ಧಾರವಾಡ: ಮಹದಾಯಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಕೇಸ್ ಓಪನ್‌

Suvarna News   | Asianet News
Published : Jan 20, 2020, 11:24 AM ISTUpdated : Jan 20, 2020, 12:52 PM IST
ಧಾರವಾಡ: ಮಹದಾಯಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಕೇಸ್ ಓಪನ್‌

ಸಾರಾಂಶ

ಮಹದಾಯಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಕೇಸ್ ಓಪನ್| ರೌಡಿ ಶೀಟರ್‌ಗಳ ಪರೇಡ್‌ ಮಾಡಿಸಿದ ಎಸ್ಪಿ ವರ್ತಿಕಾ ಕಟಿಯಾರ| ಹೊಸ ಎಸ್‌ಪಿ ಬಂದಾಗೊಮ್ಮೆ ಮಹದಾಯಿ ಹೋರಾಟಗಾರರು ತಮ್ಮ ಕೆಲಸ ಬಿಟ್ಟು ಬಂದು ರೌಡಿ ಪರೇಡ್ ನಡೆಸುವ ಸ್ಥಿತಿ ಬಂದಿದೆ|

ಧಾರವಾಡ(ಜ.20): ಮಹದಾಯಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಕೇಸ್ ಓಪನ್ ಆಗಿದ್ದಕ್ಕೆ ಎಸ್ಪಿ ವರ್ತಿಕಾ ಕಟಿಯಾರ ಅವರು ರೌಡಿ ಶೀಟರ್‌ಗಳ ಪರೇಡ್‌ ಮಾಡಿಸಿದ್ದಾರೆ. ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಪೊಲೀಸರು ರೌಡಿ ಶೀಟರ್‌ ಕೇಸ್ ಹಾಕಿದೆ. 

"

ರೌಡಿ ಶೀಟರ್‌ ಪರೇಡ್‌ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಮೇಶ್ ಹಲಗತ್ತಿ ಅವರು, ನಮ್ಮ ಕೆಲಸ ಬಿಟ್ಟು ರೌಡಿ ಶೀಟರ್‌ಗಳ ಜೊತೆ ಪರೇಡ್‌ಗೆ ಮಾಡುವ ಸ್ಥಿತಿ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ್ದೆವು. ಆದರೆ, ರೈತರಿಗೆ ಇಲ್ಲಿವರೆಗೆ ಒಂದು ಹನಿ ನೀರು ಸಿಕ್ಕಿಲ್ಲ ಆದರೆ, ಅಮಾಯಕ ರೈತರ ಮೇಲೆ ರೌಡಿ ಶೀಟರ್‌ ಕೇಸ್ ಹಾಕಲಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಎರಡು ದಿನಗಳ ಹಿಂದೆಯಷ್ಟೇ ಧಾರವಾಡ ಜಿಲ್ಲಾ ಎಸ್‌ಪಿ ವರ್ತಿಕಾ ಕಟಿಯಾರ್ ರೌಡಿ ಪರೇಡ್ ಮಾಡಿಸಿದ್ದಾರೆ. ಕೇಸ್‌ ವಾಪಸ್ ಪಡೆಯಬೇಕಿದ್ದ ಸರ್ಕಾರ, ಕೇಸ್ ವಾಪಸ್ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಹೊಸ ಎಸ್‌ಪಿ ಬಂದಾಗೊಮ್ಮೆ ಮಹದಾಯಿ ಹೋರಾಟಗಾರರು ತಮ್ಮ ಕೆಲಸ ಬಿಟ್ಟು ಬಂದು ರೌಡಿ ಪರೇಡ್ ನಡೆಸುವ ಸ್ಥಿತಿ ಬಂದಿದೆ. ಹೀಗಾಗಿ ಇದರಿಂದ ಬೇಸತ್ತ ರಮೇಶ್ ಹಲಗತ್ತಿ ಅವರು, ಹೋರಾಟ ಮಾಡಿದ್ದಕ್ಕೆ ರೌಡಿ ಶೀಟರ್ ಕೇಸ್ ಹಾಕಿ ನಮಗೆ ಕಿರುಕುಳ ನೀಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 
 

PREV
click me!

Recommended Stories

ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ