ಬೈಕ್‌ ಅಪ​ಘಾ​ತದಲ್ಲಿ ಆರೆಸ್ಸೆಸ್‌ ಪ್ರಮುಖ್‌ ಸಾವು

Kannadaprabha News   | Asianet News
Published : Dec 16, 2020, 07:59 AM IST
ಬೈಕ್‌ ಅಪ​ಘಾ​ತದಲ್ಲಿ ಆರೆಸ್ಸೆಸ್‌ ಪ್ರಮುಖ್‌ ಸಾವು

ಸಾರಾಂಶ

ರಸ್ತೆ ಅಪಘಾತದಲ್ಲಿ ಆರ್‌ ಎಸ್‌ ಎಸ್‌ ಮುಖಂಡರೋರ್ವರು ನಿಧನರಾಗಿದ್ದಾರೆ. ಅಪರಿಚಿತ ವಾಹನ ಡಿಕ್ಕಿಯಾಗಿ ಅವಘಡವಾಗಿದೆ. 

ಪುತ್ತೂರು (ಡಿ.16) : ಅಪರಿಚಿತ ವಾಹನ ಡಿಕ್ಕಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ ಮಂಗಳೂರು ವಿಭಾಗ ಪ್ರಮುಖ್‌, ಬಂಟ್ವಾಳ ಅಗರ್ತಬೈಲು ನಿವಾಸಿ ವೆಂಕಟ್ರಮಣ ಹೊಳ್ಳ (59) ಮೃತಪಟ್ಟಿದ್ದಾರೆ. 

 ಮಂಗಳವಾರ ನಸುಕಿನ ಜಾವ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ಪೋಳ್ಯ ಎಂಬಲ್ಲಿ ಸಂಭವಿಸಿದೆ.

 ಸೋಮವಾರ ರಾತ್ರಿ ಪುತ್ತೂರು ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ತಂಗಿದ್ದ ವೆಂಕಟ್ರಮಣ ಹೊಳ್ಳ ಅವರು ಮಂಗಳವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಮರಳುವ ವೇಳೆ ಈ ಅವಘಡ ಸಂಭವಿಸಿದೆ.

ರಾಮಮಂದಿರ ಹೋರಾಟಗಾರರ ಹತ್ಯೆಗೆ ಸಂಚು! ...

 ಪೋಳ್ಯ ಸಮೀಪದ ಪೊಲೀಸ್‌ ಬ್ಯಾರಿಕೇಡ್‌ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

PREV
click me!

Recommended Stories

ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ನಾಗರ ಹಾವು ಆಯ್ತು, ಈಗ ದಿಢೀರ್ ಕೋತಿಗಳ ಸೈನ್ಯವೇ ಪ್ರತ್ಯಕ್ಷ!
ಮೈಷುಗರ್ ಕಾರ್ಖಾನೆ ಅವ್ಯವಹಾರ, ಮಹಾರಾಷ್ಟ್ರದ ಅಧಿಕಾರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಕರ್ನಾಟಕ ಆದೇಶ