ನಾನು ಗಂಡ್ಸು ಅಂತ ಪಾಸಿಟಿವ್ ಆಗಿ ತಗೊಳ್ಳಿ: ರಮೇಶ್ ಜಾರಕಿಹೊಳಿ‌ ಪರ ಸ್ವಾಮೀಜಿ ಬ್ಯಾಟಿಂಗ್‌

By Suvarna News  |  First Published Mar 11, 2021, 11:11 AM IST

ವೈಯಕ್ತಿಕ ವಿಚಾರ ಇಟ್ಟುಕೊಂಡು ಒಬ್ಬರನ್ನ ತೆಜೋವಧೆ ಮಾಡ್ತಿನಿ, ರಾಜಕೀಯವಾಗಿ ಮುಗಿಸ್ತಿನಿ ಅನ್ನೋದು ನಿಮ್ಮ ಭ್ರಮೆ| ಇನ್ನೊಬ್ಬರ ತೇಜೋವಧೆ ಮಾಡಿದರೆ ನಿನ್ನ ತೇಜೋವಧೆ ಮಾಡಲು ಭಗವಂತನಿದ್ದಾನೆ| ನಾವು ಅಜ್ಜಯ್ಯನವರು ಕೂತು ಹೇಳ್ತಿದ್ದೇವೆ ಮತ್ತೆ ನಿಮಗೆ ಯಡಿಯೂರಪ್ಪ ಸಚಿವ ಸ್ಥಾನ ಕೊಡ್ತಾರೆ. ಇನ್ನು ಎರಡೇ ತಿಂಗಳಿನಲ್ಲಿ ನಿಮಗೆ ಮತ್ತೆ ಮಂತ್ರಿ ಪದವಿ ಸಿಗುತ್ತೆ ತಲೆ ಕಡಿಸಿಕೊಳ್ಳಬೇಡಿ: ಋಷಿಕುಮಾರ್ ಸ್ವಾಮೀಜಿ| 


ಬೆಳಗಾವಿ(ಮಾ.11): ಕಂಡವರ ಬೆಡ್ ರೂಮಿನಲ್ಲಿ ಕ್ಯಾಮರಾ ಇಡುವ ಅಧಿಕಾರ ಕೊಟ್ಟವರು ಯಾರು?, ಬೆಡ್ ರೂಮಿನ ಕಿಡಕಿ, ಬಾಗಿಲು, ಗೋಡೆ, ಮಂಚಕ್ಕೆ ಮಾತು ಬಂದಿದ್ದರೆ ವರ್ಲ್ಡ್ ವಾರ್‌ಗಳೇ ನಡೆದು ಹೋಗುತ್ತಿದ್ದವು. ಅವರರವರ ವೈಯಕ್ತಿಕ ಜೀವನ ಅವರವರಲ್ಲಿ ಇರುತ್ತದೆ. ನನ್ನ ತಂದೆಗೂ ವೈಯಕ್ತಿಕ ಜೀವನವಿದೆ, ನನ್ನ ತಾಯಿಗೂ ವೈಯಕ್ತಿಕ ಜೀವನವಿದೆ. ಅವರ ವೈಯಕ್ತಿಕ ಜೀವನ ನಂಗೆ ಬೇಕಾಗಿಲ್ಲ ಸರ್ ನನಗೆ ತಂದೆ ತಾಯಿ ಮಾತ್ರ ಬೇಕು ಎಂದು ಹೇಳುವ ಮೂಲಕ ಮಾಜಿ ರಮೇಶ್ ಜಾರಕಿಹೊಳಿ‌ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಿಮಠದ ಋಷಿಕುಮಾರ್ ಸ್ವಾಮೀಜಿ ಅವರು ಸಾಹುಕಾರ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ.  

ಜಿಲ್ಲೆ ಗೋಕಾಕ್ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ನಾನು ಕಳೆದ ಮೂರು ದಿನಗಳಿಂದ ಗೋಕಾಕ್‌ನಲ್ಲಿ ಸರ್ವೇ ಮಾಡಿದ್ದೇನೆ. ರಮೇಶ್ ಅವರ ವೈಯಕ್ತಿಕ ಜೀವನ ಇಲ್ಲಿ ಯಾರಿಗೂ ಬೇಕಾಗಿಲ್ಲ, ಜನರಿಗೆ ಬೇಕಾಗಿರುವುದು ಅವರ ನಾಯಕತ್ವ. ಜಾರಕಿಹೊಳಿಯವರು ಇದರ ಬಗ್ಗೆ ತಲೆಕಡೆಸಿಕೊಳ್ಳಬಾರದು. ಒಂದು ವೇಳೆ ಅದು ನಿಜವೇ ಆಗಿದ್ದರೂ ಸಹ ಅಹಂ ಅನ್ನಿ ಸರ್ ಹೊರಗೆ ಬನ್ನಿ ಎಂದು ಹೇಳಿದ್ದಾರೆ. 

Tap to resize

Latest Videos

ರಾಸಲೀಲೆ ಸೀಡಿ ಹಿಂದಿ​ನ ಮ​ಹಾನ್‌ ನಾಯ​ಕ ಯಾರು..?

ಇರೋದೆ ಇದೆ ಅಂದ ಮೇಲೆ ಯಾಕೆ ಹೆದರಬೇಕು, ನಿಮ್‌ ದುಡ್ಡು ಸರ್ ನಿಮ್ ಹೆಂಡ, ಚರಂಡಿ ಕ್ಲೀನ್ ಮಾಡಿಸಿಲ್ವಾ? ಲೈಟ್ ಹಾಕಿಸಿಲ್ವಾ? ಅದನ್ ಕೇಳುವ ಅಧಿಕಾರ ನಮಗಿದೆ ಸರ್. ನಿಮ್ಮ ವೈಯಕ್ತಿಯ ವಿಷಯ ನಮಗೆ ಬೇಡ ಸರ್. ಯಾರ ವೈಯಕ್ತಿಕ ಜೀವನ ಬಗ್ಗೆ ಯಾರಿಗೂ ಮಾತನಾಡುವ ರೈಟ್ಸ್ ಇಲ್ಲ.  ಬಾಯಿಗೆ ಬಂದಂಗೆ ಮಾತಾಡ್ತಿದ್ದಿರಿ ನೀವು ಅದು ನಿಮ್ಮ ಯೋಗ್ಯತೆ ತೋರಿಸುತ್ತೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ‌ ವಿರೋಧಿಗಳ ವಿರುದ್ಧ ಋಷಿಕುಮಾರ್ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ. 

ವೈಯಕ್ತಿಕ ವಿಚಾರ ಇಟ್ಟುಕೊಂಡು ಒಬ್ಬರನ್ನ ತೆಜೋವಧೆ ಮಾಡ್ತಿನಿ, ರಾಜಕೀಯವಾಗಿ ಮುಗಿಸ್ತಿನಿ ಅನ್ನೋದು ನಿಮ್ಮ ಭ್ರಮೆಯಾಗಿದೆ ಅಷ್ಟೇ, ಇನ್ನೊಬ್ಬರ ತೇಜೋವಧೆ ಮಾಡಿದರೆ ನಿನ್ನ ತೇಜೋವಧೆ ಮಾಡಲು ಭಗವಂತನಿದ್ದಾನೆ. ಸಿಬಿಐ ತನಿಖೆನೋ? ಸಿಒಡಿ ತನಿಖೆಯೋ ಅದು ನಮಗೆ ಬೇಡ ಸರ್. ನಾವು ಅಜ್ಜಯ್ಯನವರು ಕೂತು ಹೇಳ್ತಿದ್ದೇವೆ ಮತ್ತೆ ನಿಮಗೆ ಯಡಿಯೂರಪ್ಪ ಸಚಿವ ಸ್ಥಾನ ಕೊಡ್ತಾರೆ. ಇನ್ನು ಎರಡೇ ತಿಂಗಳಿನಲ್ಲಿ ನಿಮಗೆ ಮತ್ತೆ ಮಂತ್ರಿ ಪದವಿ ಸಿಗುತ್ತೆ ತಲೆ ಕಡಿಸಿಕೊಳ್ಳಬೇಡಿ. ಹೌದು ಬಿಡು ಸ್ವಾಮೀ ನಾನು ಗಂಡ್ಸು ಅಂತ ನೆಗೆಟಿವ್ ಆಗಿರೋದನ್ನ ಪಾಸಿಟಿವ್ ಆಗಿ ತಗೊಳ್ಳಿ ಎಂದು ರಮೇಶ್‌ ಜಾರಕಿಹೊಳಿ ಅವರಿಗೆ ಋಷಿಕುಮಾರ್ ಸ್ವಾಮೀಜಿ ಹೇಳಿದ್ದಾರೆ. 
 

click me!