ಕುಕ್ಕೆ ಕ್ಷೇತ್ರಕ್ಕೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ದಂಪತಿ ಭೇಟಿ

By Kannadaprabha News  |  First Published Jul 12, 2020, 7:53 AM IST

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ನಾಗಾರಾಧನೆಯ ಪುಣ್ಯತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಶನಿವಾರ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದಿದ್ದಾರೆ.


ಸುಬ್ರಹ್ಮಣ್ಯ(ಜು.12): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ನಾಗಾರಾಧನೆಯ ಪುಣ್ಯತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಶನಿವಾರ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಭಗವಂತನ ಆಶೀರ್ವಾದ, ಮಕ್ಕಳ ಧೈರ್ಯ ಮತ್ತು ಪೋಷಕರಿಗೆ ಸರ್ಕಾರದ ಮೇಲೆ ಇದ್ದ ವಿಶ್ವಾಸದಿಂದ ಸುಲಲಿತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಪನ್ನವಾಗಿದೆ. ಎಲ್ಲ ಮಕ್ಕಳ ಪರವಾಗಿ ಶ್ರೀ ದೇವರ ದರುಶನ ಮಾಡಿದ್ದೇನೆ. ಅಲ್ಲದೆ ಅವರ ಭವಿಷ್ಯಕ್ಕೆ ಭಗವಂತನ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

Tap to resize

Latest Videos

ಸೋಂಕಿತರ ಹೆಚ್ಚಳ: ಒಂದೇ ದಿನ 90 ಮಂದಿಗೆ ವೈರಸ್‌

ಸುರೇಶ್‌ ಕುಮಾರ್‌ ಅವರ ಪತ್ನಿ ಸಾವಿತ್ರಿ ಸುರೇಶ್‌, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್‌, ಶ್ರೀಕುಮಾರ್‌ ಬಿಲದ್ವಾರ ಉಪಸ್ಥಿತರಿದ್ದರು.

ಶನಿವಾರ ಮುಂಜಾನೆ ಸಚಿವ ಸುರೇಶ್‌ ಕುಮಾರ್‌, ಪತ್ನಿ ಸಾವಿತ್ರಿ ಸುರೇಶ್‌ ಅವರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದರು. ಬಳಿಕ ಶ್ರೀ ದೇವರ ದರ್ಶನ ಮಾಡಿದ ಅವರು, ಮಹಾಪೂಜೆ ವೀಕ್ಷಿಸಿದರು. ಈ ಮೊದಲು ಆದಿಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಸ್ಥಳೀಯರಾದ ಶ್ರೀಕುಮಾರ್‌ ಬಿಲದ್ವಾರ ಇದ್ದರು. ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್‌ ಸಚಿವರನ್ನು ಸ್ವಾಗತಿಸಿದರು.

click me!