ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ

By Kannadaprabha NewsFirst Published Dec 6, 2019, 8:42 AM IST
Highlights

ಶಿಥಿಲಗೊಂಡಿದ್ದ ಶಾಲಾ ಕಟ್ಟಡವೊಂದು ಕುಸಿದು ಬಿದ್ದಿದ್ದು, ಮಕ್ಕಳು ಅದೃಷ್ಟವಶಾತ್ ಪಾರಾದ ಘಟನೆ ತುಮಕೂರಿನಲ್ಲಿ ನಡೆದಿದೆ. 

ಚಿಕ್ಕನಾಯಕನಹಳ್ಳಿ [ಡಿ.06]: ಮಳೆಗೆ ಶಿಥಿಲಗೊಂಡಿದ್ದ ಶಾಲಾ ಕಟ್ಟಡವೊಂದು ಕುಸಿದುಬಿದ್ದಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಲ್ಲೀಗೆರೆ ಮಜುರೆ ದೊಡ್ಡಪಾಳ್ಯದಲ್ಲಿ ಬೆಳಗ್ಗೆ ನಡೆದಿದೆ. 

ತರಗತಿಗಳಿನ್ನೂ ಪ್ರಾರಂಭವಾಗದ್ದರಿಂದ ಮಕ್ಕಳೆಲ್ಲ ಹೊರಗಿದ್ದ ಕಾರಣ ನಡೆಯಬಹುದಾಗಿದ್ದ ದುರ್ಘಟನೆಯೊಂದು ಅದೃಷ್ಟವಶಾತ್‌ ತಪ್ಪಿ ಹೋಗಿದೆ. ಶಾಲಾ ತರಗತಿಗಳು ಇನ್ನೂ ಆರಂಭಗೊಳ್ಳದ ಕಾರಣ ಮಕ್ಕಳು ಶಾಲೆಯ ಹೊರಗಿದ್ದರು.

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ಶಾಲಾ ಕೊಠಡಿಯ ಒಂದು ಪಾಶ್ರ್ವ ಕುಸಿದುಬಿತ್ತು. ಬಿದ್ದ ರಭಸಕ್ಕೆ ಸಮೀಪದಲ್ಲಿ ಆಟವಾಡುತ್ತಿದ್ದ ಮಕ್ಕಳು ಕಿರುಚಿಕೊಂಡು ದೂರ ಓಡಿಹೋಗಿದ್ದಾರೆ. 

ಕಟ್ಟಡದ ಮುಂಭಾಗದ ಕಂಬ, ಮೇಲ್ಚಾವಣಿಯ ಹೆಂಚು, ತೀರು, ತೊಲೆಗಳು ಕಳಚಿಬಿದ್ದಿವೆ. ಒಂದು ಮಗುವಿನ ಕಿರುಬೆರಳಿಗೆ ಗಾಯವಾಗಿದೆ. ಇದೇವೇಳೆ ಪಕ್ಕದ ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟಡ ಬಿದ್ದ ಸ್ಥಳಕ್ಕೆ ಪರಿಶೀಲನೆಗೆ ಆಗಮಿಸದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!