ರಂಗಕರ್ಮಿ ಪ್ರಸನ್ನ ಕನಸಿನ ಕೂಸು ಚರಕ ದಿವಾಳಿ

By Kannadaprabha News  |  First Published Sep 4, 2020, 9:52 AM IST

ಶಿವಮೊಗ್ಗ ಜಿಲ್ಲೆಯ ಸಾಗರದ ಚರಕವು ಇದೀಗ ತನ್ನ ದಿವಾಳಿ ಘೊಷಿಸಿಕೊಂಡಿದೆ. ನಷ್ಟ ಉಂಟಾಗಿದ್ದು, ಹೀನಾಯ ಸ್ಥಿತಿ ತಲುಪಿದೆ.


ಸಾಗರ (ಸೆ.04):  ಕೊರೋನಾ ಸೋಂಕಿನ ಕಾರಣದಿಂದ ಕೈಮಗ್ಗದ ಉತ್ಪನ್ನಗಳು ಮಾರುಕಟ್ಟೆಕಳೆದುಕೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಭೀಮನಕೋಣೆಯ ಚರಕ ಮಹಿಳಾ ವಿವಿದೋದ್ಧೇಶ ಸಂಘ ಇದೀಗ ದಿವಾಳಿ ಘೋಷಿಸಿಕೊಂಡಿದೆ.

 ನೇಕಾರಿಕೆಗೆ ಸಂಬಂಧಪಟ್ಟಎಲ್ಲ ಕೆಲಸಗಳನ್ನು ಸಂಸ್ಥೆ ನಿಲ್ಲಿಸಿದೆ. ಚರಕ ಘಟಕ ರಂಗಕರ್ಮಿ, ದೇಶೀಯ ಚಿಂತಕ ಪ್ರಸನ್ನ ಅವರ ಕನಸಿನ ಕೂಸು. 

Tap to resize

Latest Videos

ದೇಶದಲ್ಲಿ ಗುರುವಾರ ದಾಖಲೆಯ 85982 ಕೊರೋನಾ ಕೇಸ್ ಪತ್ತೆ..! .

ಗ್ರಾಮೀಣ ಕೈಗಾರಿಕೆ ಉಳಿಸಬೇಕು ಎನ್ನುವ ಮಹತ್ವಾಂಕಾಂಕ್ಷೆಯಿಂದ ಪ್ರಸನ್ನ ಅವರು ಚರಕ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಇಲ್ಲಿ 800ಕ್ಕೂ ಹೆಚ್ಚು ನೇಕಾರರು ಹಾಗೂ ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದರು. ಚರಕದಲ್ಲಿ ಕೈಮಗ್ಗ ಕೆಲಸ ಮಾಡುತ್ತಿರುವ ಗ್ರಾಮೀಣ ಮಋುಹಿಳೆಯರ ಹಿತರಕ್ಷಣೆಗಾಗಿ ಸೆ. 4ರಂದು ವಿನೂತನ ಜನಾಂದೋಲನ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 9.30ಕ್ಕೆ ಹೆಗ್ಗೋಡು ಗ್ರಾಪಂ ಆವರಣ ಸ್ವಚ್ಛಗೊಳಿಸಿದ ನಂತರ ಪ್ರತಿಭಟನೆ ನಡೆಸಿ ಚರಕದ ಉಡುಪುಗಳನ್ನು ಉಚಿತವಾಗಿ ವಿತರಿಸುವ ಮೂಲಕ ಹೋರಾಟಕ್ಕೆ ಗ್ರಾಮೀಣ ಜನರ ಬೆಂಬಲ ಕೋರಲಾಗುತ್ತದೆ.

click me!