ಮುಂದೆ ಜೆಡಿಎಸ್ ಗೆ ಒಳ್ಳೆ ಭವಿಷ್ಯ ಇದೇ : ಮುಗಿದೇ ಹೋಯ್ತು ಎಂದವರಿಗೆ ಉತ್ತರ ಸಿಗಲಿದೆ

By Suvarna News  |  First Published Jul 27, 2021, 3:58 PM IST
  • ಬಿಜೆಪಿಯ ಹೊಸ ಸಿಎಂ ಆಯ್ಕೆ ವಿಚಾರವು  ಅವರ ಪಕ್ಷದ ಆಂತರಿಕ ವಿಚಾರ
  • ಕಾಂಗ್ರೆಸ್ ಮುಖಂಡರಿಗೆ ಟಾಂಗ್ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ
  • ಜೆಡಿಎಸ್‌ಗೆ ಒಳ್ಳೆಯ ದಿನಗಳು ಬರುವ ಭರವಸೆ ಮಾತನಾಡಿದ ಎಚ್‌ಡಿಕೆ

ರಾಮನಗರ (ಜು.27): ಬಿಜೆಪಿಯ ಹೊಸ ಸಿಎಂ ಆಯ್ಕೆ ವಿಚಾರವು  ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

ರಾಮನಗರದಲ್ಲಿಂದು ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಈಗಾಗಲೇ ಪ್ರಧಾನಿ ಮೋದಿಯವರು ರಾಜ್ಯದ ಬಗ್ಗೆ ಮಾಹಿತಿ ಪಡೆದಿರುತ್ತಾರೆ. ಹಾಗಾಗಿ ಯಾರು ಸಿಎಂ ಆಗಬೇಕೆಂದು ಅವರ ಪಕ್ಷ ನಿರ್ಧಾರ ಮಾಡಲಿದೆ ಎಂದು ಹೇಳಿದರು.  

Tap to resize

Latest Videos

ಇನ್ನು ರಾಜೀನಾಮೆ ನೀಡಿದ ಯಡಿಯೂರಪ್ಪ ಪರವಾಗಿ ಕಾಂಗ್ರೆಸ್ ನಾಯಕರ ಬ್ಯಾಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ. ಇದು ಒಂದು ಸಮುದಾಯದ ಓಲೈಕೆಗಾಗಿ ಮಾಡುತ್ತಿರುವ ಪ್ರಯತ್ನ ಎಂದರು. 

'ಸ್ಪಷ್ಟ ಬರದಿದ್ದರೂ ಬರದಿದ್ರೂ 2023ಕ್ಕೆ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ'

ಇನ್ನು ಈಗಾಗಲೇ ಮುಂದಿನ ಸಿಎಂ ಸ್ಥಾನಕ್ಕೆ ಟವೆಲ್ ಹಾಕಿರುವವರು  ಈಗಿದ್ದ ಸಿಎಂ ಭ್ರಷ್ಟರು, ಮುಂದೆ ಬರುವವರು ಭ್ರಷ್ಟರೇ ಎಂದು ಹೇಳ್ತಾರೆ.
ಆದರೆ ಮತ್ತೊಬ್ಬರು ಯಡಿಯೂರಪ್ಪ ಪರವಾಗಿ ಮಾತನಾಡುತ್ತಾರೆ. ಆದರೆ ಈಗ ಅವರ ಪರವಾಗಿ ಮಾತನಾಡುತ್ತಿರುವುದು ಸಮುದಾಯದ ಓಲೈಕೆಗಾಗಿ ಅಷ್ಟೇ  ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.

ಈ ಬೆಳವಣಿಗೆಯಲ್ಲಿ ಜೆಡಿಎಸ್ ಲಾಭದ ಬಗ್ಗೆ ಚಿಂತನೆ ಮಾಡಲ್ಲ. ಜನರ ಪರವಾಗಿ ಸರ್ಕಾರ ಚಿಂತಿಸಲಿ ಎಂದು ಹೇಳುತ್ತೇನೆ. ಈ ಬೆಳವಣಿಗೆಯಿಂದ ಜನರಿಗೆ ಪೆಟ್ಟಾಗಬಾರದು ಎಂದರು. 

ಒಳ್ಳೆ ಭವಿಷ್ಯ :  ಮುಂದೆ ಜೆಡಿಎಸ್ ಗೆ ಒಳ್ಳೆಯ ಭವಿಷ್ಯ ಇದೇ ಎಂದು ವಿಶ್ವಾಸ ಇದೆ. ನಾನು ಎರಡು ಬಾರಿಯೂ ಅದೃಷ್ಟದಿಂದಲೇ ಸಿಎಂ ಆದೇ ಜನರ ಆಶೀರ್ವಾದದಿಂದ ನಾನು ಸಿಎಂ ಆಗಲಿಲ್ಲ.  ಆದರೆ ಮುಂದೆ ನನಗೆ ವಿಶ್ವಾಸವಿದೆ, ತಾಯಿ ಚಾಮುಂಡೇಶ್ವರಿ ನನಗೆ ಅಧಿಕಾರ ಕೊಡುತ್ತಾಳೆ.  ರಾಜ್ಯದ ಜನರ ಪರವಾಗಿ ಜೆಡಿಎಸ್ ಕೆಲಸ ಮಾಡಲಿದೆ. ಜೆಡಿಎಸ್ ಮುಗಿದೇ ಹೋಯ್ತು ಎನ್ನುವವರಿಗೆ ಮುಂದೆ ಉತ್ತರ ಸಿಗಲಿದೆ ಎಂದರು. 
 
ತಾಯಿ ಚಾಮುಂಡೇಶ್ವರಿ ಜೆಡಿಎಸ್ ಗೆ ಅಧಿಕಾರ ಕೊಡ್ತಾಳೆ ಎನ್ನುವ ವಿಶ್ವಾಸ ಇದೇ ಎಂದು  ಪತ್ನಿ ಅನಿತಾಕುಮಾರಸ್ವಾಮಿ ಜೊತೆಗೆ ದರ್ಶನ ಪಡೆದ ನಂತರ ಕುಮಾರಸ್ವಾಮಿ ಹೇಳಿದರು.

click me!