ಶಿವಮೊಗ್ಗ: ರಸ್ತೆ ಮೇಲೆ 2 ಅಡಿ ನೀರು, ಬಾಳೆಕೊಪ್ಪ ಸಂಪರ್ಕ ಸಂಪೂರ್ಣ ಕಡಿತ

By Kannadaprabha News  |  First Published Sep 4, 2019, 10:36 AM IST

ಶಿವಮೊಗ್ಗದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಹೊಸನಗರದಲ್ಲಿ ರಸ್ತೆಯ ಮೇಲೆ ಎರಡು ಅಡಿ ನೀರು ತುಂಬಿ ನಿಂತು ಬಾಳೆಕೊಪ್ಪ ಸಂಪರ್ಕ ಕಡಿತಗೊಂಡಿತ್ತು. ಸಂಪರ್ಕ ಕಡಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ.


ಶಿವಮೊಗ್ಗ(ಸೆ.04): ಹೊಸನಗರ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇದ್ದು, ನಗರ ಹೋಬಳಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆ ಮೇಲೆ ಎರಡು ಅಡಿ ನೀರು ನಿಂತು ಬಾಳೆಕೊಪ್ಪ ಸಂಪರ್ಕ ಕಡಿತಗೊಂಡಿತ್ತು.

ಇದರಿಂದಾಗಿ ಈ ಭಾಗದ ಮಕ್ಕಳಿಗೆ ಮಂಗಳವಾರ ಶಾಲೆಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಈ ರಸ್ತೆಗೊಂದು ಮೋರಿ ಬೇಕೆಂಬುದು ಗ್ರಾಮಸ್ಥರ ಬಹಳ ಸಮಯದ ಬೇಡಿಕೆ. ಆದರೆ ಇದನ್ನು ಯಾರೂ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿಲ್ಲ. ಇದರ ಪರಿಣಾಮ ರಸ್ತೆಯ ಮೇಲೆಯೇ ನೀರು ಬಂದಿದೆ.

Tap to resize

Latest Videos

ನೀರು ನಿಂತು ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದ್ದಂತೆ ಹೊಸನಗರ ತಹಸೀಲ್ದಾರ್‌ ಶ್ರೀಧರಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

click me!