ಭೇರ್ಯ (ಜು.28): ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕ ಸಾ.ರಾ. ಮಹೇಶ್ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಶಾಸಕ ಸಾ.ರಾ.ಮಹೇಶ್ ಮಾತನಾಡಿ, ನನ್ನ ಮತ್ತು ಬಿ.ಎಸ್. ಯಡಿಯೂರಪ್ಪ ಅವರದ್ದು ಸುದೀರ್ಘ 25 ವರ್ಷಗಳ ಒಡನಾಟ, ಹಾಗಾಗಿ ಭೇಟಿ ಮಾಡಿದೆ. 20 ವರ್ಷಗಳು ಅವರ ಜೊತೆ ಇದ್ದೆ, ಪಕ್ಷ ಬೇರೆಯಾದರೂ ಅವರ ನಮ್ಮ ಸಂಬಂಧ ಬಹಳ ಚೆನ್ನಾಗಿತ್ತು. ನನ್ನ ಕ್ಷೇತ್ರಕ್ಕೆ ಸಾಕಷ್ಟುಅನುದಾನ ನೀಡಿದ್ದಾರೆ. ಅವರು ಮುಖ್ಯಮಂತ್ರಿ ಇದ್ದಾಗ ವಿಶೇಷವಾಗಿ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು.
ಅನಿವಾರ್ಯವಾಗಿ ಅಕ್ಕಪಕ್ಕ ಕುಳಿತ ಬದ್ಧ ವೈರಿಗಳು: ಆ ಪ್ರಸಂಗ ಹೇಗಿತ್ತು ನೋಡಿ
ಇತ್ತೀಚಿಗೆ ಹಾಸನ-ಮೈಸೂರು ಹೆದ್ದಾರಿ ಸಂಬಂಧ ಬಿಳಿಕೆರೆಯಿಂದ ಗಡಿಭಾಗವಾದ ದೊಡ್ಡಹಳ್ಳಿವರೆವಿಗೆ 375 ಕೋಟಿ ವೆಚ್ಚದ ರಸ್ತೆ ವಿಸ್ತರಣೆಗೆ ಅನುದಾನ ಬಿಡುಗಡೆ ಮಾಡಿದ್ದರು, ನನ್ನ ಕ್ಷೇತ್ರದ ಲೋಕೋಪಯೋಗಿ ಇಲಾಖೆಯ 80 ಕೋಟಿ, ಪಂಚಾಯತ್ ರಾಜ್ ಇಲಾಖೆಯ 10 ಕೋಟಿ ಅನುದಾನ ತಡೆ ಹಿಡಿದಿದ್ದನ್ನು ಇತ್ತೀಚಿಗೆ ಹಣವನ್ನು ಬಿಡುಗಡೆ ಮಾಡಿದರು. ರಾಜ್ಯದ ಪ್ರಭಾವಿ ನಾಯಕರು ಮತ್ತು ಮುಖ್ಯಮಂತ್ರಿಗಳಾಗಿದ್ದವರು. ಯೋಗ ಕ್ಷೇಮ ವಿಚಾರಿಸಿ ಕೃತಜ್ಞತೆ ಅರ್ಪಿಸಿದೆ ಎಂದು ತಿಳಿಸಿದರು.