ಧರ್ಮದ ಬಗ್ಗೆ ಜಾಗೃತಿ ಅಗತ್ಯ. ಒಡಕು ಧರ್ಮದ ಅವನತಿಗೆ ಕಾರಣ ಇದನ್ನು ಇತಿಹಾಸದಲ್ಲಿ ನಾವು ಕಂಡು, ಕೇಳಿದ್ದೇವೆ. ಆದ್ದರಿಂದ ಎಂದಿಗೂ ಜಾತಿ ಆಧಾರದ ಮೇಲೆ ಹಿಂದೂಗಳನ್ನು ವಿಭಜನೆ ಮಾಡಬೇಡಿ. ಸನ್ಯಾಸಿಗಳು ಸಹ ಧರ್ಮಕ್ಕೆ ಧಕ್ಕೆ ಬಂದಾಗ ಶಸ್ತ್ರ ಹಿಡಿದಿರುವುದು ಇತಿಹಾಸದಲ್ಲಿ ದಾಖಲಾಗಿದೆ: ಶ್ರೀ ಸದಾಶಿವಶಿವಚಾರ್ಯ ಸ್ವಾಮೀಜಿ
ಸಕಲೇಶಪುರ(ಜ.11): ಹಿಂದೂಗಳು ಒಂದಾಗದಿದ್ದರೆ ಮುಂದೆ ಅಪಾಯವಿದೆ ಎಂದು ಶ್ರೀ ಸದಾಶಿವಶಿವಚಾರ್ಯ ಸ್ವಾಮೀಜಿ ಎಚ್ಚರಿಸಿದರು.
ಗುರುವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮದ ಬಗ್ಗೆ ಜಾಗೃತಿ ಅಗತ್ಯ. ಒಡಕು ಧರ್ಮದ ಅವನತಿಗೆ ಕಾರಣ ಇದನ್ನು ಇತಿಹಾಸದಲ್ಲಿ ನಾವು ಕಂಡು, ಕೇಳಿದ್ದೇವೆ. ಆದ್ದರಿಂದ ಎಂದಿಗೂ ಜಾತಿ ಆಧಾರದ ಮೇಲೆ ಹಿಂದೂಗಳನ್ನು ವಿಭಜನೆ ಮಾಡಬೇಡಿ. ಸನ್ಯಾಸಿಗಳು ಸಹ ಧರ್ಮಕ್ಕೆ ಧಕ್ಕೆ ಬಂದಾಗ ಶಸ್ತ್ರ ಹಿಡಿದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಆದ್ದರಿಂದ ತೋರಿಕೆ ಹಿಂದೂಗಳಾಗದೆ ನಿಜವಾದ ಹಿಂದೂಗಳಾಗಿ ಧರ್ಮಕ್ಕೆ ಧಕ್ಕೆ ಬಂದಾಗಲೆಲ್ಲ ತೀವ್ರವಾಗಿ ಪ್ರತಿಭಟಿಸಿ ಎಂದರು.
ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಬಿಗ್ ರಿಲೀಫ್, ಆರೋಪ ನಿಗದಿಗೆ ತಡೆ
ಭಾರತ ಹಲವು ಧರ್ಮಗಳ ತೊಟ್ಟಿಲಾಗಿದೆ. ಎಲ್ಲ ಧರ್ಮಗಳಿಗೂ ಆದಿ ಹಾಗೂ ಅಂತ್ಯವಿದೆ. ಆದರೆ, ಸನಾತನ ಹಿಂದೂ ಧರ್ಮಕ್ಕೆ ಈ ಎರಡೂ ಇಲ್ಲ. ಆರಂಭವಾಗಲಿ ಅಂತ್ಯವಾಗಲಿ ಇರುವುದಿಲ್ಲವೂ ಅದೇ ಸನಾತನ ಧರ್ಮ. ಹಿಂದೂ ಧರ್ಮ ಸನಾತನ ಏಕೆಂದರೆ ಕೃಷ್ಣ, ರಾಮ ಹುಟ್ಟುವ ಮುನ್ನವೂ ಹಿಂದೂ ಧರ್ಮವಿತ್ತು. ನಾವೆಲ್ಲ ಹಿಂದೂ ನಾವೆಲ್ಲ ಒಂದು, ವಿಶ್ವವೇ ನಮ್ಮ ಬಂಧು ಎಂಬ ತತ್ವವನ್ನು ನಂಬಿ ಬದುಕಬೇಕಿದೆ. ಸನಾತನ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ, ವೃತ್ತಿಯ ಆಧಾರದಲ್ಲಿ ವರ್ಣಾಶ್ರಮ ಪದ್ಧತಿ ಇದೆ. ಆದರೆ, ಧರ್ಮ ವಿಭಜಕರು ಇದನ್ನು ಜಾತಿಯ ಆಧಾರದಲ್ಲಿ ವಿಭಜಿಸುತ್ತಿದ್ದಾರೆ ಎಂದರು. ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಮಕ್ಕಳಲ್ಲಿ ಭಿತ್ತಿ. ಇದರಿಂದ ಮಾತ್ರ ಧರ್ಮದ ಉಳಿವು ಸಾಧ್ಯ ಎಂದರು.
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ಹಿಂದೂ ದೇಶದಲ್ಲಿ ನಾವು ಪೂಜಿಸುವ ಗೋಮಾತೆಯನ್ನು ರಕ್ಷಿಸುವಂತೆ ಗೋಗರೆಯುವಂತಹ ದುರದೃಷ್ಟ ಸ್ಥಿತಿ ಬಂದಿರುವುದು ವಿಷಾದನೀಯ. ದೇಶದ ಸಂಸ್ಖೃತಿ, ಆಚಾರ, ಆರ್ಥಿಕತೆ ನಿಂತಿರುವುದು ಗೋವುಗಳ ಮೇಲೆ. ಗೋವುಗಳಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿವೆ ಎಂದು ಹಿಂದೂಗಳು ನಂಬಿದ್ದಾರೆ. ಅಂತಹ ಗೋವುಗಳನ್ನು ನಮ್ಮೆದುರು ಕಡಿದು ತಿನ್ನುತ್ತಿದ್ದರೂ ನಾವು ದನಿ ಎತ್ತದಿದ್ದರೆ ನಾವು ಬದುಕಿರುವುದೇ ವ್ಯರ್ಥ. ಗೋಮಾಂಸದ ಅಂಗಡಿ ಮುಂದೆ ಹಂದಿ ಮಾಂಸದ ಅಂಗಡಿ ತೆರೆಯುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದರು.
ಹಿಂದೂ ಧರ್ಮ ಇಂದು ತೀರ ಅಪಾಯದಲ್ಲಿದೆ. ನಾವೇ ನಿರ್ಮಿಸಿದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಪರಿಸ್ಥಿತಿ ತೀವ್ರ ಅಸಹನೀಯವಾಗಿದೆ. ಪಕ್ಕದಲ್ಲೇ ನೂರು ಕೋಟಿ ಹಿಂದೂಗಳಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿರುವುದು ತೀರ ಬೇಸರದ ಸಂಗತಿ. ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿಲುವಿಗೆ ಬಾರದಿರುವುದು ತೀವ್ರ ಕಳವಳಕಾರಿ. ನಾವು ನಮ್ಮ ಧರ್ಮ ನಿರ್ಲಕ್ಷಿಸಿದರೆ ಬಾಂಗ್ಲಾ ಹಿಂದೂಗಳು ಎದುರಿಸುತ್ತಿರುವ ಸಮಸ್ಯೆಯನ್ನು ನಾವು ಎದುರಿಸಬೇಕಿದೆ. ಆದ್ದರಿಂದ, ಧರ್ಮದ ಉಳಿವಿಗಾಗಿ ಈಗಲೇ ಜಾಗ್ರತರಾಗಬೇಕಿದೆ ಎಂದರು.
ಪೆನ್‌ಡ್ರೈವ್ ಹಂಚಿ ಸಂಸದರಾಗಿದ್ದೀರಿ, ಹಾಸನಕ್ಕೆ ನಿಮ್ಮ ಕೊಡುಗೆ ಏನು?: ಶ್ರೇಯಸ್ ವಿರುದ್ಧ ಸೂರಜ್
ತಮ್ಮ ಹಿತಕ್ಕಾಗಿ ಕಾಫಿ ತೋಟದ ಮಾಲೀಕರು ಬಾಂಗ್ಲಾ ನುಸುಳುಕೋರರಿಗೆ ಆಶ್ರಯ ನಿಡುತ್ತಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಇಂದು ದೇಶದ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಬದುಕುವುದು ಕಷ್ಟಕರವಾಗಿದೆ. ಇನ್ನು ಹಿಂದೂಗಳು ಜಾಗೃತರಾಗದಿದ್ದರೆ ಇಡೀ ದೇಶವೇ ಇಸ್ಲಾಮೀಕರಣಗೊಳ್ಳವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ದೇಶವನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ ಎಂಬ ವೇದಾಂತದ ಮಾತುಗಳನ್ನು ತ್ಯಜಿಸಿ. ಬಾಂಗ್ಲಾ, ಪಾಕಿಸ್ತಾನ, ಅಪಘಾನಿಸ್ಥಾನ ದೇಶಗಳು ಸಹ ಹಿಂದೂ ರಾಷ್ಟ್ರವಾಗಿದ್ದವು, ಇಂದು ಏನಾಗಿವೆ ಎಂಬುದು ನೆನಪಿರಲಿ ಎಂದರು. ಹಿಂದೂಗಳ ಪಾಲಿನ ಆಸ್ತಿಗೆ ಕಂಟಕವಾಗಿರುವ ವಕ್ಫ್ ಬೋರ್ಡ್ ರದ್ದಿಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಹೋರಾಟ ಹಮ್ಮಿಕೊಳ್ಳುವ ಅಗತ್ಯವಿದೆ. ಹಿಂದೂಗಳು ಸುರಕ್ಷರಾಗಿದ್ದರೆ ದೇಶ ಸುರಕ್ಷವಾಗಿರಲಿದೆ ಎಂದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಮುಖ್ಯ ರಸ್ತೆಯಲ್ಲಿ ವಿವಿಧ ಕಲಾತಂಡಗಳ ಜೊತೆ ಸಾವಿರಾರು ಜನರು ಶೋಭಯಾತ್ರೆಯಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಶಾಸಕ ಸಿಮೇಂಟ್ ಮಂಜು, ಹಿಂದೂ ಮುಖಂಡರಾದ ರಘು, ಹುರುಡಿ ಪ್ರಶಾಂತ್, ಕಟ್ಟೆಗದ್ದೆ ನಾಗರಾಜ್, ಮದನ್, ಗಂಗಧಾರ್, ಪುನೀತ್ ಬನ್ನಹಳ್ಳಿ ಮುಂತಾದವರಿದ್ದರು.