ಮನೆಯಲ್ಲಿ ಬ್ಲೇಡ್‌ನಿಂದ ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆರ್‌ಎಂಪಿ ವೈದ್ಯ| ಗದಗ ನಗರದ ನಂದೀಶ್ವರ ಮಠದ ಹಿಂಭಾಗ ಪ್ರದೇಶದಲ್ಲಿ ನಡೆದ ಘಟನೆ| ಆ್ಯಂಬುಲೆಸ್ಸ್ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಕುಟುಂಬದ ಸದಸ್ಯರು|
ಗದಗ(ಫೆ.17): ದೇಹಕ್ಕೆ ಬ್ಲೇಡ್‌ನಿಂದ ಬೇಕಾಬಿಟ್ಟಿಕುಯ್ದುಕೊಂಡು ಆರ್‌ಎಂಪಿ ವೈದ್ಯನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಗದಗ ನಗರದಲ್ಲಿ ವರದಿಯಾಗಿದೆ.
ಇಲ್ಲಿನ ಗದಗ ನಗರದ ನಂದೀಶ್ವರ ಮಠದ ಹಿಂಭಾಗದಲ್ಲಿನ ಮನೆಯಲ್ಲಿ ಬ್ಲೇಡ್‌ನಿಂದ ಕೊಯ್ದುಕೊಂಡಿರುವ ಗುರುರಾಜ್ ಜಾಗೀರ್‌ದಾರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ತಕ್ಷಣ ಕುಟುಂಬದ ಸದಸ್ಯರು ಆ್ಯಂಬುಲೆಸ್ಸ್ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.
'ಕಾಂಗ್ರೆಸ್ ಇಷ್ಟವಿಲ್ಲ, ಬಿಜೆಪಿ ಸೇರೋದಕ್ಕೆ ತುದಿಗಾಲ ಮೇಲೆ ನಿಂತ 'ಕೈ' ಶಾಸಕ'
ಬ್ಲೇಡ್ ಹಾಕಿಕೊಳ್ಳುವ ಮೊದಲು ಮನೆ ಕಿಟಕಿ ಗ್ಲಾಸ್‌ನ್ನು ಸಹ ಪುಡಿ ಪುಡಿ ಮಾಡಿದ್ದು, ಯಾಕೆ ಹೀಗೆ ಮಾಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಬಡಾವಣಾ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.