ಕಾಳಿಮಠದ ಋಷಿಕುಮಾರ ಸ್ವಾಮೀಜಿ ಫುಲ್ ಗರಂ ಆಗಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು (ನ.12): ದತ್ತಮಾಲಾ ಅಭಿಯಾನಕ್ಕೆ ಇಂತಿಷ್ಟೇ ಜನ ಮಾತ್ರ ಬರಬೇಕೆಂದು ಜಿಲ್ಲಾಡಳಿತ ನಿಬಂಧನೆ ಹಾಕಿರುವುದು ಸರಿಯಲ್ಲ. ಇದು, ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಎಂದು ಕಾಳಿ ಮಠದ ಶ್ರೀ ಋುಷಿಕುಮಾರ ಸ್ವಾಮೀಜಿ ನುಡಿದರು.
ದತ್ತಮಾಲಾ ದಿನವನ್ನು ಇಡೀ ರಾಜ್ಯದ ಹಿಂದುಗಳ ಕಾಯುತ್ತಿದ್ದಾರೆ. ದತ್ತಪೀಠಕ್ಕೆ ಕಡಿಮೆ ಜನ ಬನ್ನಿ ಎಂದು ಜಿಲ್ಲಾಡಳಿತ ಹೇಳುವುದರಲ್ಲಿ ಅರ್ಥವಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.
undefined
ಕಳೆದ ವರ್ಷ ಶಾಸಕ ಸಿ.ಟಿ. ರವಿ ಅವರು ದತ್ತಾತ್ರೇಯ ವಿಗ್ರಹವನ್ನು ಬೀದಿಯಲ್ಲಿ ಇರಿಸಿದರು. ಆ ವಿಗ್ರಹವನ್ನು ಕಾಳಿಕದೇವಿ ಮಠದಲ್ಲಿ ಇಟ್ಟು ತ್ರಿಕಾಲ ಪೂಜೆ ಮಾಡುತ್ತಿದ್ದೇವೆ. ಈ ಬಾರಿಯೂ ಕೂಡ ದತ್ತಮಾಲಾ ಅಭಿಯಾನಕ್ಕೆ ಈಗಾಗಲೇ ಕರೆ ನೀಡಿದ್ದೇವೆ. ಕೋವಿಡ್ ನಿಯಂತ್ರಣ ಸಂಬಂಧ ಜಾರಿಗೆ ತಂದ ನಿಯಮಾವಳಿ ಪಾಲನೆಗೆ ನಾವು ಬದ್ಧ ಎಂದರು.
ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳ ಚುನಾವಣೆ ಪ್ರಚಾರ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಮೆರವಣಿಗೆಯಲ್ಲಿ ಕುಣಿದರು. ಫಲಿತಾಂಶ ದಿನ ಪಟಾಕಿ ಹೊಡೆದರು, ಅವರ ಮೇಲೆ ಯಾವುದೇ ನಿಯಂತ್ರಣ ಹೇರದೇ ಹಿಂದೂಗಳ ಹಬ್ಬಗಳ ಮೇಲೆ ನಿಯಂತ್ರಣ ಏಕೆಂದು ಪ್ರಶ್ನಿಸಿದರು.
ರಾಜಿನಾಮೆ ವಿವಾದ : ಬಿಜೆಪಿಯಲ್ಲಿ ಗೇಮ್ ಪ್ಲಾನ್ ಶುರು .
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಸಹ ಒಂದು. ಈ ಹಬ್ಬದಲ್ಲಿ ಪಟಾಕಿ ಹೊಡೆಯಬಾರದು ಎಂದು ಸರ್ಕಾರ ಹೇಳಿದೆ. ಹೀಗೆ ಹಿಂದುಗಳ ಮೇಲೆ ನಿಯಂತ್ರಣ ಹೇರುತ್ತಾ ಹೋದರೆ ಈ ಸರ್ಕಾರ ಉಳಿಯೋದಿಲ್ಲ. ಉತ್ತರಪ್ರದೇಶದಲ್ಲಿ ದೀಪಾವಳಿ ದಿನ 6 ಲಕ್ಷ ದೀಪ ಹಚ್ಚಲು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಅವರು ಕರೆ ನೀಡಿದ್ದಾರೆ ಎಂದ ಅವರು, ಮೊದಲು ರಕ್ತ ಇಲ್ಲದ ಬಕ್ರೀದ್, ನಿಶಬ್ದವಾದ ಶುಕ್ರವಾರ ಆಚರಣೆ ಆಗಲಿ. ಆಗ ಶಬ್ಧ ಇಲ್ಲದ ಪಟಾಕಿಯ ದೀಪಾವಳಿ ಆಚರಿಸೋಣ ಎಂದು ಹೇಳಿದರು.
ಹಿತ್ತಲ ಬಾಗಿಲಿನಿಂದ ಬಂದು ತಿಂದು ಹೋಗುವವರು ಬಿಜೆಪಿಯವರು, ತಿಂದಿರುವುದು ಅರಗುವವರೆಗೂ ಅಲ್ಲೇ ಇರುತ್ತಾರೆ. ಮತ್ತೆ ಹೊಟ್ಟೆಹಸುವಾದಾಗ ಇಲ್ಲಿಗೆ ಬರುತ್ತಾರೆ. ಬಿಜೆಪಿಯವರಿಗೆ ರಾಮಮಂದಿರ ಕೈತಪ್ಪಿ ಹೋಯ್ತು, ಈಗ ಕಾವೇರಿ, ದತ್ತಪೀಠ ವಿವಾದ ಜೀವಂತವಾಗಿರಬೇಕು ಎಂಬುದು ಅವರ ಆಕಾಂಕ್ಷೆಯಾಗಿದೆ ಎಂದು ಋುಷಿಕುಮಾರ ಶ್ರೀಗಳು ಹೇಳಿದರು.