ಗದಗ: ಆಂಟಿ ಮೋಹಕ್ಕೆ ಸಿಲುಕಿದ ರೌಡಿಶೀಟರ್: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಪಾಲಿಗೆ ವಿಲನ್!

By Suvarna News  |  First Published May 25, 2022, 9:43 PM IST

ಆಂಟಿ ವ್ಯಾಮೋಹಕ್ಕೆ ಸಿಲುಕಿರುವ ಸಾಗರ್, ಆಕೆಯ ಹಿಂದೆ ಓಡಾಡುತ್ತಿದ್ದು ಕಟ್ಟಿಕೊಂಡ ಹೆಂಡತಿಗೆ ಚಿತ್ರ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಲಾಗಿದೆ


ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಮೇ 25): ಪ್ರೀತಿಸಿ ಮದುವೆಯಾಗಿದ್ದ ಗಂಡ ಪರ ಮಹಿಳೆಯ ಸಾಂಗತ್ಯ ಬಯಸಿ ತನಗೆ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ತವರು ಮನೆ ಸೇರಿದ್ದು, ನ್ಯಾಯ ಕೊಡಿಸಿ ಎಂದು ಮಾಧ್ಯಮದ ಎದ್ರು ಅಳಲು ತೋಡಿಕೊಂಡಿದ್ದಾರೆ. ನಗರದ ವಿವೇಕಾನಂದ ರಸ್ತೆಯ ಕೊಳಚೆ ಪ್ರದೇಶದ ನಿವಾಸಿಯಾಗಿರೋ ಉಮಾ, ಅದೇ ಏರಿಯಾದಲ್ಲಿ ವಾಸವಾಗಿದ್ದ ಸಾಗರ್ ಕೊಪ್ಪಳ ಎಂಬುವವರನ್ನು ಪ್ರೀತಿಸಿ  ವಿವಾಹವಾಗಿದ್ದರು. ಸದ್ಯ ಆಂಟಿ ವ್ಯಾಮೋಹಕ್ಕೆ ಸಿಲುಕಿರುವ ಸಾಗರ್, ಆಕೆಯ ಹಿಂದೆ ಓಡಾಡುತ್ತಿದ್ದು ಕಟ್ಟಿಕೊಂಡ ಹೆಂಡತಿಗೆ ಚಿತ್ರ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಲಾಗಿದೆ. ಕುಡಿದ ಅಮಲಿನಲ್ಲಿ ರಾತ್ರಿ ಮನೆಗೆ ಬಂದು ಕಾಲಿನಿಂದ ತುಳಿದು ಸಾಗರ್ ಕೀಚಕನಂತೆ ವರ್ತಿಸುತ್ತಿದ್ದು, ಇದರಿಂದ ಬೇಸತ್ತಿರೋ ಉಮಾ ತವರು ಮನೆ ಸೇರಿದ್ದಾಳೆ.

Tap to resize

Latest Videos

ಪ್ರೀತಿಸಿ ಮದ್ವೆಯಾದವಳೇ ಈಗ ಚೆನ್ನಾಗಿ ಕಾಣ್ತಿಲ್ವಂತೆ: ಶಾಲಾ ದಿನಗಳಿಂದಳು ಉಮಾ ಅವರಿಗೆ ಕಿರಿಕಿರಿ ಮಾಡ್ತಿದ್ದ ಸಾಗರ್ ಮದ್ವೆಯಾಗುವಂತೆ ದುಂಬಾಲು ಬಿದ್ದಿದ್ದ. ಪೋಷಕರ ಸಮ್ಮುಖದಲ್ಲೇ ಉಮಾ 2017ರಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಂಡಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಸಾಗರ್, ವರ್ಷದಲ್ಲೇ ವರಸೆ ಬದಲಿಸಿದ್ದ. ಉಮಾ ಸಾಗರ್‌ಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿವೆ. ಸದ್ಯ ಉಮಾ ತುಂಬು ಗರ್ಭಿಣಿ. ಹೀಗಿದ್ರೂ ಸಾಗರ್ ಉಮಾಳಿಗೆ ಚಿತ್ರ ಹಿಂಸೆ ನೀಡಿದ್ದಾನೆ. ನೀನು ಚೆನ್ನಾಗಿ ಕಾಣಲ್ಲ ಎಂದು ಕಿರಿಕ್‌ ತೆಗೆದು 45 ಆಸು ಪಾಸಿನ ಆಂಟಿಯ ವ್ಯಾಮೋಹಕ್ಕೆ ಸಿಲುಕಿದ್ದಾನೆ. 

ಇದನ್ನೂ ಓದಿ: ಮಗನ ಹೆಂಡತಿಗೆ ಮಾವನಿಂದ ಅಶ್ಲೀಲ ಮೆಸೇಜ್, ಕಿರುಕುಳಕ್ಕೆ ಪ್ರಾಣಬಿಟ್ಟ ಸೊಸೆ!

ಅಂದ್ಹಾಗೆ, ಉಮಾಗೆ ಶ್ರವಣ ದೋಷ ಇದೆ. ಚಿಕ್ಕಂದಿನಲ್ಲಿ ಕಿವಿಗೆ ಪೆನ್ ಹಾಕಿಕೊಂಡಿದ್ರಿಂದ ಶ್ರವಣ ಶಕ್ತಿ ಕಡಿಮೆಯಾಗಿದೆ. ಹೀಗಿದ್ರೂ ಸಾಗರ್, ಉಮಾಳನ್ನ ಪ್ರೀತಿಸಿ ಮದ್ವೆಯಾಗಿದ್ದ. ಆರಂಭದಲ್ಲಿ ಸೀದಾ ಸಾದಾ ಆಗಿದ್ದ ಸಾಗರ್ ಕ್ರಮೇಣ ಬದಲಾಗಿದ್ದಾನೆ. ನಿನ್ನ ಜೊತೆ ಮಾತನಾಡುವುದಕ್ಕೆ ಕಿರಿಕಿಯಾಗುತ್ತೆ ಎಂದು ತಗಾದೆ ತೆಗೀದಿದ್ದಾನೆ. ಇತ್ತೀಚೆಗೆ ವಿಧವೆ ಮಹಿಳೆಯೊಬ್ಬಳ ಸ್ನೇಹ ಬೆಳಸಿರೋ ಸಾಗರ್, ಉಮಾಳಿಗೆ ಚಿತ್ರ ಹಿಂಸೆ ನೀಡ್ತಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡ್ಸಿ, ಎರಡು ಹೆಣ್ಣು ಮಕ್ಕಳನ್ನ ಸಾಕುವ ಜವಾಬ್ದಾರಿ ನನ್ನ ಮೇಲಿದೆ, ಸಹಾಯ ಮಾಡ್ಸಿ ಎಂದು ಉಮಾ ಅಳಲು ತೋಡಿಕೊಂಡಿದ್ದಾರೆ.

ಪೊಲೀಸರು ಬುದ್ಧಿ ಹೇಳಿದ್ರೂ 'ಚಾಳಿ' ಬಿಡದ ಐನಾತಿ: ಕೌಟುಂಬಿಕ ಕಿರಿಕಿರಿ ಆರಂಭವಾದಾಗ ಉಮಾ ತಂದೆ ಜಗದೀಶ ಪೊಲೀಸರಿಗೆ ಮಾಹಿತಿ ನೀಡಿದ್ದರು.  ರಾಜೀವ ಗಾಂಧಿ ಪೊಲೀಸ್ ಸ್ಟೇಷನ್ ಗೆ ಕರೆಸಿ ಸಾಗರ್ ಗೆ ಬುದ್ಧಿ ಹೇಳಲಾಗಿತ್ತು‌‌. ಹೀಗಿದ್ರೂ ಸಾಗರ ಬುದ್ಧಿ ಕಲಿತಿರಲಿಲ್ಲ. ಸಾಗರ್ ಈಗ್ಲೂ ಮಹಿಳೆಯನ್ನ ಕರೆದ್ಕೊಂಡು ಊರು ಅಲಿಯುತ್ತಿದ್ದು, ವಿಷಯ ಹೆಂಡತಿಗೆ ತಿಳಿದಾಗಿನಿಂದ ಮನೆಯಲ್ಲಿ ನೆಮ್ಮದಿಯಾಗಿ ಇರೋದಕ್ಕೂ ಬಿಡುತಿಲ್ಲ ಎಂದು ತಿಳಿದುಬಂದಿದೆ. 

ಪ್ರೀತಿಯ ಪ್ರತಿರೂಪದಂತಿರುವ ತಂದೆತಾಯಿ: ಲವ್ ನಲ್ಲಿ ಎಡವಿದ ಮಗಳು:  ಉಮಾ ತಂದೆ, ಜಗದೀಶ್ ಜಡಿ ವೃತ್ತಿಯಿಂದ ಟ್ರಕ್ ಡ್ರೈವರ್. ಸುಮಾರು 25 ವರ್ಷಗಳ ಹಿಂದೆ ರಂಗವ್ವ ಅನ್ನೋರನ್ನ ಮದ್ವೆಯಾಗಿದ್ರು. ಜಾತಿ ಬೇರೆಯಾಗಿದ್ರೂ ಇಬ್ಬರ ಮನಸ್ಸು ಒಂದಾಗಿತ್ತು. ಈಗ್ಲೂ ಇಬ್ಬರು ಅನ್ಯೋನ್ಯವಾಗಿದ್ದಾರೆ. ಗಂಡ ಹೆಂಡತಿ ಅಂದ್ರೆ ಹೀಗಿರಬೇಕು ಅನ್ನೋ ಮಟ್ಟಿಗೆ ಇಬ್ಬರು ಜೀವನ ನಡೆಸುತ್ತಿದ್ದಾರೆ. 

ಇದನ್ನೂ ಓದಿ: ಬಲವಂತವಾಗಿ ಅಪ್ರಾಪ್ತ ಬಾಲಕನ ಮತಾಂತರ: 2 ಮಕ್ಕಳ ತಾಯಿಯೊಂದಿಗೆ ಮದ್ವೆ

ಜೀವನ ಅಂದ್ರೆ ಪ್ರೀತಿ ಅಂತಾ ಬದುಕಿರೋ ಕುಟುಂಬ ಅದು. ಮಗಳ ಪ್ರೀತಿ ವಿಷಯ ಕೇಳಿ, ಸಾಗರ್ ಹಿನ್ನೆಲೆ ಕೆದಕಿದ್ರು. ಉಂಡಾಡಿ ಗುಂಡನಂತೆ ಓಡಾಡ್ತಿದ್ದ ಸಾಗರ್ ನಿನಗೆ ಸರಿಯಾದ ಜೋಡಿ ಅಲ್ಲ ಅಂತಾ ಬುದ್ಧಿ ಹೇಳಿದ್ರೂ ಉಮಾ ಕೇಳಿರಲಿಲ್ಲ. ಒತ್ತಾಯಕ್ಕೆ ಮಣಿದು ಸಾಗರ್‌ನ ಮದ್ವೆಯಾಗೋದಕ್ಕೆ ಸಮ್ಮತಿ ಸೂಚಿಸಿದ್ದರು. ಸದ್ಯ ಮದ್ವೆಯಾಗಿದ್ದಕ್ಕೆ ಉಮಾ ಪರಿತಪಿಸುತ್ತಿದ್ದಾರೆ. ಸದ್ಯ ಉಮಾ ತವರು ಮನೆಯಲ್ಲೇ ವಾಸವಾಗಿದ್ದಾರೆ. ಆಸರೆ ಕಳೆದುಕೊಂಡ ಭಾವದಲ್ಲಿ ಎರಡು ಮಕ್ಕಳಿದ್ದಾರೆ‌‌ ಜೀವನ ನಿರ್ವಹಣೆಗೆ ಸಹಾಯ ಆಗಲಿ ಎಂದು ಉಮಾ ಆಗ್ರಹಿಸುತ್ತಿದ್ದಾರೆ. 

click me!