'ಶವಗಳ ಮೇಲೆ ಅಧಿಕಾರ ನಡೆಸುತ್ತಿರುವ ಯಡಿಯೂರಪ್ಪ ಸರ್ಕಾರ'

By Kannadaprabha News  |  First Published Sep 28, 2020, 12:12 PM IST

ಕೋವಿಡ್‌- 19 ರಾಜ್ಯಕ್ಕೆ ವಕ್ಕರಿಸಿ ಆರು ತಿಂಗಳ ಮೇಲಾಗಿದೆ. ತಾಲೂಕಿನಲ್ಲಿ ಉಸಿರಾಟದ ತೊಂದರೆಯಿಂದ ನಿತ್ಯವೂ ಜನರು ಮೃತಪಡುತ್ತಿದ್ದಾರೆ. ಆದರೆ ತಾಲೂಕಾಸ್ಪತ್ರೆಯಲ್ಲಿ ಇಂದಿಗೂ ಆಕ್ಸಿಜನ್‌ ಸೌಲಭ್ಯ ಕಲ್ಪಿಸಿಲ್ಲ. ರಾಜ್ಯ ಸರ್ಕಾರಕ್ಕೆ ಮಾನವೀಯತೆ ಅನ್ನುವುದಿದೆಯೇ ಎಂದು ಪ್ರಶ್ನಿಸಿದ ಎಸ್‌.ಆರ್‌.ಪಾಟೀಲ 


ಬ್ಯಾಡಗಿ(ಸೆ.28): ತಾಲೂಕಾಸ್ಪತ್ರೆಯಲ್ಲಿ ತಜ್ಞ ವೈದ್ಯರು(ಫಿಸಿಶಿಯನ್‌)ಸೇರಿದಂತೆ ಇಂದಿಗೂ ಸಮರ್ಪಕ ಸೌಲಭ್ಯಗಳಲ್ಲಿ ಇದರಿಂದ ಕೋವಿಡ್‌- 19ನಿಂದ ತಾಲೂಕಿನಲ್ಲಿ ನಿತ್ಯವೂ ಜನರು ಸಾವಿಗೀಡಾಗುತ್ತಿದ್ದಾರೆ. ಶವಗಳ ಮೇಲೆ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರ ಮಾನವೀಯತೆ ಕಳೆದುಕೊಂಡಿದೆ ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ರಾಜ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಆರೋಪಿಸಿದ್ದಾರೆ. 

ಭಾನುವಾರ ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌- 19 ರಾಜ್ಯಕ್ಕೆ ವಕ್ಕರಿಸಿ ಆರು ತಿಂಗಳ ಮೇಲಾಗಿದೆ. ತಾಲೂಕಿನಲ್ಲಿ ಉಸಿರಾಟದ ತೊಂದರೆಯಿಂದ ನಿತ್ಯವೂ ಜನರು ಮೃತಪಡುತ್ತಿದ್ದಾರೆ. ಆದರೆ ತಾಲೂಕಾಸ್ಪತ್ರೆಯಲ್ಲಿ ಇಂದಿಗೂ ಆಕ್ಸಿಜನ್‌ ಸೌಲಭ್ಯ ಕಲ್ಪಿಸಿಲ್ಲ. ರಾಜ್ಯ ಸರ್ಕಾರಕ್ಕೆ ಮಾನವೀಯತೆ ಅನ್ನುವುದಿದೆಯೇ ಎಂದು ಪ್ರಶ್ನಿಸಿದ್ದಾರೆ. 

Tap to resize

Latest Videos

ಸಾಲಬಾಧೆ ತಾಳಲಾರದೆ ರೈತರಿಬ್ಬರು ಆತ್ಮಹತ್ಯೆ

ಸ್ಥಳೀಯ ಶಾಸಕರಿಗೆ ಕೊರೋನಾ- 19 ಪಾಸಿಟಿವ್‌ ಎಂದು ವರದಿ ಬಂದ ಬಳಿಕ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಿದ್ದರೆ ಇಲ್ಲಿನ ಸರ್ಕಾರಿ ವೈದ್ಯರ ಬಗ್ಗೆ ಅಥವಾ ತಮ್ಮದೇ ಆರೋಗ್ಯ ವ್ಯವಸ್ಥೆಯ ಬಗ್ಗೆ ನಂಬಿಕೆ ಇರಲಿಲ್ಲವೇ ಎಂದು ಪ್ರಶ್ನಿಸಿದರು. 
 

click me!