ಬಂಧಿಸಲು ಹೋದ ಪೊಲೀಸರ ಮೇಲೆ ದರೋಡೆಕೋರರ ಹಲ್ಲೆ

Kannadaprabha News   | Asianet News
Published : Jul 09, 2020, 10:40 AM IST
ಬಂಧಿಸಲು ಹೋದ ಪೊಲೀಸರ ಮೇಲೆ ದರೋಡೆಕೋರರ ಹಲ್ಲೆ

ಸಾರಾಂಶ

ದರೋಡೆಗೆ ಸಂಚು ರೂಪಿಸಿದ್ದವರನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹೆಸರುಘಟ್ಟಕೆರೆ ಸಮೀಪ ನಡೆದಿದೆ. ಸಬ್‌ಇನ್ಸ್‌ಪೆಕ್ಟರ್‌ ವಸಂತ್‌ಕುಮಾರ್‌ ಮತ್ತು ಕಾನ್ಸ್‌ಟೇಬಲ್‌ ಇಮಾಮ್‌ ಸಾಬ್‌ ಗಾಯಗೊಂಡವರು.

ಬೆಂಗಳೂರು(ಜು.09): ದರೋಡೆಗೆ ಸಂಚು ರೂಪಿಸಿದ್ದವರನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹೆಸರುಘಟ್ಟಕೆರೆ ಸಮೀಪ ನಡೆದಿದೆ. ಸಬ್‌ಇನ್ಸ್‌ಪೆಕ್ಟರ್‌ ವಸಂತ್‌ಕುಮಾರ್‌ ಮತ್ತು ಕಾನ್ಸ್‌ಟೇಬಲ್‌ ಇಮಾಮ್‌ ಸಾಬ್‌ ಗಾಯಗೊಂಡವರು.

ಹಲ್ಲೆ ನಡೆಸಿದ ವಿನಾಯಕ ನಗರದ ಲಕ್ಷ್ಮೇಕಾಂತ್‌ (20), ಹೆಸರಘಟ್ಟನಿವಾಸಿ ಆನಂದ್‌ (20), ಚಿಕ್ಕ ಬಿದರಕಲ್ಲಿನ ರಾಕೇಶ್‌ (21) ಬಂಧಿತರು. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸೋಲದೇನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ವೈರಸ್ ಹೆಸರಲ್ಲಿ ಒಂದು ಧರ್ಮ ದೂಷಿಸುವುದು ತಪ್ಪು: ಡಿಕೆಶಿ

ಮಂಗಳವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಹೆಸರಘಟ್ಟಕೆರೆ ಸಮೀಪ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಸಂಚು ರೂಪಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಗಸ್ತಿನಲ್ಲಿದ್ದ ಪಿಎಸ್‌ಐ ವಸಂತ್‌ಕುಮಾರ್‌ ಹಾಗೂ ಕಾನ್ಸ್‌ಟೇಬಲ್‌ ಇಮಾಮ್‌ ಸಾಬ್‌ ಸಾಬ್‌ ಸ್ಥಳಕ್ಕೆ ತೆರಳಿದ್ದರು.

ಕೊರೋನಾ ಆರ್ಭಟ: ಹೋಟೆಲ್ ಬಂದ್‌ ಮಾಡಲು ನಿರ್ಧಾರ

ಈ ವೇಳೆ ಮಾರಕಾಸ್ತ್ರ ಹಿಡಿದು ನಿಂತಿದ್ದ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರಿಗೆ ಗಾಯವಾಗಿದ್ದು, ಆನಂದ್‌ ಎಂಬಾತನನ್ನು ಹಿಡಿದಿದ್ದರು. ಈತನನ್ನು ವಿಚಾರಣೆಗೊಳಪಡಿಸಿದಾಗ ಉಳಿದವರ ಬಗ್ಗೆ ಬಾಯ್ಬಿಟ್ಟಎಂದು ಪೊಲೀಸರು ತಿಳಿಸಿದರು.

PREV
click me!

Recommended Stories

ಮಹಿಳೆಯರ ಜತೆ ಅನುಚಿತ ವರ್ತನೆ - ವಾರದ ಬಳಿಕವೂ ಬೀಳುತ್ತೆ ಕೇಸ್
ಬೆಂಗಳೂರು : ಹೊರ ವಲಯಕ್ಕೆ ಹೊಸ ವರ್ಷದ ಪಾರ್ಟಿಗಳು ಶಿಫ್ಟ್