ಪರದಾಟ, ಇಂದು ಮನೆಗಳಲ್ಲಿ ಜಿನುಗುತ್ತಿದೆ ಅಂತರ್ಜಲ!

ನನ್ನ ಸಹೋದರ ವೀರನಗೌಡ ಪಾಟೀಲ ಅವರು, ನೀನು ಯಾವುದೇ ಸಣ್ಣ ಹುದ್ದೆಗೆ ಪ್ರಯತ್ನಿಸಬೇಡ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾಗಿ ಉನ್ನತ ಹುದ್ದೆ ಸೇರಬೇಕು ಎಂದು ಹೇಳುತ್ತಿದ್ದರು. ನನ್ನ ಆಸೆ ಕೂಡಾ ಅದೇ ಇತ್ತು. ಯಾವುದೇ ತರಬೇತಿ ಪಡೆಯದೇ ನನ್ನ ಸಹೋದರನ ಪ್ರೋತ್ಸಾಹದಿಂದ ನನ್ನ ಕನಸು ಈಡೇರಿದೆ ಎಂದು ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 26ನೇ ರ‌್ಯಾಂಕ್ ಪಡೆದ ವಿದ್ಯಾರ್ಥಿನಿ ಸಹನಾ ಪಾಟೀಲ ಹೇಳಿದ್ದಾರೆ.  
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC