ಮೈಸೂರು (ಅ.01): ಆರ್‌ಎಸ್‌ಎಸ್ (RSS) ಇಡೀ ದೇಶವನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುತ್ತಿದೆ ಎಂದು ಸಿಪಿಎಂ (CPM) ರಾಜ್ಯ ಸಮಿತಿ ಸದಸ್ಯ ವಸಂತಾಚಾರಿ (Vasanthachari) ಆರೋಪಿಸಿದರು.
ಮೈಸೂರಿನ (Mysuru) ಚಾಮರಾಜ ಜೋಡಿ ರಸ್ತೆಯಲ್ಲಿರುವ ಪಂಡಿತ್ ನಾರಾಯಣಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) 23ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಿದ್ಧಾಂತದಿಂದ ದೇಶಕ್ಕೆ ಆಪತ್ತು ಎರಗಲಿದೆ. ಬಿಜೆಪಿ ಸರ್ಕಾರ ಅಂತಹ ಸಿದ್ಧಾಂತವನ್ನು ವೈಭವೀಕರಿಸುತ್ತಿದೆ ಎಂದು ಕಿಡಿಕಾರಿದರು.
undefined
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಬಲಪಂಥೀಯ (Right) ವಿಚಾರಧಾರೆಗಳನ್ನು ಆಕ್ರಮಣಕಾರಿಯಾದ ರೀತಿಯಲ್ಲಿ ತುರುಕುತ್ತಿದೆ. ಇದರ ವಿರುದ್ಧ ದೇಶದಲ್ಲಿ ಜನಪರ ಚಳವಳಿ ರೂಪುಗೊಳ್ಳಬೇಕು. ಅದಕ್ಕಾಗಿ ಜಾತ್ಯಾತೀತ ಶಕ್ತಿಗಳು ಒಂದಾಗಬೇಕು. ಮಾರ್ಕ್ಸ್ವಾದಿ ಸಿದ್ಧಾಂತದ ವಿರುದ್ಧ ಸರ್ಕಾರವು ಆರ್‌ಎಸ್‌ಎಸ್ ಮೂಲಕ ದಾಳಿ ನಡೆಸುತ್ತಿದೆ. ಆದರೆ, ಆರ್‌ಎಸ್‌ಎಸ್ ಸಿದ್ಧಾಂತ ವಿರೋಧಿಸುವವರಿಗೆ ದೇಶದ್ರೋಹದ ಹಣೆಪಟ್ಟಿಕಟ್ಟಲಾಗುತ್ತಿದೆ. ಅವರ ವಿರುದ್ಧ ಪ್ರತೀಕಾರ ಕೈಗೊಳ್ಳಲಾಗುತ್ತದೆ ಎಂದು ಅವರು ದೂರಿದರು.
ಸ್ವ-ಇಚ್ಛೆಯಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡ್ರೆ ಅಭ್ಯಂತರವಿಲ್ಲ: ದತ್ತಾತ್ರೇಯ ಹೊಸಬಾಳೆ
ಇಂಧನ, ಅಡುಗೆ ಅನಿಲ, ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರ ವಿರುದ್ಧ ಯಾರೂ ಮಾತನಾಡುತ್ತಿಲ್ಲ. ದೇಶದ ಎಲ್ಲಾ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ (Prime Minister narendra MOdi) ಅವರೇ ಪರಿಹಾರ ಎಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಿ, ಮಂಕುಬೂದಿ ಎರಚಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯೆ ಸುನಂದಾ ಮಾತನಾಡಿ, ಕೇಂದ್ರದ ಬಿಜೆಪಿ (BJP) ಸರ್ಕಾರ ಬಹುಮತ ಇದೆ ಎಂದು ಜನಾಭಿಪ್ರಾಯ ಪಡೆದುಕೊಳ್ಳದೆ ತನ್ನಿಚ್ಛೆಗೆ ತಕ್ಕಂತೆ ನೀತಿಗಳನ್ನು ರೂಪಿಸುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯದಲ್ಲಿದೆ. 2014 ರಿಂದಲೂ ದೇಶದ ಆರ್ಥ ವ್ಯವಸ್ಥೆ ಕುಸಿಯುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ದೇಶ ಹಿಂದೆ ಬಿದ್ದಿದೆ. ಕೃಷಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧ ನೀತಿಗಳ ಮೂಲಕ ರೈತರು, ಬಡವರ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಿದೆ ಎಂದು ದೂರಿದರು.
ಬಾಂಗ್ಲಾದಲ್ಲಿ ಹಿಂಸಾಸಾರ ಪೂರ್ವ ಯೋಜಿತ: RSS
ಇದಕ್ಕೂ ಮುನ್ನ ಜಿಲ್ಲಾ ಸಮ್ಮೇಳನ ಅಂಗವಾಗಿ ಸಿಪಿಎಂ ಕಾರ್ಯಕರ್ತರು ಗನ್‌ಹೌಸ್ ವೃತ್ತದಿಂದ ಪಂಡಿತ್ ನಾರಾಯಣಾಚಾರ್ಯ ಕಲ್ಯಾಣ ಮಂಟಪದವರೆಗೆ ಜಾಥಾ ಹಮ್ಮಿಕೊಂಡಿದ್ದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಎನ್. ಉಮೇಶ್, ಜಿಲ್ಲಾ ಕಾರ್ಯದರ್ಶಿ ಕೆ. ಬಸವರಾಜು, ಸ್ವಾಗತ ಸಮಿತಿ ಅಧ್ಯಕ್ಷ ಲ. ಜಗನ್ನಾಥ್, ಖಜಾಂಚಿ ರಾಜೇಂದ್ರ, ಕಾರ್ಯದರ್ಶಿ ಜಿ. ಜಯರಾಂ, ಮುಖಂಡರಾದ ವಿಜಯಕುಮಾರ್, ಜಗದೀಶ್ ಸೂರ್ಯ, ಬೆಳತ್ತೂರು ವೆಂಕಟೇಶ್ ಮೊದಲಾದವರು ಇದ್ದರು.
ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ!
'ನಮ್ಮ ತರಬೇತಿ ಶಿಬಿರಗಳಲ್ಲಿ ಆರ್‌ಎಸ್‌ಎಸ್ (RSS) ಬಲಪಂಥೀಯ ಎಂದು ಯಾವತ್ತೂ ಹೇಳಿಲ್ಲ. ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ' ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದ್ದಾರೆ. ಒಂದು ರಾಷ್ಟ್ರದ ದೀರ್ಘಾಯುಷ್ಯಕ್ಕಾಗಿ ಸಾಂಸ್ಕೃತಿಕ ಒಗ್ಗಟ್ಟು (Cultural Cohesion) ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆ (Cultural Nationalism) ಅತ್ಯಗತ್ಯ. ಯಾವುದೇ ಬಲವಂತದ ವಿಭಜನೆ ಅಥವಾ ರಾಷ್ಟ್ರಗಳ ಏಕೀಕರಣವು ದೀರ್ಘ ಕಾಲ ಉಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಂದಿನಿಂದ ಅಮಿತ್ ಶಾ 3 ದಿನದ ಕಾಶ್ಮೀರ ಪ್ರವಾಸ!
ಜಗತ್ತು ಎಡಕ್ಕೆ ಹೋಗಿದೆ..ಅಥವಾ ಅದನ್ನು ಬಲವಂತವಾಗಿ ಎಡಕ್ಕೆ ಹೋಗುವಂತೆ ಮಾಡಲಾಗಿದೆ. ಆದರೆ ಈಗ ಪರಿಸ್ಥಿತಿ ಬೇರೆಯಾಗಿದೆ. ಜಗತ್ತು ಮತ್ತೆ ಬಲಕ್ಕೆ ಬರುತ್ತಿದೆ. ಹಾಗಾಗಿ ಜಗತ್ತು ಈಗ ಕೇಂದ್ರದಲ್ಲಿದೆ. ಇದುವೇ ಹಿಂದುತ್ವದ ಸಿದ್ಧಾಂತವಾಗಿದೆ. ಹಾಗಾಗಿ ಹಿಂದುತ್ವ ಎಂಬುದು ಎಡವೂ ಅಲ್ಲ, ಬಲವೂ ಅಲ್ಲ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ನಾನು ಆರ್‌ಎಸ್‌ಎಸ್ ಮೂಲದಿಂದ ಬಂದವನು. ನಮ್ಮ ತರಬೇತಿ ಶಿಬಿರಗಳಲ್ಲಿ ಆರ್‌ಎಸ್‌ಎಸ್ ಬಲಪಂಥೀಯ ಎಂದು ಯಾವತ್ತೂ ಹೇಳಿಲ್ಲ. ನಮ್ಮ ಬಹುತೇಕ ಅಭಿಪ್ರಾಯಗಳು ಎಡಪಂಥೀಯ ಕೂಡ ಆಗಿರುತ್ತವೆ. ಇವೆಲ್ಲವೂ ಮಾನವರ ಅನುಭವಗಳೇ ಅಗಿರುವುದರಿಂದ, ಎಡಪಂಥೀಯ ಮತ್ತು ಬಲಪಂಥೀಯ ಎರಡೂ ಸಿದ್ಧಾಂತಗಳಿಗೆ ಇಲ್ಲಿ ಅವಕಾಶವಿದೆ ಎಂದರು.