Gang Robbery : ಮನೆಗೆ ನುಗ್ಗಿದ ಗ್ಯಾಂಗ್ ದರೋಡೆ : ವ್ಯಾಪಾರಿಯ ಅರೆ ನಗ್ನಗೊಳಿಸಿದ ಮಹಿಳೆಯರು

By Kannadaprabha News  |  First Published Dec 15, 2021, 6:43 AM IST
  •   ಮನೆಗೆ ನುಗ್ಗಿದ ಗ್ಯಾಂಗ್ ದರೋಡೆ : ವ್ಯಾಪಾರಿಯ ಅರೆ ನಗ್ನಗೊಳಿಸಿದ ಮಹಿಳೆಯರು
  •  ಮನೆಗೆಲಸಕ್ಕೆ ಸೇರುವ ನೆಪದಲ್ಲಿ ಬಂದಿದ್ದ ಗ್ಯಾಂಗ್‌
  • ಈ ವೇಳೆ ಮನೆಗೆ ಬಂದ ವ್ಯಾಪಾರಿಯ ಅರೆ ನಗ್ನಗೊಳಿಸಿದ್ದ ಮಹಿಳೆಯರು
  •  ಇದೇ ವೇಳೆ ಮನೆಗೆ ನುಗ್ಗಿ ಸಂಘಟನೆ ಹೆಸರಲ್ಲಿ ಮನೆ ಮಾಲಕಿಗೆ ಬೆದರಿಕೆ
  • ಹಣ, ಚಿನ್ನಾಭರಣ ದೋಚಿ ಪರಾರಿ-  6 ಮಂದಿ ಸೆರೆ

 ಬೆಂಗಳೂರು (ಡಿ.15):   ಬಟ್ಟೆ ಹಾಗೂ ಸೌಂದರ್ಯ ವರ್ಧಕ ವಸ್ತುಗಳ ಮಾರಾಟ (Sale) ಮಾಡುತ್ತಿದ್ದ ಮಹಿಳೆಯೊಬ್ಬರ ಮನೆಗೆ (House) ಸಂಘಟನೆಯೊಂದರ ಸದಸ್ಯರು ಎಂದು ಹೇಳಿಕೊಂಡು ನುಗ್ಗಿ ಜೀವ ಬೆದರಿಕೆ ಹಾಕಿ ಚಿನ್ನಾಭರಣ ದರೋಡೆ (Theft) ಮಾಡಿದ್ದ ಮೂರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಸವೇಶ್ವರ ನಗರ (Basaveshwara Nagar) ಠಾಣೆ ಪೊಲೀಸರು (Police) ಸೆರೆ ಹಿಡಿದಿದ್ದಾರೆ. ಜ್ಞಾನ ಭಾರತಿಯ ನಿವಾಸಿ ದೀಪಾ, ಅನಿತಾ, ಪೀಣ್ಯದ ವಿಜಯಾ, ನವೀನ್‌, ಚಂದ್ರಶೇಖರ್‌, ಮಾಹಾಲಿಂಗಯ್ಯ ಬಂಧಿತರಾಗಿದ್ದು, ಆರೋಪಿಗಳಿಂದ 152 ಗ್ರಾಂ ಚಿನ್ನಾಭರಣ, .63 ಸಾವಿರ ನಗದು ಹಾಗೂ ಒಂದು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ  ತಪ್ಪಿಸಿಕೊಂಡಿರುವ ಕೆಲ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಬಸವೇಶ್ವರ ನಗರದ ಶಂಕರ ಮಠದ ಅಂಜು ಜೆಸ್ವಾನಿ ಎಂಬುವರ ಮನೆಗೆ ನುಗ್ಗಿ ಆರೋಪಿಗಳು ಭಾನುವಾರ ಈ ಕೃತ್ಯ ಎಸಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲಸಕ್ಕೆ (Work) ಸೇರುವ ನೆಪದಲ್ಲಿ ಕೃತ್ಯ: ಸೌಂದರ್ಯ ವರ್ಧಕ ವ್ಯಾಪಾರಿ ಜಗದೀಶ್‌ ಅವರಿಂದ ಸೌಂದರ್ಯ ವರ್ಧಕ ವಸ್ತುಗಳನ್ನು ಸಗಟು ದರದಲ್ಲಿ ಖರದಿಸಿ ಬಳಿಕ ಅಂಜು ಜೆಸ್ವಾನಿ ಅವರು, ತಮ್ಮ ಮನೆಯಲ್ಲಿ ಮಾರಾಟ (Sale) ಮಾಡುತ್ತಿದ್ದರು. ಇದರ ಜತೆಗೆ ಬಟ್ಟೆ ಮಾರಾಟ ಸಹ ಇತ್ತು. ಹಲವು ದಿನಗಳಿಂದ ಅವರಿಗೆ ಕೆಂಗೇರಿಯ ಸುಜಾತಾ ಪರಿಚಯಿವಿತ್ತು. ಈ ಸ್ನೇಹದಲ್ಲಿ ಗೆಳತಿಗೆ ಯಾರಾದರೂ ಕೆಲಸದಾಳು ಇದ್ದರೆ ತಿಳಿಸುವಂತೆ ಅಂಜು ಹೇಳಿದ್ದರು. ಆಗ ಸುಜಾತಾ, ತನ್ನ ಗೆಳತಿ ದೀಪಾ ಎಂಬಾಕೆಯನ್ನು ಕೆಲಸಕ್ಕೆ ಸೇರಿಸುವುದಾಗಿ ತಿಳಿಸಿದ್ದರು. ಆದರೆ ಮನೆಯಲ್ಲಿ ಏಕಾಂಗಿಯಾಗಿ ಅಂಜು ನೆಲೆಸಿರುವ ಬಗ್ಗೆ ಮಾಹಿತಿ ತಿಳಿದ ದೀಪಾ, ಆ ಮನೆಯಲ್ಲಿ ದರೋಡೆಗೆ ತನ್ನ ಸಹಚರರ ಜತೆ ಸೇರಿ ಸಂಚು ರೂಪಿಸಿದ್ದಳು ಎಂದು ಪೊಲೀಸರು (Police) ಹೇಳಿದ್ದಾರೆ.

Tap to resize

Latest Videos

undefined

ಅಂತೆಯೇ ಡಿ.12ರಂದು ಕೆಲಸಕ್ಕೆ ಸೇರುವ ನೆಪದಲ್ಲಿ ಅಂಜು ಮನೆಗೆ ದೀಪಾ ಬಂದಿದ್ದಳು. ಅದೇ ಹೊತ್ತಿಗೆ ಆಕೆ ಇಬ್ಬರು ಸಹಚರರು, ಮನೆ ಬಾಡಿಗೆ (rent) ಕೇಳುವ ನೆಪದಲ್ಲಿ ಅಂಜು ಮನೆ ಬಳಿ ಬಂದಿದ್ದರು. ಜಗದೀಶ್‌ ಅವರಿಗೆ ಕರೆ ಮಾಡಿ ಅಂಜು, ನನಗೆ ಸೌಂದರ್ಯ ವರ್ಧಕ ವಸ್ತುಗಳು ಬೇಕಿವೆ. ಕೂಡಲೇ ತಂದು ಕೊಡಿ ಎಂದಿದ್ದರು. ಆದರೆ ಅಂಜು ಮನೆಗೆ ಜಗದೀಶ್‌ ಬಂದಾಗ ಆಕೆ, ತಮ್ಮ ಮಹಡಿಯಲ್ಲಿದ್ದ ನೆರೆಮನೆಗೆ ಹೋಗಿದ್ದರು. ಆಗ ಮನೆಯಲ್ಲಿದ್ದ ದೀಪಾ ಹಾಗೂ ಆಕೆಯ ಸಹಚರರು, ಜಗದೀಶ್‌ನನ್ನು ಬಲವಂತವಾಗಿ ಅರೆ ನಗ್ನಗೊಳಿಸಿದ್ದರು. ಕೆಲ ಹೊತ್ತಿನ ಬಳಿಕ ಅಂಜು ಮನೆಗೆ ಮರಳಿದಾಗ ಜಗದೀಶ್‌ ಸ್ಥಿತಿ ಕಂಡು ಸಿಟ್ಟಿಗೆದ್ದಿದ್ದಾರೆ. ಆಗ ಅವರ ಮನೆಗೆ ಸಂಘಟನೆಯೊಂದರ ಕಾರ್ಯಕರ್ತರ ಹೆಸರಿನಲ್ಲಿ ನುಗ್ಗಿದ್ದ ಮಹಾಲಿಂಗ, ನವೀನ ಹಾಗೂ ಚಂದ್ರಶೇಖರ, ‘ನೀನು ಮನೆಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದೀಯಾ’ ಎಂದು ಪ್ರಶ್ನಿಸಿದ್ದಾರೆ. ನಮಗೆ ಎಲ್ಲ ವಿಷಯ ಗೊತ್ತಾಗಿದೆ. ಮನೆಯ ಕೆಳಗೆ ಪೊಲೀಸರು (Police) ಹಾಗೂ ಮಾಧ್ಯಮದವರು ಇದ್ದಾರೆ ಎಂದು ಹೇಳಿ ಮೊಬೈಲ್‌ನಲ್ಲಿ (Mobile) ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾರೆ.

ನಿಮ್ಮ ವಿಡಿಯೋ ಬಹಿರಂಗಪಡಿಸಿ ಮರ್ಯಾದೆ ಕಳೆಯುತ್ತೇವೆ ಎಂದು ಬೆದರಿಸಿದ್ದಾರೆ. ಕೊನೆಗೆ ಜಗದೀಶ್‌ ಅವರಿಂದ ಫೋನ್‌ ಪೇ ಮೂಲಕ ತಮ್ಮ ಖಾತೆಗೆ 25 ಸಾವಿರ ವರ್ಗಾಯಿಸಿಕೊಂಡರು. ಬಳಿಕ ಅಂಜು ಅವರ ಮನೆಯಲ್ಲಿದ್ದ .9.5 ಲಕ್ಷ ಮೌಲ್ಯದ ಚಿನ್ನಾಭರಣ (Gold) ಹಾಗೂ .1.75 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್‌ ಠಾಣೆಗೆ ಅಂಜು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!