ಆ್ಯಂಬುಲೆನ್ಸ್‌ಗಳು ಟೈಂಗೆ ಸರಿಯಾಗಿ ಬರದಿದ್ರೆ ₹3000 ದಂಡ: ಆರೋಗ್ಯ ಸಚಿವ ಯು.ಟಿ. ಖಾದರ್‌

Published : Nov 09, 2026, 07:43 AM IST
UT Khader

ಸಾರಾಂಶ

ರಾಜ್ಯ ಸರ್ಕಾರ ಹೊಸ 350 ಆ್ಯಂಬುಲೆನ್ಸ್‌ ಖರೀದಿಸುತ್ತಿದ್ದು, ನಿಗದಿತ ಸಮಯಕ್ಕೆ ತಲುಪದಿದ್ದರೆ ಜವಾಬ್ದಾರರಿಗೆ ₹3000 ದಂಡ ವಿಧಿಸಲಾಗುವುದು. ಜೊತೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಸಾವಿರ ವೈದ್ಯರ ನೇಮಕಾತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಬಳ್ಳಾರಿ: ರಾಜ್ಯದ ಪ್ರತಿಯೊಂದು ಪಿಎಚ್‌ಸಿ, ಸಿಎಚ್‌ಸಿ ಕೇಂದ್ರಗಳಲ್ಲೂ ಆ್ಯಂಬುಲೆನ್ಸ್‌ ಹೊಂದುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಹೊಸ 350 ಆ್ಯಂಬುಲೆನ್ಸ್‌ ಖರೀದಿ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ತಿಳಿಸಿದರು. ಭಾನುವಾರ ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ 450 ಆ್ಯಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಗ್ರಾಮದಿಂದ ಆ್ಯಂಬುಲೆನ್ಸ್‌ಗಳು 20 - 25 ನಿಮಿಷದಲ್ಲಿ ತಾಲೂಕು ಕೇಂದ್ರ ಸೇರಬೇಕು. ಸಮಯ ಪಾಲನೆ ಮಾಡದಿದ್ದಲ್ಲಿ ಆ್ಯಂಬುಲೆನ್ಸ್‌ ಜವಾಬ್ದಾರಿ ವಹಿಸಿಕೊಂಡವರಿಗೆ ₹3000 ದಂಡ ವಿಧಿಸಲಾಗುವುದು ಎಂದರು.

ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳ ಭರ್ತಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಒಂದು ಸಾವಿರ ವೈದ್ಯರ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿ ಎಲ್ಲ ಸಿಬ್ಬಂದಿ ಇರಬೇಕು. ಹೀಗಾಗಿ 250 ವೈದ್ಯರನ್ನು ನೇರ ನೇಮಕಾತಿಗೆ ಅವಕಾಶ ಮಾಡಿಕೊಡಲಾಗಿದೆ. ಆಯಾ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಹೊಸದಾಗಿ 350 ಆ್ಯಂಬುಲೆನ್ಸ್‌ ಖರೀದಿಗೆ ಅಗತ್ಯ ಕ್ರಮ: ಖಾದರ್‌

Bರಾಜ್ಯದ ಪ್ರತಿಯೊಂದು ಪಿಎಚ್‌ಸಿ, ಸಿಎಚ್‌ಸಿ ಕೇಂದ್ರಗಳಲ್ಲೂ ಆ್ಯಂಬುಲೆನ್ಸ್‌ ಹೊಂದುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಹೊಸ 350 ಆ್ಯಂಬುಲೆನ್ಸ್‌ ಖರೀದಿ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ತಿಳಿಸಿದರು. ಭಾನುವಾರ ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ 450 ಆ್ಯಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಗ್ರಾಮದಿಂದ ಆ್ಯಂಬುಲೆನ್ಸ್‌ಗಳು 20 - 25 ನಿಮಿಷದಲ್ಲಿ ತಾಲೂಕು ಕೇಂದ್ರ ಸೇರಬೇಕು. ಸಮಯ ಪಾಲನೆ ಮಾಡದಿದ್ದಲ್ಲಿ ಆ್ಯಂಬುಲೆನ್ಸ್‌ ಜವಾಬ್ದಾರಿ ವಹಿಸಿಕೊಂಡವರಿಗೆ ₹3000 ದಂಡ ವಿಧಿಸಲಾಗುವುದು ಎಂದರು.

ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳ ಭರ್ತಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಒಂದು ಸಾವಿರ ವೈದ್ಯರ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ. ಆಯಾ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

Dharwad: 45 ಎಕರೆ ಭೂಮಿಯಲ್ಲಿ 300 ಟನ್‌ ಈರುಳ್ಳಿ ಬೆಳೆದು 1 ಕೋಟಿ ಸಂಪಾದಿಸಿದ ರೈತ
ಸಾರ್ವಜನಿಕರ ದೂರು ಆಲಿಸಲು ಕಾರು ಖರೀದಿಸಿದ ಮಸ್ಕಿ ಶಾಸಕ ತುರ್ಮಿಹಾಳ, ಕರೆ ಮಾಡಿದ್ರೆ ಮನೆ ಬಾಗಿಲಿಗೆ ವಾಹನ!