'ಎಚ್ ಡಿ ರೇವಣ್ಣ ಜೊತೆಗೆ ಸಿದ್ದರಾಮಯ್ಯ ಸಖತ್ ಕ್ಲೋಸ್ '

Kannadaprabha News   | Asianet News
Published : Dec 20, 2020, 07:41 AM IST
'ಎಚ್ ಡಿ ರೇವಣ್ಣ ಜೊತೆಗೆ ಸಿದ್ದರಾಮಯ್ಯ  ಸಖತ್ ಕ್ಲೋಸ್ '

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್ಡಿಕೆ ಸಂಬಂಧ ಯಾವಾಗಲೂ ಚೆನ್ನಾಗಿಲ್ಲ. ಆದರೆ ರೇವಣ್ಣ ಸಿದ್ದರಾಮಯ್ಯ ಸಖತ್ ಕ್ಲೋಸ್... ಎನಿದು..?

ಮೈಸೂರು (ಡಿ.20):  ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರನ್ನು ಮನಸ್ಸು ಪೂರ್ತಿಯಾಗಿ ಮುಖ್ಯಮಂತ್ರಿ ಮಾಡಿರಲಿಲ್ಲ. ಇದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ರೇವಣ್ಣ ಮತ್ತು ಸಿದ್ದರಾಮಯ್ಯ ಮೊದಲಿನಿಂದಲೂ ಚೆನ್ನಾಗಿದ್ದಾರೆ. ಆದರೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ರಾಜಕೀಯವಾಗಿ ಚೆನ್ನಾಗಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಟೀಕೆಗೆ ತುಸು ಖಾರವಾಗಿಯೇ ಉತ್ತರಿಸಿರುವ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯಎಂದು ಆರೋಪಿಸಿದ ಅವರು ಭಾಷೆಯ ಮೇಲೆ ಹಿಡಿತ ಇರಬೇಕು. ನೀವು ಏಕವಚನ ಪ್ರಯೋಗಿಸಿದರೆ ಬೇರೆಯವರು ಅದೇ ಮಾಡುತ್ತಾರೆ ಎಂದರು.

ಆ ನಾಯಕನನ್ನು ಭೇಟಿ ಮಾಡಿದ ಸಾ.ರಾ.ಮಹೇಶ್ : ಏನಿದು ಕುತೂಹಲದ ರಾಜಕೀಯ..? .

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹೋಟೆಲ್‌ನಿಂದ ಆಡಳಿತ ನಡೆಸುತ್ತಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಖಾಲಿ ಮಾಡದ್ದೇ, ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹೋಟೆಲ್‌ನಲ್ಲಿ ಉಳಿಯಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಸಾ.ರಾ.ಮಹೇಶ್‌ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹೋಟೆಲ್‌ನಿಂದ ಆಡಳಿತ ನಡೆಸುತ್ತಿದ್ದರು ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ನಿವಾಸ ಖಾಲಿ ಮಾಡಿರಲಿಲ್ಲ. ಜೆ.ಪಿ.ನಗರದ ಮನೆ ಅವರಿಗೆ ದೂರವಾಗಿತ್ತು. ಅದಕ್ಕಾಗಿ ಹೊಟೇಲ್‌ಗೆ ಹೋದರು. ಕುಮಾರಸ್ವಾಮಿ ವಿಧಾನಸೌಧಕ್ಕೆ ಬರುತ್ತಿರಲಿಲ್ಲವೇ? ವಿಶ್ರಾಂತಿ ಪಡೆಯಲು ಹೊಟೇಲ್‌ಗೆ ಹೋಗುವುದು ತಪ್ಪಾ ಎಂದು ಪ್ರಶ್ನಿಸಿದರು. ನೀವು ಹೊಟೇಲ್‌ನಲ್ಲಿ ಎಂದೂ ಉಳಿದಿಲ್ಲವೇ ಎಂದು ಮರುಪ್ರಶ್ನೆ ಎಸೆದರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ