ವಿಜಯಪುರ ಜಿಲ್ಲೆಯ ಆಧ್ಯಾತ್ಮ ತವರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಜಿಲ್ಲೆಯಲ್ಲಿ ಆಗಿ ಹೋದ ಸಂತಮಹಂತರು ವಿಶ್ವವ್ಯಾಪಿ ಆವರಿಸಿಕೊಂಡಿದ್ದಾರೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಇಂಚಗೇರಿ ಸಾಂಪ್ರದಾಯದ ಮಠಗಳಿಗೇನು ಕಮ್ಮಿ ಇಲ್ಲ.
- ಷಡಕ್ಷರಿ ಕಂಪೂನರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜೂ.26): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕ ಮೋಹನ್ ಭಾಗವತ್ ಕಳೆದ ಮೂರು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಚಡಚಣ ತಾಲೂಕಿನ ನಿಂಬಾಳದಲ್ಲಿರುವ ಇಂಚಗೇರಿ ಸಾಂಪ್ರದಾಯದ ಗುರುದೇವ ರಾಣಡೆ ಆಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರತಿ ವರ್ಷ ಜೂನ್-ಜುಲೈ ತಿಂಗಳಲ್ಲಿ ಇಂಚಗೇರಿ ಸಾಂಪ್ರದಾಯದ ಆಧ್ಯಾತ್ಮ ಆಚರಣೆಗಳಲ್ಲಿ ತೊಡಗುವುದು ವಾಡಿಕೆ ಇದ್ದು, ಕಳೆದ ಮೂರು ದಿನಗಳಿಂದ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿದ್ದಾರೆ.
undefined
ಗುರುದೇವ ರಾಣಡೆ ಆಶ್ರಮದಲ್ಲಿ ವಾಸ್ತವ್ಯ: ವಿಜಯಪುರ ಜಿಲ್ಲೆಯ ಆಧ್ಯಾತ್ಮ ತವರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಜಿಲ್ಲೆಯಲ್ಲಿ ಆಗಿ ಹೋದ ಸಂತಮಹಂತರು ವಿಶ್ವವ್ಯಾಪಿ ಆವರಿಸಿಕೊಂಡಿದ್ದಾರೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಇಂಚಗೇರಿ ಸಾಂಪ್ರದಾಯದ ಮಠಗಳಿಗೇನು ಕಮ್ಮಿ ಇಲ್ಲ. ಇಂಚಗೇರಿ ಮಠದ ಆದರ್ಶ, ಗುರುಪರಂಪರೆಯನ್ನ ಮೆಚ್ಚಿ ದೇಶ ವಿದೇಶಗಳಿಂದ ಭಕ್ತರು ಬರ್ತಾರೆ. ಅದೇ ರೀತಿ ನಿಂಬಾಳದಲ್ಲಿರುವ ಗುರುದೇವ ರಾಣಡೆ ಅವರ ಆಶ್ರಮಕ್ಕು ದೇಶ-ವಿದೇಶಗಳಿಂದ ಭಕ್ತರು ಬಂದು ಸಾಧನೆ ಮಾಡ್ತಾರೆ. ಇಂಥಹ ಭಕ್ತರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕರಾದ ಮೋಹನ್ ಭಾಗವತ್ ಅವರು ಸಹ ಒಬ್ಬರು. ಪ್ರತಿ ವರ್ಷದ ೪ ದಿನಗಳ ಕಾಲ ವಿಜಯಪುರ ಜಿಲ್ಲೆಯ ನಿಂಬಾಳದ ಗುರುದೇವ ರಾಣಡೆ ಅವರ ಆಶ್ರಮದಲ್ಲಿ ಉಳಿದುಕೊಂಡು ಆಧ್ಯಾತ್ಮ ಸಾಧನೆ ಮಾಡ್ತಾರೆ.
6 ಸಾವಿರ ಜನರಿಗೆ ಮನಿ ಡಬ್ಲಿಂಗ್ ಆಮಿಷವೊಡ್ಡಿ 210 ಕೋಟಿ ವಂಚನೆ ಮಾಡಿದ್ದ ಅಂತರ್ ರಾಜ್ಯ ಕಳ್ಳನ ಬಂಧನ!
ಆಶ್ರಮದಲ್ಲಿ ಭಾಗವತ್ ಏನೇನು ಮಾಡ್ತಾರೆ?: ಇಂಚಗೇರಿ ಸಾಂಪ್ರದಾಯ ಸ್ಥಾಪನೆ ಮಾಡಿದ ಸದ್ಗುರು ಭಾಹುಸಾಹೇಬ ಮಹಾರಾಜರ ಶಿಷ್ಯರು ಗುರುದೇವರ ರಾಣಡೆ ಅವರು. ಗುರುದೇವ ರಾಣಡೆ ಗುರುಪರಂಪರೆಗೆ ಮೋಹನ್ ಭಾಗವತ್ ಶಿಷ್ಯರಾಗಿದ್ದಾರೆ. ಪ್ರತಿ ವರ್ಷ ಜೂನ್-ಜುಲೈ ತಿಂಗಳಲ್ಲಿ ೪ ದಿನಗಳ ಕಾಲ ನಿಂಬಾಳ ಆಶ್ರಮದಲ್ಲಿ ಉಳಿದುಕೊಳ್ಳುವ ಮೋಹನ್ ಭಾಗವತ್ ಅವರು ಆಧ್ಯಾತ್ಮ ಸಾಧನೆಯಲ್ಲಿ ತೊಡಗುತ್ತಾರೆ. ಇಂಚಗೇರಿ ಸಾಂಪ್ರದಾಯದ ನಿತ್ಯನೇಮಾವಳಿಗಳನ್ನ ಆಚರಿಸುತ್ತಾರೆ. ಶ್ರೀರಾಮದಾಸ ಮಹಾರಾಜರು ಬರೆದ ದಾಸಭೋದ ಗ್ರಂಥ ಪಠಣೆ ಮಾಡುತ್ತಾರೆ. ನಸುಕಿನ ಜಾವ ಕಾಕಡಾರತಿ ನಂತರ ಧ್ಯಾನ, ಮುಂಜಾನೆ ಭಜನೆ, ಮಧ್ಯಾಹ್ನ ಭಜನೆ, ರಾತ್ರಿ ತುಕಾರಾಮ್ ಮಹಾರಾಜರ ಬಾರಾಹ ಅಭಂಗ ಮಾಡಲಾಗುತ್ತದೆ. ಈ ನಡುವೆ ಮಠದಲ್ಲಿರುವ ಗುರುಗಳ ಜೊತೆಗೆ ಆಧ್ಯಾತ್ಮ ಚರ್ಚೆಯನ್ನು ಮೋಹನ್ ಭಾಗವತ್ ಮಾಡುತ್ತಿದ್ದಾರೆ. ನಾಲ್ಕು ದಿನಗಳ ಕಾಲ ನಿರಂತರ ಧ್ಯಾನ, ಉಪಾಸನೆಗಳನ್ನ ಮಾಡುತ್ತಾರೆ..
ಇಂಚಗೇರಿ ಮಠಕ್ಕೆ ಭೇಟಿ, ಗದ್ದುಗೆ ದರ್ಶನ: ಇನ್ನು ಇಂಚಗೇರಿ ಮಠಕ್ಕೆ ಭೇಟಿ ನೀಡಿ ಅಲ್ಲಿ ಭಾಹುಸಾಹೇಬ ಮಹಾರಾಜರ ಗದ್ದುಗೆ ದರ್ಶನ ಮಾಡಲಿದ್ದಾರೆ. ಬಳಿಕ ದೇವರ ನಿಂಬರಗಿಯ ಗುರುಲಿಂಗ ಜಂಗಮ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿ ದೆಹಲಿಗೆ ಮರಳಲಿದ್ದಾರೆ. ಮೋಹನ್ ಭಾಗವತ್ ಅವರ ಆಗಮನ ಹಿನ್ನೆಲೆ ನಿಂಬಾಳ ಆಶ್ರಮದ ಸುತ್ತ ಟೈಟ್ ಸೆಕ್ಯೂರಿಟಿ ನೇಮಿಸಲಾಗಿದೆ. ಮಾಧ್ಯಮ ಸೇರಿ ಯಾರೊಬ್ಬರ ಭೇಟಿ ಅವಕಾಶ ಇಲ್ಲ ಎನ್ನಲಾಗಿದೆ.
ಮೋದಿಯವರ ಸುಳ್ಳಾಟ ಬಯಲಿಗೆಳೆಯಲು ರಾಹುಲ್‌ಗೆ ಒಳ್ಳೆಯ ಅವಕಾಶವಿದೆ: ಸಚಿವ ಸಂತೋಷ್ ಲಾಡ್
ಆಶ್ರಮದ ಸುತ್ತ ಬಿಗಿ ಭದ್ರತೆ: ಝಡ್ ಪ್ಲಸ್ ಭದ್ರತೆಯಲ್ಲಿ ಆಶ್ರಮದ ಕೆಲವೇ ಜನರ ಜೊತೆಗಿರುವ ಮೋಹನ್ ಭಾಗವತ್ ಅವರ ಭೇಟಿಗೆ ಯಾರಿಗೂ ಅವಕಾಶವಿಲ್ಲ. ರಾನಡೆ ಆಶ್ರಮದ ಹೊರಗಡೆ ಜಿಲ್ಲಾ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಗುರುವಾರ ಬೆಳಿಗ್ಗೆ ರಾನಡೆ ಆಶ್ರಮದಿಂದ ಹೊರಟು ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ದೇವರನಿಂಬರಗಿ ಗ್ರಾಮದ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮಹಾರಾಷ್ಟ್ರದ ಉಮದಿಗೆ ತೆರಳುತ್ತಾರೆ ಎಂದು ಮೂಲಗಳು ತಿಳಿಸಿವೆ.