ಸ್ವಾರ್ಥ, ಅನಾ​ಗ​ರಿ​ಕ​ತೆ​ಯಿಂದ ನದಿ ಅಸ್ತಿ​ತ್ವಕ್ಕೆ ಧಕ್ಕೆ: ಸೂಲಿ​ಬೆ​ಲೆ

By Kannadaprabha NewsFirst Published Nov 30, 2019, 2:42 PM IST
Highlights

ಮಡಿಕೇರಿ ಕಾವೇರಿ ನದಿ ತಟದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ನದಿ ಹಬ್ಬ-2019 ಕಾರ್ಯಕ್ರಮ ನಡೆಯಿತು. ಮನುಷ್ಯನ ಸ್ವಾರ್ಥ, ಅನಾಗರಿಕ ಚಟುವಟಿಕೆಗಳಿಂದ ನದಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದು ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ(ನ.30): ಮನುಷ್ಯನ ಸ್ವಾರ್ಥ, ಅನಾಗರಿಕ ಚಟುವಟಿಕೆಗಳಿಂದ ನದಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದು ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ವಿಷಾದ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಕಾವೇರಿ ರಿವರ್‌ ಸೇವಾ ಟ್ರಸ್ಟ್‌, ಕಾವೇರಿ ಮಹಾ ಆರತಿ ಬಳಗ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಗಳ ಸಂಯುಕ್ತಾಶ್ರಯದಲ್ಲಿ 100ನೇ ತಿಂಗಳ ಮಹಾ ಆರತಿ ಅಂಗವಾಗಿ ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿ ತಟದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ನದಿ ಹಬ್ಬ-2019 ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ​ದ್ದಾರೆ.

'ನಮ್ಮ ದೇಶ ಆಳೋಕ್ಕೆ ಪ್ರಧಾನಿ ಮೋದಿ ಲಾಯಕ್ ಅಲ್ಲ'

ನಾಗ​ರಿಕತೆ ಉಗಮ ಸ್ಥಾನ ನದಿಗಳ ಅಸ್ತಿತ್ವ ಉಳಿದಲ್ಲಿ ಮಾತ್ರ ಸಂಸ್ಕೃತಿ, ನಾಗರಿಕತೆ ಉಳಿದುಕೊಳ್ಳಲು ಸಾಧ್ಯ. ಯುವ ಪೀಳಿಗೆಯ ಸಮೃದ್ಧ ಭವಿಷ್ಯಕ್ಕೆ ನದಿಗಳನ್ನು ಸಂರಕ್ಷಿಸುವುದು ಅತ್ಯಗತ್ಯ. ಆದ್ದರಿಂದ ಇಂದಿನ ಯುವ ಸಮೂಹ ನದಿಗಳ ರಕ್ಷಕರಾಗಬೇಕಿದೆ. ನೀರನ್ನು ಪೋಲು ಮಾಡದೆ ನಿಯಮಿತ ಬಳಕೆ ಮೂಲಕ ಅಮೂಲ್ಯವಾದ ನೀರನ್ನು ಸಂರಕ್ಷಿಸಬೇಕಿದೆ ಎಂದಿದ್ದಾರೆ.

ಭೂಸರ್ವೇಕ್ಷಣ ಇಲಾಖೆ ನಿವೃತ್ತ ಉಪ ಮಹಾ ನಿರ್ದೇಶಕ ಎಚ್‌.​ಎ​ಸ್‌.​ಎ​ನ್‌.​ಪ್ರ​ಕಾಶ್‌ ಮಾತ​ನಾಡಿ, ಭಾರತೀಯ ಸಂಸ್ಕೃತಿ ಹಲವು ಹಬ್ಬಗಳನ್ನು ಒಳಗೊಂಡಿದೆ. ಕಾವೇರಿ ನದಿ ಹಬ್ಬ ಎಂಬ ವಿನೂತನ ಕಾರ್ಯಕ್ರಮ ಮೂಲಕ ನದಿಗಳ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದಿದ್ದಾರೆ.

'ಭಾರತೀಯ ಮುಸ್ಲಿಮರಿಗೆ ರಾಮ, ಕೃಷ್ಣ ‘ರಾಷ್ಟ್ರೀಯ ಹೀರೊ’ ಆಗಲಿ'..!

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್‌.ಚಂದ್ರ​ಮೋ​ಹನ್‌ ಪ್ರಾಸ್ತಾ​ವಿಕ ಮಾತ​ನಾ​ಡಿ​ದ​ರು. ನಮಾಮಿ ಕಾವೇರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಪರಿ​ಸರ ಜಾಗೃತಿ ಜಾಥಾ:

ಕಾರ್ಯಕ್ರಮಕ್ಕೂ ಮುನ್ನ ಕಾವೇರಿ ನದಿ ನೀರಿನ ಸಂರಕ್ಷಣೆಗಾಗಿ ಪಟ್ಟಣದ ಶಾಲಾ ಕಾಲೇಜಿನ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‌ ಆಶ್ರಯದಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಲಾಯಿತು.

ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಿಂದ ಆರಂಭಗೊಂಡ ಪರಿಸರ ಜಾಗೃತಿ ಜಾಥಾಕ್ಕೆ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕರೂ ಆದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‌ ಗಳ ಜಿಲ್ಲಾ ನೋಡಲ್‌ ಅಧಿಕಾರಿ ಟಿ.ಜಿ.ಪ್ರೇಮಕುಮಾರ್‌ ಚಾಲನೆ ನೀಡಿದರು.

ಜಾಥಾದಲ್ಲಿ ಕೂಡಿಗೆ ಕೊಡಗು ಸೈನಿಕ ಶಾಲೆ, ಫಾತಿಮ ಪ್ರೌಢಶಾಲೆ, ಅತ್ತೂರು ಜ್ಞಾನಗಂಗಾ ಶಾಲೆ, ವಿಸ್ಡಮ್‌ ಕಾಲೇಜು, ಸರ್ಕಾರಿ ಪಿಯೂ ಪ್ರೌಢಶಾಲೆಯ ಖPಇ( ಸ್ಟುಡೆಂಟ್‌ ಪೊಲೀಸ್‌ ಕೆಡೆಚ್‌) ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೂರ್ವಾಹ್ನ ನಡೆದ ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನದಿ ತಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆರತಿ ಕ್ಷೇತ್ರಕ್ಕೆ ಶಿಲನ್ಯಾಸ ಮಾಡಿದರು. ನಂತರ ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು.

JDS, ಕಾಂಗ್ರೆಸ್ ಶಾಸಕರು BJP ಸೇರೋಕೆ ತುದಿಗಾಲಲ್ಲಿದ್ದಾರೆ: ಶ್ರೀರಾಮುಲು

ಅಮ್ಮತ್ತಿಕನ್ನೆ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಪ.ಪಂ. ಸದಸ್ಯರಾದ ಶೇಖ್‌ ಖಲೀಮುಲ್ಲ, ಸುರೇಶ್‌, ನದಿ ಸ್ವಚ್ಛತಾ ಆಂದೋಲನ ಪ್ರಮುಖರಾದ ಎಚ್‌.ಟಿ.ಅನಿಲ್‌, ಎಸ್‌.​ಎ​ಸ್‌.​ಸಂಪತ್‌ ಕುಮಾರ್‌, ರೀನಾ ಪ್ರಕಾಶ್‌, ಡಿ.ಆ​ರ್‌.​ಸೋ​ಮ​ಶೇ​ಖರ್‌, ಬೋಸ್‌ ಮೊಣ್ಣಪ್ಪ, ಆರತಿ ಬಳಗದ ವನಿತಾ ಚಂದ್ರಮೋಹನ್‌, ವಿ.ಎ​ನ್‌.​ವ​ಸಂತ​ಕು​ಮಾರ್‌, ಶಿವಾ​ನಂದ್‌, ಎಂ.ಎ​ನ್‌.​ಕು​ಮಾ​ರ​ಸ್ವಾಮಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್‌.ವಿ.ಶಿವಪ್ಪ ಮತ್ತಿತರರು ಇದ್ದರು.

click me!