ಪ್ರವಾಹರೂಪಿಯಾಗಲು ಸಿದ್ಧವಾಗುತ್ತಿರುವ ನದಿಗಳು: ಇನ್ನೂ 5 ದಿನ ಭಾರೀ ಮಳೆ

By Kannadaprabha NewsFirst Published Jul 18, 2020, 10:28 AM IST
Highlights

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದು ಅನೇಕ ಕಡೆಗಳಲ್ಲಿ ಮನೆಗಳು, ಸಾರ್ವಜನಿಕ ಸೊತ್ತು ಹಾನಿ ಉಂಟಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಹಾನಿಯ ತೀವ್ರತೆ ಹೆಚ್ಚಾಗಿತ್ತಲ್ಲದೆ, ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಗಳೂರು(ಜು.18): ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದು ಅನೇಕ ಕಡೆಗಳಲ್ಲಿ ಮನೆಗಳು, ಸಾರ್ವಜನಿಕ ಸೊತ್ತು ಹಾನಿ ಉಂಟಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಹಾನಿಯ ತೀವ್ರತೆ ಹೆಚ್ಚಾಗಿತ್ತಲ್ಲದೆ, ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪುತ್ತೂರಿನಿಂದ ಪಾಣಾಜೆಗೆ ಸಂಪರ್ಕ ಕಲ್ಪಿಸುವ ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿತ್ತು. ಇನ್ನೂ 5 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಳೆ ಇದೇ ರೀತಿ ಮುಂದುವರಿದರೆ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆಯೂ ಇದೆ.

ದ.ಕ. ಜಿಲ್ಲೆಗೆ 25 ಸಾವಿರ ಕೋವಿಡ್‌ ಟೆಸ್ವ್‌ ಕಿಟ್‌: ಅಶ್ವತ್ಥನಾರಾಯಣ

ಜಿಲ್ಲಾದ್ಯಂತ ಮಳೆ ಬೀಳುತ್ತಿರುವುದರಿಂದ ನೇತ್ರಾವತಿ, ಕುಮಾರಧಾರ, ಫಲ್ಗುಣಿ ನದಿಗಳಲ್ಲಿ ನೀರಿನ ಮಟ್ಟದಿಢೀರ್‌ ಹೆಚ್ಚಿದೆ. ಮಂಗಳೂರಿನಲ್ಲಿ ಬೆಳಗ್ಗಿನಿಂದಲೇ ಸುರಿದ ಭಾರಿ ಮಳೆಯಿಂದಾಗಿ ಕೊಟ್ಟಾರ, ಪಂಪ್ವೆಲ್, ಬಿಜೈ, ಕೆಎಸ್‌ ರಾವ್‌ ರಸ್ತೆ ಮತ್ತು ಇತರ ಸ್ಥಳಗಳಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗಿತ್ತು.

ಮನೆಗಳಿಗೆ ಹಾನಿ: ಮಂಗಳೂರಿನ ನೀರುಮಾರ್ಗ ಬೊಂಡಂತಿಲದಲ್ಲಿ ಮರ ಬಿದ್ದು ಮನೆಯೊಂದು ಸಂಪೂರ್ಣ ಹಾನಿಗೊಂಡಿದೆ. ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ಆವರಣ ಗೋಡೆ ಮನೆಯ ಮೇಲೆ ಕುಸಿದು ಹಾನಿಯುಂಟಾಗಿದೆ. ಬಜ್ಪೆಯ ಕಾಳಾವರ ಗ್ರಾಮದಲ್ಲಿ ಕಾಂಪೌಂಡ್‌ ಗೋಡೆ ಕುಸಿದಿದೆ. ಉಳ್ಳಾಲದ ಹಳೆಕೋಟೆ ಎಂಬ ಗುಡ್ಡದ ಬಳಿ ಅಪಾಯದ ಸ್ಥಿತಿಯಲ್ಲಿದ್ದ ಮೂರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪುತ್ತೂರು- ಪಾಣಾಜೆ ಸಂಪರ್ಕಿಸುವ ಚೆಲ್ಯಡ್ಕ ಸೇತುವೆ ಈ ಮಳೆಗಾಲದಲ್ಲಿ ಮೂರನೇ ಬಾರಿಗೆ ಮುಳುಗಿ ಜನರು ಸುತ್ತುಬಳಸಿ ಪ್ರಯಾಣಿಸಬೇಕಾಯಿತು.

ಕೊರೋನಾ ಕಾಟ: 30 ಕಿ.ಮೀ. ಸೈಕಲ್‌ ತುಳಿದು ಕರ್ತವ್ಯಕ್ಕೆ ಬರುವ ಚಾಲಕ..!

ಬೆಳ್ತಂಗಡಿಯಲ್ಲಿ ಪ್ರವಾಹ ಭೀತಿ: ಕಳೆದ ವರ್ಷ ಪ್ರವಾಹ ತೀವ್ರತೆಗೆ ತುತ್ತಾಗಿದ್ದ ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ತೀವ್ರಗೊಂಡಿದೆ. ದಿಡುಪೆ ಪ್ರದೇಶದಲ್ಲಿ ನದಿಗಳು ತುಂಬಿ ಹರಿಯುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟಏರಿಕೆಯಾಗಿದ್ದು, ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲಿನ ತಗ್ಗು ಪ್ರದೇಶಗಳನ್ನು ಮುಳುಗಿಸುವ ಅಪಾಯವನ್ನು ಸೃಷ್ಟಿಸಿದೆ.

ಪಶ್ಚಿಮ ಘಟ್ಟಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಮಟ್ಟತೀವ್ರವಾಗಿ ಹೆಚ್ಚಾಗಿದೆ. ಕಳೆದ ವರ್ಷ ಜಲಪ್ರವಾಹದ ಬಳಿಕ ನದಿಗಳಲ್ಲಿ ಹೂಳು ತುಂಬಿದ್ದು ಈ ವರ್ಷ ಇನ್ನಷ್ಟುಅಪಾಯ ಸೃಷ್ಟಿಸುವ ಸಾಧ್ಯತೆಯನ್ನು ಸ್ಥಳೀಯರು ಅಂದಾಜಿಸಿದ್ದಾರೆ.

ಕರಾವಳಿ ಭಾಗದಲ್ಲಿ 3 ರಿಂದ 3.3 ಮೀಟರ್‌ ಎತ್ತರದ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು. 18 ಮತ್ತು 19ರಂದು ಭಾರಿ ಮಳೆಯಾಗಲಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಕುಕ್ಕೆ: ಆಷಾಢ ಮಳೆ ಆರ್ಭಟ, ಮುಳುಗಡೆ ಭೀತಿಯಲ್ಲಿ ಕುಮಾರಧಾರ ಸ್ನಾನಘಟ್ಟ

ಘಟ್ಟಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರದಿಂದ ಶುಕ್ರವಾರದ ತನಕವೂ ನಿರಂತರವಾಗಿ ಸುರಿದ ಆಷಾಢ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯು ತುಂಬಿ ಹರಿಯುತ್ತಿದೆ. ಕುಮಾರಧಾರ ನದಿಯಲ್ಲಿ ಭಾರಿ ಪ್ರವಾಹ ಹರಿದು ಬಂದುದರಿಂದ ಕುಮಾರಧಾರ ಸ್ನಾನಘಟ್ಟವು ಮುಳುಗಡೆ ಭೀತಿ ಎದುರಿಸುತ್ತಿದೆ. ಕುಮಾರಧಾರ ನದಿಯ ಕಿಂಡಿ ಅಣೆಕಟ್ಟು ಮುಳುಗಡೆ ಭೀತಿಯಲ್ಲಿದೆ. ಎಲ್ಲೆಡೆ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.

ಸ್ನಾನಘಟ್ಟಜಲಾವೃತ: ಕುಮಾರಪರ್ವತ ಸೇರಿದಂತೆ ಘಟ್ಟಪ್ರದೇಶದಲ್ಲಿ ಸುರಿದ ಬಾರಿ ಮಳೆಯ ಪರಿಣಾಮ ಕುಮಾರಧಾರ ನದಿಯು ಉಕ್ಕಿ ಹರಿಯಿತು. ಇದರಿಂದಾಗಿ ಕುಮಾರಧಾರ ಸ್ನಾನಘಟ್ಟವು ಮುಳುಗಡೆಗೊಂಡಿದೆ. ಲಾಕ್‌ಡೌನ್‌ ಕಾರಣದಿಂದ ದೇವಸ್ಥಾನದಲ್ಲಿ ದೇವರ ದರುಶನಕ್ಕೆ ನಿರ್ಬಂಧವಿರುವುದರಿಂದ ಮತ್ತು ಭಕ್ತರಿಗೆ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಅವಕಾಶವಿಲ್ಲದ ಕಾರಣ ಸ್ನಾನಘಟ್ಟಮುಳುಗಡೆ ಭೀತಿಯು ಯಾವುದೇ ಸಮಸ್ಯೆ ಸೃಷ್ಟಿಸಿಲ್ಲ. ನೀರಿನ ಹರಿವು ಅಧಿಗೊಂಡ ಕಾರಣ ಸಮೀಪದ ಕೃಷಿ ತೋಟಗಳಿಗೆ ನೀರು ನುಗ್ಗಿತು.

ದೇಶೀಯ ಕೊರೋನಾ ಲಸಿಕೆ ಕೊವ್ಯಾಕ್ಸಿನ್‌ ಮಾನವ ಪ್ರಯೋಗ ಶುರು!

ನಿರಂತರ ಭಾರಿ ಮಳೆಯಿಂದಾಗಿ ಬಾಳುಗೋಡು ಹೊಳೆಯು ತುಂಬಿ ಹರಿಯುತ್ತಿದೆ. ಹರಿಹರ ಸೇತುವೆ, ಕೊಪ್ಪಡ್ಕ ಸೇತುವೆ, ಐನೆಕಿದು- ಗುಂಡಡ್ಕ ಸೇತುವೆ ಮುಳುಗಡೆ ಭೀತಿ ಎದುರಿಸುತ್ತದೆ. ಮಾತ್ರವಲ್ಲದೆ ಇಲ್ಲಿನ ಪರಿಸರದ ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು,ಪಂಜ, ಬಳ್ಪ, ಏನೆಕಲ್‌, ನಿಂತಿಕಲ್‌, ಬಿಳಿನೆಲೆ, ನೆಟ್ಟಣ ಮೊದಲಾದೆಡೆ ನಿರಂತರ ಮಳೆಯಾದುದರಿಂದ ಈ ಪರಿಸರದಲ್ಲಿ ಹರಿಯುವ ನದಿ ತೊರೆಗಳು ತುಂಬಿ ಹರಿಯುತ್ತಿವೆ.

click me!