'ಬಿಜೆಪಿಯಲ್ಲಿ ಸಾಮಾನ್ಯರೂ ಉನ್ನತ ಹುದ್ದೆಗೇರಲು ಸಾಧ್ಯ, ಪ್ರಧಾನಿ ಮೋದಿನೇ ನಿದರ್ಶನ'

By Kannadaprabha News  |  First Published Nov 12, 2020, 12:29 PM IST

ಬಿಜೆಪಿ ಕಾರ್ಯಕರ್ತರ ಪ್ರಾಮಾಣಿಕ ಕೆಲಸದಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿದಿದೆ| ಸಾಮಾನ್ಯ ಕಾರ್ಯಕರ್ತರು ಪರಿಶ್ರಮದಿಂದ ಉನ್ನತ ಹುದ್ದೆಗೆ ಏರಬಹುದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನಿದರ್ಶನ ಎಂದ ಶಾಸಕ ಹಾಲಪ್ಪ ಆಚಾರ್‌| 


ಕುಕನೂರು(ನ.12): ವಿಶ್ವದಲ್ಲಿಯೇ 15 ಕೋಟಿಗೂ ಮಿಗಿಲಾದ ಕಾರ್ಯಕರ್ತರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ ಮಾತ್ರ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದ್ದಾರೆ.

ಪಟ್ಟಣದ ವಿದ್ಯಾನಂದ ಗುರುಕುಲ ವಿಶ್ವಸ್ಥ ಮಂಡಳಿಯ ಆಶ್ರಯದಲ್ಲಿ ಬಿಜೆಪಿ ಯಲಬುರ್ಗಾ ವಿಧಾನಸಭಾ ಕ್ಷೇತ್ರ ಹಾಗೂ ಯಲಬುರ್ಗಾ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಪ್ರಾಮಾಣಿಕ ಕೆಲಸದಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಸಾಮಾನ್ಯ ಕಾರ್ಯಕರ್ತರು ಪರಿಶ್ರಮದಿಂದ ಉನ್ನತ ಹುದ್ದೆಗೆ ಏರಬಹುದು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನಿದರ್ಶನ ಎಂದರು.

Tap to resize

Latest Videos

2017ರಲ್ಲಿ ಯಲಬುರ್ಗಾ ಮಂಡಲದಲ್ಲಿ ಪ್ರಶಿಕ್ಷಣ ವರ್ಗವು ಯಶಸ್ವಿಯಾಗಿ ಮುಗಿಸಿಕೊಟ್ಟಿದ್ದೇವೆ. ಈ ಬಾರಿ ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಿಂದ ಈ ಬಾರಿಯೂ ಯಶಸ್ವಿಗೊಳಿಸಲಾಗುವುದು. ಅದಕ್ಕೆ ಕಾರ್ಯಕರ್ತರ ಸಹಕಾರ ಮುಖ್ಯ ಎಂದರು.

ಕೊಪ್ಪಳ: ಭುಗಿಲೆದ್ದ ಮಾಜಿ ಸಚಿವ ತಂಗಡಗಿ ಸಹೋದರನ ನಿವೇಶನ ವಿವಾದ

ಯಲಬುರ್ಗಾ ಬಿಜೆಪಿ ಮಂಡಲದ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಈಶಪ್ಪ ಹಿರೇಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಹಲಗೇರಿ, ಹಿರಿಯ ಮುಖಂಡ ಡಾ. ಕೆ.ಜಿ. ಕುಲಕರ್ಣಿ, ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣವರ್‌, ಕೊಟ್ರೇಶ ಸಿರಿಗೇರಿ, ಅಪ್ಪಣ್ಣ ಪದಕಿ, ವಿ.ಎಂ. ಭೂಸನೂರಮಠ, ಸಿ.ಎಚ್‌. ಪಾಟೀಲ, ಸಿದ್ದು ಉಳ್ಳಾಗಡ್ಡಿ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪ್ರಭುಗೌಡ ಪಾಟೀಲ, ರಮೇಶ ಕೆಂಚರೆಡ್ಡಿ, ಬಸವರಾಜ ಹಾಳಕೇರಿ, ಕರಿಬಸಯ್ಯ ಬಿನ್ನಾಳ ಮೊದಲಾದವರು ಉಪಸ್ಥಿತರಿದ್ದರು.
 

click me!