ನಾಯಕನಾಗಲು ಪತ್ರಿಕೆಗಳ ಪಾತ್ರವೂ ಮುಖ್ಯ: ಶಾಸಕ ರೇಣುಕಾಚಾರ್ಯ

By Govindaraj S  |  First Published Sep 6, 2022, 3:00 AM IST

ನಾನೂ ಒಬ್ಬ ಜವಾಬ್ದಾರಿಯುತ ರಾಜಕೀಯ ನಾಯಕನಾಗಿ ಬೆಳೆಯಲು ಜೆ.ಪಿ.ಚಳವಳಿ ಸೇರಿ ಹಲವಾರು ಹೋರಾಟಗಳು ಹಾಗೂ ಜೆ.ಎಚ್‌.ಪಟೇಲ್‌, ಬಿ.ಎಸ್‌.ಯಡಿಯೂರಪ್ಪರ ಮಾರ್ಗದರ್ಶನದಿಂದಾಗಿ ರಾಜಕಾರಣದಲ್ಲಿ ಒಬ್ಬ ನಾಯಕನಾಗಿದ್ದೇನೆ. 


ಹೊನ್ನಾಳಿ (ಸೆ.06): ನಾನೂ ಒಬ್ಬ ಜವಾಬ್ದಾರಿಯುತ ರಾಜಕೀಯ ನಾಯಕನಾಗಿ ಬೆಳೆಯಲು ಜೆ.ಪಿ.ಚಳವಳಿ ಸೇರಿ ಹಲವಾರು ಹೋರಾಟಗಳು ಹಾಗೂ ಜೆ.ಎಚ್‌.ಪಟೇಲ್‌, ಬಿ.ಎಸ್‌.ಯಡಿಯೂರಪ್ಪರ ಮಾರ್ಗದರ್ಶನದಿಂದಾಗಿ ರಾಜಕಾರಣದಲ್ಲಿ ಒಬ್ಬ ನಾಯಕನಾಗಿದ್ದೇನೆ. ಇದರಲ್ಲಿ ವಿಶೇಷವಾಗಿ ಪತ್ರಿಕೆಗಳ ಪಾತ್ರವೂ ಮುಖ್ಯವಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ತಾಲೂಕು ಘಟಕದ ವತಿಯಿಂದ ಪುರಸಭಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತನ್ನ ರಾಜಕೀಯ ಜೀವನದಲ್ಲಿ ಇಚ್ಛಾಶಕ್ತಿ ಬೆಳಸುವಲ್ಲಿ ಬಿ.ಎಸ್‌.ಯಡಿಯೂರಪ್ಪ ಕಾರಣ, ಅವರೇ ನನ್ನ ರಾಜಕೀಯ ಗುರುಗಳಾಗಿದ್ದಾರೆ. ನಿಜವಾದ ಪತ್ರಕರ್ತರು ಅಸಭ್ಯ, ಅಶ್ಲೀಲ ಪದಗಳ ಬಳಕೆಯಿಂದ ದೂರವಿರಬೇಕು ಪತ್ರಕರ್ತರು ಸಮಾಜಮುಖಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ಎಂದರು.

Tap to resize

Latest Videos

Davanagere: ನೀತಿ, ನೇತಾ, ನಿಯತ್ತು ಬಿಜೆಪಿಯ ಆಧಾರ: ಸಿ.ಟಿ.ರವಿ

ಪತ್ರಕರ್ತರು ಎಚ್ಚರದಿಂದ ಇರಿ: ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಸುದ್ದಿಮನೆಯಲ್ಲಿನ ಪತ್ರಕರ್ತರು ಅನೇಕ ಸಮಸ್ಯೆಗಳ ಮಧ್ಯೆ ಕೆಲಸ ಮಾಡುವ ಪರಿಸ್ಥಿತಿ ಇದೆ. ವೃತ್ತಿಯಲ್ಲಿ ಪ್ರಾಮಾಣಿಕತೆ ಬದ್ಧತೆಯಿಂದ ಕೆಲಸ ಮಾಡಬೇಕಿದೆ ಎಂದರು. ಮಾಧ್ಯಮ ಕ್ಷೇತ್ರದಲ್ಲಿ ಬ್ಲ್ಯಾಕ್‌ಮೇಲ್‌, ನಕಲಿ ಪತ್ರಕರ್ತರೂ ಇದ್ದು ಇವರ ಹಾವಳಿಯಿಂದ ಪ್ರಾಮಾಣಿಕ, ಹಾಗೂ ನೈಜ ಪತ್ರಕರ್ತರು ಹೊರಗುಳಿಯುವ ಪರಿಸ್ಥಿತಿಯೂ ಇದೆ ಈ ಬಗ್ಗೆ ಪತ್ರಕರ್ತರು ಎಚ್ಚರದಿಂದ ಇರಬೇಕು ಎಂದರು. ಶಾಸಕ ಎಂ.ಪಿ.ರೇಣುಕಾಚಾರ್ಯ ರಾಜ್ಯದ ನಾಯಕರಲ್ಲಿಯೇ ವಿಶೇಷ ಹಾಗೂ ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಿದ್ದಾರೆ ಎಂದರು.

ಪ್ರತಿಜ್ಞಾ ವಿಧಿ ಬೋಧನೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿ.ಸಿ.ಲೋಕೇಶ್‌ ಮಾತನಾಡಿ ನಾನು ನ್ಯಾಮತಿ ತಾಲೂಕಿನ ರಾಮೇಶ್ವರದವನಾಗಿದ್ದು ಈ ಕ್ಷೇತ್ರ ಹಾಗೂ ಶಾಸಕರ ಬಗ್ಗೆ ವಿಶೇಷ ಗೌರವವಿದೆ ಎಂದ ಅವರು ಪತ್ರಿಕೋದ್ಯಮದ ಬೆಳವಣಿಗೆ ಕುರಿತು ಮಾತನಾಡಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಾನಂದ ಕಣಸೋಗಿ ಪತ್ರಕರ್ತರ ಕಾರ್ಯ ವೈಖರಿಗಳ ಕುರಿತು ಮಾತನಾಡಿದರು. ಹಿರೇಕತಲ್ಮsದÜ ಡಾ. ಒಡೆಯರ್‌ ಚನ್ನಮಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿದರು. ಸಮಾರಂಭದಲ್ಲಿ ಪತ್ರಕರ್ತ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಜೊತೆಗೆ ಪತ್ರಕರ್ತರಿಗೆ ಪ್ರಮಾಣ ಪತ್ರ ನೀಡಲಾಯಿತು.

ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಕೋರಿ ಯೋಗೀಶ್‌ ಕುಳಗಟ್ಟೆಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಟಿ.ಎಚ್‌.ರಂಗನಾಥ್‌, ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಇ.ಎಂ..ಮಂಜುನಾಥ ಏಕಬೋಟೆ ಮಾತನಾಡಿದರು. ರಾಜ್ಯಸಮಿತಿ ಸದಸ್ಯರಾದ ಚಂದ್ರಣ್ಣ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಫಕ್ರುದ್ದೀನ್‌, ಖಜಾಂಚಿ ಬದರಿನಾಥ್‌ ಚುನಾವಣಾಧಿಕಾರಿಗಳಾದ ತಿಪ್ಪೇಸ್ವಾಮಿ, ಮುದ್ದಯ್ಯ ಹಾಗೂ ಪತ್ರಕರ್ತರು, ಮುಖಂಡರಿದ್ದರು.

ಮಳೆ ಸಂತ್ರಸ್ತರಿಗೆ ವಾರದೊಳಗೆ ಪರಿಹಾರ ನೀಡಿ: ಸಚಿವ ಭೈರತಿ ಬಸವರಾಜ್

ಪತ್ರಿಕಾ ಭವನ, ಪತ್ರಕರ್ತರ ನಿವೇಶನಕ್ಕೆ ಬದ್ಧ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿಗೆ ಸ್ಪಂದಿಸಿದ ಮಾತನಾಡಿದ ಶಾಸಕ ರೇಣುಕಾಚಾರ್ಯ ಅವಳಿ ತಾಲೂಕಿನ ಪತ್ರಕರ್ತರಿಗೆ ನಿವೇಶನ ಹಾಗೂ ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾತಿಗೆ ಬದ್ಧನಾಗಿದ್ದೇನೆ ಎಂದ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆಗೆ ಎರಡು ಲಕ್ಷ ರು. ದೇಣಿಗೆ ನೀಡಲು ಒಪ್ಪಿಗೆ ಸೂಚಿಸಿದರು.

click me!