ಕೊಪ್ಪಳ: ಕೋವಿಡ್‌ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಸೋಂಕು, ಮತ್ತೆ 8 ಜನರಿಗೆ ಸೋಂಕು

By Kannadaprabha NewsFirst Published Jul 9, 2020, 10:35 AM IST
Highlights

35 ವರ್ಷದ ಇಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೋಂಕು ದೃಢ| ಕಳೆದ ವಾರದಿಂದ ಕೆಲಸ ಮಾಡುತ್ತಿದ್ದವರಿಗೆ ಸ್ವ್ಯಾಬ್‌ ಟೆಸ್ಟ್‌ಗೆ ಕಳುಹಿಸಲಾಗಿದ್ದು, ಇವರಲ್ಲಿಯೂ ಸೋಂಕು ಇರುವುದು ಖಚಿತವಾಗಿದೆ| ಇದುವರೆಗೂ ಕೊಪ್ಪಳ ಜಿಲ್ಲೆಯಲ್ಲಿ 157 ಜನರಿಗೆ ಪಾಸಿಟಿವ್‌, ಇದರಲ್ಲಿ 87 ಜನರು ಗುಣಮುಖರಾಗಿ ಬಿಡುಗಡೆ|

ಕೊಪ್ಪಳ(ಜು.09): ಕೋವಿಡ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಇಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಇದನ್ನು ಸೇರಿದಂತೆ ಜಿಲ್ಲೆಯಲ್ಲಿ ಬುಧುವಾರ 8 ಜನರಿಗೆ ಸೋಂಕು ಪತ್ತೆಯಾಗಿದೆ.

35 ವರ್ಷದ ಇಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ವಾರದಿಂದ ಕೆಲಸ ಮಾಡುತ್ತಿದ್ದವರಿಗೆ ಸ್ವ್ಯಾಬ್‌ ಟೆಸ್ಟ್‌ಗೆ ಕಳುಹಿಸಲಾಗಿದ್ದು, ಇವರಲ್ಲಿಯೂ ಸೋಂಕು ಇರುವುದು ಖಚಿತವಾಗಿದೆ ಪ್ರಯೋಗಾಲಯ ವರದಿಯಿಂದ.

ಗಂಗಾವತಿಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕಿತರ ಸಂಖ್ಯೆ: ಎಚ್ಚೆತ್ತುಕೊಳ್ಳದ ಜನತೆ

ಪೇದೆಗೆ ಕೋರೊನಾ ಬಂದಿರುವ ಬೆನ್ನಲ್ಲೇ ಇಬ್ಬರು ಕೋವಿಡ್‌ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ಬಂದಿರುವುದನ್ನು ನೋಡಿದರೇ ಕೋರೊನಾ ವಾರಿಯರ್ಸ್‌ಗೆ ಸುತ್ತಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಅಷ್ಟಕ್ಕೂ ಕೋವಿಡ್‌ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ಬಂದಿರುವುದನ್ನು ನೋಡಿದರೇ ಅಲ್ಲಿ ಅವರಿಗೆ ಸರಿಯಾದ ಸುರಕ್ಷತೆ ಇರಲಿಲ್ಲವೇ ಅಥವಾ ಅವರ ಬೇಜವಾಬ್ದಾರಿಯಿಂದ ಆಯಿತೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಇದುವರೆಗೂ 157 ಜನರಿಗೆ ಪಾಸಿಟಿವ್‌ ಬಂದಿದ್ದು, ಇದರಲ್ಲಿ 87 ಜನರು ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದರೇ 67 ಜನರು ಸಕ್ರೀಯ ಪ್ರಕರಣಗಳಾಗಿವೆ. ಈ ಪೈಕಿ ಓರ್ವನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 

click me!