ಡಿಜಿಟಲ್ ಗ್ರಂಥಾಲಯದಿಂದ ಗ್ರಾಮೀಣ ಮಕ್ಕಳಿಗೆ ಅನುಕೂಲ

By Kannadaprabha NewsFirst Published Mar 8, 2024, 12:04 PM IST
Highlights

ಗ್ರಾಮೀಣ ಭಾಗದ ಮಕ್ಕಳಿಗೆ ಡಿಜಿಟಲ್ ಗ್ರಂಥಾಲಯದಿಂದ ಅನುಕೂಲವಾಗಲಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

 ಗುಬ್ಬಿ : ಗ್ರಾಮೀಣ ಭಾಗದ ಮಕ್ಕಳಿಗೆ ಡಿಜಿಟಲ್ ಗ್ರಂಥಾಲಯದಿಂದ ಅನುಕೂಲವಾಗಲಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಎಂ ಎನ್ ಕೋಟೆಯಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಗ್ರಂಥಾಲಯ ಕಟ್ಟಡಕ್ಕೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯಗಳ ಅವಶ್ಯಕತೆ ಇದೆ. ತಾಲೂಕಿನಲ್ಲಿ ಗ್ರಂಥಾಲಯಗಳು ಬಹುತೇಕ ಬಾಡಿಗೆ ಕಟ್ಟಡದಲ್ಲಿ ಇವೆ. ಸ್ವಂತ ಕಟ್ಟಡಗಳು ಇಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಗಳಲ್ಲಿ ಸ್ವಂತ ಜಾಗದಲ್ಲಿ ಗ್ರಂಥಾಲಯಗಳು ನಿರ್ಮಾಣವಾಗಬೇಕು ಎಂದರು.

ಇದೇ ಸಂಧರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಡುಗೆ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಸವಿದರು. ನಂತರ ಶಾಲೆಯ ಶಿಕ್ಷಕರು ಅಡುಗೆ ಕೋಣೆ ಇಲ್ಲ ಎಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಡುಗೆ ಕೋಣೆ ನಿರ್ಮಾಣ ಮಾಡಿಕೊಡುತ್ತೇನೆ ಎಂದು ತಿಳಿಸಿದರು. ನಮ್ಮ‌ ಶಾಲೆಯಲ್ಲಿ ಸುಮಾರು ನೂರು ಮಕ್ಕಳು ಇದ್ದು ಇಲ್ಲಿ ಮೂರು ಜನ ಶಿಕ್ಷಕರು‌ ಮಾತ್ರ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಶಿಕ್ಷಕರು ಮನವಿ ಸಲ್ಲಿಸಿದಾದ ತಕ್ಷಣ ಶಾಸಕರು ಬಿಇಓ ಲೇಪಾಕ್ಷಪ್ಪ ಅವರಿಗೆ ದೂರವಾಣಿ ಮೂಲಕ ಪೋನ್ ಮಾಡಿ ತಕ್ಷಣ ಹೆಚ್ಷುವರಿ ಶಿಕ್ಷರನ್ನು ನೇಮಕಮಾಡಿ ಮಕ್ಕಳ ಕಲಿಕೆಗೆ ತೊಂದರೆ ಅಗದಂತೆ ನೋಡಿಕೊಳಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದರಾಮಣ್ಣ ,ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಯೋಗೀಶ್, ದೀಲೀಪ್ ಕುಮಾರ್ , ಯಶೋಧ ಲೋಕೇಶ್, ಸಿದ್ದಗಂಗಮ್ಮ ಕಲ್ಲೇಶ್ ಸದಸ್ಯರಾದ ಸಿದ್ದಗಂಗಯ್ಯ, ರವೀಶ್, ಉಮಾ ತೇಜಯ್ಯ, ದಿವ್ಯ, ಭವ್ಯ, ಕಾಂತರಾಜು, ಪಿಡಿಓ ಕೃಷ್ಣಮೂರ್ತಿ ಮುಖಂಡರಾದ ನಾಗರಾಜಗುಪ್ತ , ಪಾಂಡುರಂಗಯ್ಯ ,ಶಿವಕುಮಾರ್ ,ಶಿವಪ್ಪ ಇದ್ದರು.

click me!