Ban on MES: 'ಎಂಇಎಸ್‌ ನಿಷೇಧ ಕಾಯ್ದೆ ಮಂಡಿಸುವವರಿಗೆ 1 ಕೋಟಿ ಬಹುಮಾನ'

By Kannadaprabha NewsFirst Published Jan 12, 2022, 9:45 AM IST
Highlights

*   ಬೆಳಗಾವಿ ಚಳಿಗಾಲದ ಅಧಿವೇಶನ ನಡೆಸುವ ವೇಳೆ ಪುಂಡಾಟಿಕೆ ಮೆರೆದ ಎಂಇಎಸ್‌ ಪುಂಡರು
*   ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಘೋಷಣೆ
*   ತಾಕತ್ತಿದ್ರೆ MES ನಿಷೇಧಿಸಿ, ಬೊಮ್ಮಾಯಿ ಸರ್ಕಾರಕ್ಕೆ ಮರಾಠಿಗರ ಸವಾಲ್

ಬೆಳಗಾವಿ(ಜ.12):  ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಿದಂತೆ, ಬೆಳಗಾವಿಯಲ್ಲಿ ಎಂಇಎಸ್‌ ಹಾಗೂ ಶಿವಸೇನೆ ನಿಷೇಧ ಕಾಯ್ದೆ ಮಂಡಿಸುವವರಿಗೆ 1 ಕೋಟಿ ನಗದು ಹಾಗೂ ಕನ್ನಡದ ಭೀಷ್ಮ ಎಂದು ಬಿರುದು ನೀಡಿ ಸತ್ಕರಿಸಲಾಗುವುದು ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಘೋಷಣೆ ಮಾಡಿದ್ದಾರೆ.

ಬೆಳಗಾವಿ ಚಳಿಗಾಲದ ಅಧಿವೇಶನ ನಡೆಸುವ ವೇಳೆ ಪುಂಡಾಟಿಕೆ ಮೆರೆದು ಸರ್ಕಾರದ ವಿರುದ್ಧ ಮಹಾಮೇಳಾವ ನಡೆಸುತ್ತಿದ್ದ ಪುಂಡ ಎಂಇಎಸ್‌ ಮುಖಂಡ ದೀಪಕ ದಳವಿಗೆ ಮುಖಕ್ಕೆ ಮಸಿ ಬಳೆದು ಹಿಂಡಲಗಾ ಕಾರಾಗೃಹದಲ್ಲಿದ್ದ ಕರ್ನಾಟಕ ನವ ನಿರ್ಮಾಣ ಸೇನೆಯ ಯುವ ಘಟಕದ ಮುಖಂಡರಿಗೆ ನ್ಯಾಯಾಲಯ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಗೊಂಡ ತಮ್ಮ ಕಾರ್ಯಕರ್ತರಿಗೆ ಹೊಸ ಬಟ್ಟೆ ನೀಡಿ, ಮೈಸೂರು ಪೇಟ ಧರಿಸಿ ಸತ್ಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

Karnataka Bandh: ಕರುನಾಡು ಬಂದ್‌ಗೆ ಬೆಳಗಾವಿಯಲ್ಲೇ ಇಲ್ಲ ಬೆಂಬಲ..!

ಕರ್ನಾಟಕ ನವ ನಿರ್ಮಾಣ ಸೇನೆಯ ಯುವ ಮುಖಂಡರಾದ ಸಂಪನಕುಮಾರ ದೇಸಾಯಿ, ಅನಿಲ ದಡ್ಡಿಮಿ, ಸಚಿನ ಮಠದ, ರಾಹುಲ್‌ ಕಲಕಾಮಕರ ಮೇಲೆ ಹಾಕಿರುವ ಕೊಲೆ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ತಾಕತ್ತಿದ್ರೆ MES ನಿಷೇಧಿಸಿ, ಬೊಮ್ಮಾಯಿ ಸರ್ಕಾರಕ್ಕೆ ಮರಾಠಿಗರ ಸವಾಲ್

ಬೆಳಗಾವಿ:  ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡಿಗರನ್ನು ಪದೇ ಪದೇ ಕೆಣಕುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯು ಕರ್ನಾಟಕ ಸರ್ಕಾರಕ್ಕೆ(Government of Karnataka) ತಾಕತ್ತಿದ್ದರೆ ಎಂಇಎಸ್ ಸಂಘಟನೆಯನ್ನು ನಿಷೇಧಿಸಲಿ ಎಂದು ಸವಾಲೆಸೆದಿದೆ. ತನ್ಮೂಲಕ, ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳಿಗೂ ಸಡ್ಡು ಹೊಡೆದಿದೆ. ಅಲ್ಲದೆ, ಗಡಿ ವಿವಾದದಲ್ಲಿ(Border Dispute) ಮಹಾಜನ್ ಆಯೋಗದ ವರದಿಯೇ ಅಂತಿಮ ಎನ್ನುವ ಕರ್ನಾಟಕ ಸರ್ಕಾರಕ್ಕೆ ತಾಕತ್ತಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಮಹಾಜನ್ ಆಯೋಗದ ವರದಿ ಅನ್ವಯವೇ ಗಡಿ ವಿವಾದ ಇತ್ಯರ್ಥ ಸಂಬಂಧ ಪ್ರಸ್ತಾಪ ಮಂಡಿಸಬೇಕು ಎಂದೂ ಸವಾಲು ಎಸೆದಿದೆ.

ಜ.5ರಂದು ನಡೆದ ಎಂಇಎಸ್ ಪದಾಧಿಕಾರಿಗಳ ಸಭೆಯಲ್ಲಿ ಎಂಇಎಸ್ ಮುಖಂಡರು, ಮಹಾರಾಷ್ಟ್ರಕ್ಕೆ(Maharashtra) ಒಂದಿಂಚೂ ಭೂಮಿ ನೀಡುವುದಿಲ್ಲ. ಮಹಾಜನ್ ಆಯೋಗದ ವರದಿಗೆ(Mahajan Commission Report) ಬದ್ಧ ಇರುವುದಾಗಿ ಕರ್ನಾಟಕ ಸರ್ಕಾರ ಹೇಳುತ್ತಾ ಬಂದಿದೆ. ಮಹಾಜನ್ ಆಯೋಗದ ವರದಿ ಅನ್ವಯವೇ ಗಡಿ ವಿವಾದವನ್ನು ಇತ್ಯರ್ಥಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಪ್ರಸ್ತಾಪ ಮಂಡಿಸಬೇಕು ಎಂದು ತಿಳಿಸಿದ್ದರು.

Belagavi Session: ಬೆಳಗಾವಿ ಅಧಿವೇಶನ ಅಂತ್ಯ, ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಯತ್ನಾಳ್

ಜ.17ರಂದು ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿ ಗಡಿ ಹೋರಾಟದಲ್ಲಿ ಮಡಿದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದರು. ಗಡಿ ವಿವಾದದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದು ಕರ್ನಾಟಕ ಸರ್ಕಾರ ಪದೇ ಪದೇ ಹೇಳುತ್ತದೆ. ಸುಪ್ರೀಂಕೋರ್ಟ್‌ನಲ್ಲೂ ಇದೇ ವಾದ ಮಂಡಿಸಲಿ. ಜತೆಗೆ, ಸರ್ಕಾರಕ್ಕೆ ತಾಕತ್ತಿದ್ದರೆ ನಮ್ಮ ಸಂಘಟನೆಯನ್ನು ನಿಷೇಧಿಸಲಿ ಅಂತ  ಮಹಾರಾಷ್ಟ್ರ ಏಕೀಕರಣ ಸಮಿತಿ ಹೇಳಿದೆ. 

ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದ ಶಿವಸೇನೆ ನಾಯಕ

ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಎಂಇಎಸ್(MES) ಪುಂಡರ ಪುಂಡಾಟ ಮಿತಿ ಮೀರಿದ್ದು, ಅದನ್ನು ವಿರೋಧಿಸಿ ರಾಜ್ಯದೆಲ್ಲೆಡೆ ಆಕ್ರೋಶದ ಕಟ್ಟೆ ಹೊಡೆದಿದೆ. ಅಲ್ಲದೇ ರಾಜ್ಯದಲ್ಲಿ ಎಂಇಎಸ್ ಬ್ಯಾನ್(MES Ban) ಮಾಡಬೇಕೆಂಬ ಕೂಗು ಜೊರಾಗಿದೆ. ಇದರ ನಡುವೆಯೇ ಶಿವಸೇನೆ (Shiv Sena) ನಾಯಕ ಸಂಜಯ್ ರಾವತ್(Sanjay Raut) ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಸವಾಲು ಹಾಕಿದ್ದರು. ಕರ್ನಾಟಕದಲ್ಲಿ ಧೈರ್ಯವಿದ್ದರೆ ಎಂಇಎಸ್ ನ್ನು ನಿಷೇಧಿಸಲಿ ಎಂದು ಅವರು ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಈ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. 
 

click me!