ಮಂಡ್ಯ: ಗಣೇಶ ಕೂರಿಸುವವರು ಪಾಲಿಸಲೇಬೇಕಾದ ನಿಯಮಗಳಿವು..!

Published : Aug 29, 2019, 09:55 AM ISTUpdated : Aug 29, 2019, 02:25 PM IST
ಮಂಡ್ಯ: ಗಣೇಶ ಕೂರಿಸುವವರು ಪಾಲಿಸಲೇಬೇಕಾದ ನಿಯಮಗಳಿವು..!

ಸಾರಾಂಶ

ಗಣೇಶ ಚತುರ್ಥಿಯ ಸಿದ್ಧತೆಯಲ್ಲಿರುವ ಎಲ್ಲರೂ ಗಣೇಶ ಕೂರಿಸುವ ಮುನ್ನ ಕೆಲವು ಅಗತ್ಯ ನಿಯಮಗಳನ್ನು ಗಮನಿಸಲೇಬೇಕು. ಮಂಡ್ಯ ಜಿಲ್ಲೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರಿಗಾಗಿ ಸೆಂಟ್ರಲ್‌ ಪೊಲೀಸ್‌ ಠಾಣೆ ಪೊಲೀಸರು ನಿಯಮಾವಳಿ ಬಿಡಗಡೆ ಮಾಡಿದ್ದಾರೆ. ನೀವು ಅನುಸರಿಸಲೇಬೇಕಾದ ನಿಯಮಗಳನ್ನು ತಿಳಿಯಲು ಈ ಸುದ್ದಿ ಓದಿ.

ಮಂಡ್ಯ(ಆ.29): ಗಣೇಶ ಪ್ರತಿಷ್ಠಾಪನೆ ಮಾಡುವ ಸಾರ್ವಜನಿಕರು ನಿಯಮಗಳನ್ನು ಪಾಲಿಸಬೇಕು ಎಂದು ನಗರ ಪೊಲೀಸ್‌ ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಂಡ್ಯ ಸೆಂಟ್ರಲ್‌ ಪೊಲೀಸ್‌ ಠಾಣೆ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪರವಾನಗಿ ಅಗತ್ಯ:

ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳಕ್ಕೆ ನಗರಸಭೆ, ಪಂಚಾಯಿತಿಯಿಂದ ಪರವಾನಿಗೆ ಪಡೆಯಬೇಕು. ಕೆಪಿಟಿಸಿಎಲ್‌ ಅಧಿಕಾರಿಗಳಿಂದ ವಿದ್ಯುತ್‌ ಪರವಾನಿಗೆ ಪಡೆದಿರಬೇಕು. ಠಾಣೆ ವ್ಯಾಪ್ತಿಯ ಸಿಪಿಐ ಅವರಿಂದ ಕಡ್ಡಾಯವಾಗಿ ಧ್ವನಿವರ್ಧಕ ಲೈಸೆಸ್ಸ್‌ ಪಡೆಯಬೇಕು. ರಾತ್ರಿ 10 ಗಂಟೆಯಿಂದ ಬೆಳಗ್ಗೆ ಜಾವ 6 ಗಂಟೆಯವರೆಗೆ ಧ್ವನಿವರ್ದಕಗಳನ್ನು ಉಪಯೋಗಿಸಬಾರದು. ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡಬಾರದು. ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾರ್ಗದ ಮಾಹಿತಿಯನ್ನು ತಿಳಿಸುವುದು.

ಬೆತ್ತಲೆ, ಅರೆಬೆತ್ತಲೆ ನೃತ್ಯಕ್ಕೆ ಅವಕಾಶವಿಲ್ಲ:

ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಘೋಷಣೆಗಳನ್ನು ಕೂಗಬಾರದು ಮತ್ತು ಬೆತ್ತಲೆ ಹಾಗೂ ಅರೆಬೆತ್ತಲೆ ನೃತ್ಯಗಳನ್ನು ಮಾಡಕೂಡದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ ಶಬ್ಧಗಳನ್ನು ಬಳಸಬಾರದು ಎಂದು ಹೇಳಿದ್ದಾರೆ.

ಅಗ್ನಿಶಾಮಕ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಕಡ್ಡಾಯ:

ಗಣೇಶ ಕೂರಿಸುವ ಪೆಂಡಾಲ್‌ನಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್‌ ಸರಬರಾಜು ಕಡಿತವಾದಲ್ಲಿ ಪೆಟ್ರೋಮ್ಯಾಕ್ಸ್‌, ಜನರೇಟರ್‌ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಆಕಸ್ಮಿಕವಾಗಿ ಬೆಂಕಿ ಕಾಣಿಸುವ ವೇಳೆ ಬೆಂಕಿ ಆರಿಸಲು ನೀರು, ಉಸುಕು, ಸೀಸ್‌ ಫಾಯರ್‌ ವ್ಯವಸ್ಥೆ ಮಾಡಿಕೊಳ್ಳಬೇಕು. ಅಗ್ನಿಶಾಮಕ ಇಲಾಖೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆದುಕೊಂಡು ಇಟ್ಟುಕೊಂಡಿರಬೇಕು.

ಸ್ವಯಂಸೇವಕರ ನೇಮಕ ಅಗತ್ಯ:

ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಪೆಂಡಾಲ್‌ ಹಾಕಬೇಕು. ಗಣೇಶ ಮೂರ್ತಿ ಸಂರಕ್ಷಣೆ ಕುರಿತು ಹಗಲು, ರಾತ್ರಿ ವೇಳೆ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಗಣೇಶ ಪತ್ರಿಷ್ಠಾಪನೆ ಮಾಡಿದ ನಂತರ ವಿಸರ್ಜನೆ ಮಾಡುವವರಗೆ ಯಾವುದೇ ಆರ್ಕೆಸ್ಟ್ರಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಿದರೆ ಮುಂಚಿತವಾಗಿ ಪೊಲೀಸ್‌ ಠಾಣೆಗೆ ಮಾಹಿತಿ ತಿಳಿಸುವುದು.

ಮಂಡ್ಯ: ಮೂಲಭೂತಸೌಕರ್ಯಗಳಲ್ಲಿ ಅವ್ಯವಸ್ಥೆ, ಎಲ್ಲೋಯ್ತು 150 ಕೋಟಿ..?

10 ಗಂಟೆ ತನಕ ಮಾತ್ರ ಕಾರ್ಯಕ್ರಮ:

ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳಿಸುವುದು. ಯಾವುದೇ ಅಹಿತಕರ ಘಟನೆಗಳು ಜರುಗಿದರೆ ಸಂಬಂಧಪಟ್ಟಮಂಡಳಿಯವರೇ ಜವಾಬ್ದಾರರಾಗಿರುತ್ತಾರೆ. ಗೌರಿ-ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಸಂಜೆ 7 ಗಂಟೆಯೊಳಗಿರಬೇಕು ಹಾಗೂ ಕಡ್ಡಾಯವಾಗಿ ಡಿಜೆ ಸೌಂಡ್‌ ಆಳವಡಿಕೆ ನಿಷೇಧ ಮಾಡಲಾಗಿದೆ ಎಂದು ಠಾಣೆ ಹೇಳಿಕೆಯಲ್ಲಿ ತಿಳಿಸಿದೆ.

PREV
click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!