Covid 19 Spike: ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 10,800 ಮಂದಿಗೆ ಸೋಂಕು

By Kannadaprabha NewsFirst Published Jan 12, 2022, 6:40 AM IST
Highlights

*   ಒಂದೇ ದಿನ 10,800 ಸೋಂಕಿತ ಪತ್ತೆ 226 ದಿನದ ಬಳಿಕ ಅಧಿಕ ಕೇಸ್‌
*   ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.10.40ಕ್ಕೆ ಏರಿಕೆ
*   9 ವರ್ಷದೊಳಗಿನ 295 ಮಕ್ಕಳಲ್ಲಿ ಸೋಂಕು
 

ಬೆಂಗಳೂರು(ಜ.12):  ರಾಜಧಾನಿಯಲ್ಲಿ ಕೊರೋನಾ(Coronavirus) ಸೋಂಕಿತ ಪ್ರಕರಣಗಳು ಏರಿಕೆಯಾಗಿದ್ದು, 226 ದಿನಗಳ ಬಳಿಕ ಮಂಗಳವಾರ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ನಗರದಲ್ಲಿ ಪಾಸಿಟಿವಿಟಿ ದರ(Positivity Rate) ಶೇ.10.40 ಕ್ಕೆ ಹೆಚ್ಚಳವಾಗಿದೆ.

ಈ ಹಿಂದೆ ಮೇ 21ರಂದು ಪತ್ತೆಯಾಗಿದ್ದ 9591 ಸೋಂಕಿತ ಪ್ರಕರಣಗಳೇ ಈವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ನಗರದಲ್ಲಿ ಮಂಗಳವಾರ 10,800 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸೋಂಕಿತರು ಮೃತಪಟ್ಟಿರುವ(Death) ವರದಿಯಾಗಿದೆ.

Coronavirus in Karnataka: ಲಾಕ್‌ಡೌನ್‌ ಬಗ್ಗೆ ಹೇಳಿ ಉಲ್ಟಾ ಹೊಡೆದ ಸಚಿವ ಜ್ಞಾನೇಂದ್ರ

ಹೊಸ ಪ್ರಕರಣಗಳ ಪತ್ತೆಯಿಂದ ಸೋಂಕಿತರ ಸಂಖ್ಯೆ 13,19,340ಕ್ಕೆ ಏರಿಕೆಯಾಗಿದೆ. 840 ಮಂದಿ ಗುಣಮುಖರಾಗಿದ್ದು ಈವರೆಗೆ ಸೋಂಕಿನಿಂದ ಬಿಡುಗಡೆಯಾದರ ಸಂಖ್ಯೆ 12,43,995ಕ್ಕೆ ಹೆಚ್ಚಳವಾಗಿದೆ. ಮೂವರ ಸಾವಿನಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 16,427ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 58,917ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.

ಮಂಗಳವಾರ ಪತ್ತೆಯಾದ 10,800 ಸೋಂಕಿತ ಪ್ರಕರಣಗಳ ಪೈಕಿ 9 ವರ್ಷದೊಳಗಿನ 295 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 10 ರಿಂದ 19 ವಯೋಮಿತಿಯೊಳಗಿನ 884 ಮಕ್ಕಳು, 20 ರಿಂದ 29 ವರ್ಷದೊಳಗಿನ 3007 ಯುವಕರು, 30 ರಿಂದ 39 ವಯೋಮಿತಿಯೊಳಗಿನ 2659, 40ರಿಂದ 49 ವರ್ಷದೊಳಗಿನ 1666 ವಯಸ್ಕರಲ್ಲಿ ಸೋಂಕು ದೃಢಪಟ್ಟಿದೆ. 50ರಿಂದ 59 ವಯೋಮಿತಿಯೊಳಗಿನ 1165 ಮತ್ತು 60ರಿಂದ 69 ವರ್ಷದೊಳಗಿನ 673 ಹಾಗೂ 70 ವರ್ಷ ಮೇಲ್ಪಟ್ಟ451 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಬಿಬಿಎಂಪಿ(BBMP) ಮಾಹಿತಿ ನೀಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಏಳು ದಿನಗಳಿಂದ ಬೆಳ್ಳಂದೂರು, ಬೇಗೂರು, ಹಗದೂರು ಮತ್ತು ದೊಡ್ಡನೆಕ್ಕುಂದಿ ಸೇರಿದಂತೆ 10 ವಾರ್ಡ್‌ಗಳಲ್ಲಿ ಅತ್ಯಧಿಕ ಸೋಂಕು ಪತ್ತೆಯಾಗುತ್ತಿವೆ. ಬೆಳ್ಳಂದೂರು 252, ಬೇಗೂರು 125, ಹಗದೂರು 121, ದೊಡ್ಡನೆಕ್ಕುಂದಿ 102, ವರ್ತೂರು 99, ಎಚ್‌ಎಸ್‌ಆರ್‌ಲೇಔಟ್‌ 95, ಹೊರಮಾವು 91, ನ್ಯೂ ತಿಪ್ಪಸಂದ್ರ 89, ಕೋರಮಂಗಲ 82 ಮತ್ತು ರಾಜಾಜಿನಗರ ವಾರ್ಡ್‌ನಲ್ಲಿ 77 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Covid In Bengaluru: 'ಲಕ್ಷಣರಹಿತ ಸೋಂಕಿತರಿಗೆ ಮನೆಯಲ್ಲೇ ಐಸೋಲೇಷನ್‌'

479 ಕಂಟೈನ್ಮೆಂಟ್‌

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಕಂಟೈನ್ಮೆಂಟ್‌ ವಲಯಗಳ(Containment Zones) ಸಂಖ್ಯೆ 479 ಗುರುತಿಸಲಾಗಿದೆ. ಈ ಪೈಕಿ ಮಹದೇವಪುರ 165, ಬೊಮ್ಮನಹಳ್ಳಿ 114, ದಕ್ಷಿಣ 53, ಪಶ್ಚಿಮ 52, ಯಲಹಂಕ 49, ಪೂರ್ವ 37, ದಾಸರಹಳ್ಳಿ 5 ಮತ್ತು ರಾಜರಾಜೇಶ್ವರಿ ನಗರ 4 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ವರದಿ ಮಾಹಿತಿ ನೀಡಿದೆ.

ದಿನಾಂಕ - ಸೋಂಕಿತರು

ಜ.5-3605
ಜ.6-4324
ಜ.7-6812
ಜ.8-7113
ಜ.9-9020
ಜ.10-9221
ಜ.11-10,800

ಶಾಲೆ, ಕಾಲೇಜಲ್ಲಿ ಕೋವಿಡ್‌ ಸ್ಫೋಟ: 208 ವಿದ್ಯಾರ್ಥಿಗಳಿಗೆ ಸೋಂಕು

ರಾಜ್ಯದ(Karnataka) ಶಾಲಾ-ಕಾಲೇಜುಗಳಲ್ಲಿ ಕೋವಿಡ್‌(Covid19) ಮಹಾಮಾರಿ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಮಂಗಳವಾರ ಮತ್ತೆ 208ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೋನಾ(Coronavirus) ಸೋಂಕು ದೃಢಪಟ್ಟಿದೆ. ಈ ಮೂಲಕ ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ 850ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ(Students) ಸೋಂಕು ತಗಲಿದಂತಾಗಿದೆ.

ಕಾಲೇಜು(College) ವಿದ್ಯಾರ್ಥಿಗಳು ಮಾತ್ರವಲ್ಲದೆ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ(Schools) ವಿದ್ಯಾರ್ಥಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗಲುತ್ತಿದೆ. ವಸತಿ ಶಾಲೆ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳಿರುವ ವೈದ್ಯ, ನರ್ಸಿಂಗ್‌, ಎಂಜಿನಿಯರಿಂಗ್‌ ಕಾಲೇಜುಗಳ ಹಾಸ್ಟೆಲ್‌ಗಳಲ್ಲಿ ತೀವ್ರಗತಿಯಲ್ಲಿ ಸೋಂಕು ಹಬ್ಬುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
 

click me!