ರಾಜ್ಯದಲ್ಲಿ ತೀವ್ರ ಬರಗಾಲ ಬಂದಿದ್ದು ಇದು ಕೊಡಗು ಜಿಲ್ಲೆಯನ್ನೂ ಬಿಟ್ಟು ಬಿಡದೆ ಕಾಡುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಮಿತಿ ಮೀರಿದ್ದು ನದಿ, ಹಳ್ಳ ತೊರೆಗಳು ಬತ್ತಿ ಹೋಗುತ್ತಿವೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮಾ.09): ರಾಜ್ಯದಲ್ಲಿ ತೀವ್ರ ಬರಗಾಲ ಬಂದಿದ್ದು ಇದು ಕೊಡಗು ಜಿಲ್ಲೆಯನ್ನೂ ಬಿಟ್ಟು ಬಿಡದೆ ಕಾಡುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಮಿತಿ ಮೀರಿದ್ದು ನದಿ, ಹಳ್ಳ ತೊರೆಗಳು ಬತ್ತಿ ಹೋಗುತ್ತಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಕೊಡಗು ಜಿಲ್ಲಾಡಳಿತ ನದಿ, ತೊರೆಗಳ ನೀರನ್ನು ಕುಡಿಯುವ ಉದ್ದೇಶವಲ್ಲದೆ ಬೇರೆ ಉದ್ದೇಶಗಳಿಗೆ ಉಪಯೋಗಿಸದಂತೆ ನಿಷೇಧಾಜ್ಞೆ ಏರಿದೆ. ಆದರೆ ನೂರಾರು ಜನರು ಕಾವೇರಿ ನದಿಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ಕೃಷಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಬಳಸಲಾಗುತ್ತಿದೆ. ಇದು ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.
undefined
ಕೊಡಗಿನ ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ಮಾರ್ಚಿ ತಿಂಗಳ ಆರಂಭದಲ್ಲಿಯೇ ಬತ್ತಿಹೋಗುತ್ತಿದೆ. ಮತ್ತೊಂದೆಡೆ ಪ್ರತೀ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲೂ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದ್ದು ಜನರು ಪರದಾಡುವಂತೆ ಆಗಿದೆ. ಹೀಗಾಗಿಯೇ ಜಿಲ್ಲಾಡಳಿತ ಕಾವೇರಿ ನದಿ ಸೇರಿದಂತೆ ಯಾವುದೇ ನದಿ, ತೊರೆಗಳಲ್ಲಿನ ನೀರನ್ನು ಕುಡಿಯುವ ಉದ್ದೇಶಗಳಿಗೆ ಅಲ್ಲದೆ ಬೇರೆ ಉದ್ದೇಶಗಳಿಗೆ ಬಳಸದಂತೆ ನಿಷೇಧಾಜ್ಞೆ ಹೊರಡಿಸಿದೆ. ಕಾವೇರಿ ನದಿಯಲ್ಲಿ ಈಗಾಗಲೇ ನೀರಿನ ಹರಿಯುವಿಕೆಯಲ್ಲಿ ಬಹುತೇಕ ಕಡಿಮೆಯಾಗಿದೆ. ನದಿಯ ಕಲ್ಲುಬಂಡೆಗಳ ಸಂದಿ, ತಗ್ಗು ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದೆ.
Karnika: ಮುಳ್ಳುಗದ್ದುಗೆ ಮೇಲೆ ರಾಮಲಿಂಗೇಶ್ವರ ಸ್ವಾಮಿ ನುಡಿದ ಕಾರ್ಣಿಕ ಏನು ಗೊತ್ತಾ?
ನದಿಯ ಬಹುತೇಕ ಕಡೆಗಳಲ್ಲಿ ನೀರು ತಳಮುಟ್ಟಿದೆ. ನದಿಗಳಲ್ಲಿ ಈ ಪರಿಸ್ಥಿತಿ ಇರುವುದರಿಂದಲೇ ಜಿಲ್ಲಾಡಳಿತ ನದಿ, ತೊರೆಗಳ ನೀರನ್ನು ಇತರೆ ಉದ್ದೇಶಗಳಿಗೆ ನೀರು ಬಳಸದಂತೆ ಸೂಚಿಸಲಾಗಿದೆ. ಆದರೆ ರೈತರು ಸೇರಿದಂತೆ ಇತರೆ ಕೆಲವು ವ್ಯಾಪಾರಿಗಳು ನರ್ಸರಿ ಜೊತೆಗೆ ವಾಣಿಜ್ಯ ಬೆಳೆಗಳು ಮತ್ತು ವಾಣಿಜ್ಯ ಉದ್ದೇಶಗಳಿಗೆ ನೀರು ಬಳಸಿಕೊಳ್ಳುತ್ತಿದ್ದಾರೆ. ಕಾವೇರಿ ನದಿಗೆ ಮೋಟರ್, ಪಂಪ್ ಸೆಟ್ಗಳನ್ನು ಅಳವಡಿಸಿ ಎತ್ತೇಚ್ಚೆವಾಗಿ ನೀರು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಕಾವೇರಿ ನದಿಯಲ್ಲಿ ಇನ್ನಷ್ಟು ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ತಂದೊಡ್ಡುವ ಪರಿಸ್ಥಿತಿ ಎದುರಾಗಿದೆ.
ಕಾವೇರಿ ನದಿಗೆ ಭಾರೀ ಪ್ರಮಾಣದಲ್ಲಿ ಪಂಪ್ ಸೆಟ್ಟ್ ಅಳವಡಿಸಿರುವುದು ಗಮನಕ್ಕೆ ಬರುತ್ತಿದ್ದಂತೆ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ತಮ್ಮ ಸಿಬ್ಬಂದಿಯೊಂದಿಗೆ ತಮ್ಮ ವ್ಯಾಪ್ತಿಯ ಕಾವೇರಿ ನದಿ ದಂಡೆಯಲ್ಲಿ ಸರ್ವೆ ನಡೆಸಿದ್ದಾರೆ. ಈ ವೇಳೆ ಕಾವೇರಿ ನದಿಯಲ್ಲಿ ಪ್ರತೀ ಮೀರಟ್ಗೂ ಒಂದು ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿರುವುದು ಪತ್ತೆಯಾಗಿದೆ. ಯಾರೆಲ್ಲಾ ಕಾವೇರಿ ನದಿಗೆ ಅಕ್ರಮವಾಗಿ ಪಂಪ್ ಅಳವಡಿಸಿದ್ದಾರೋ ಅವರಿಗೆ ಕೂಡಲೇ ನೊಟೀಸ್ ನೀಡಿ ಸೂಚನೆ ನೀಡಲಾಗುವುದು.
ದಲಿತ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದು ಅಷ್ಟೊಂದು ಪ್ರಸ್ತುತವಲ್ಲ: ಸಚಿವ ಪರಮೇಶ್ವರ್
ಅವರೆಲ್ಲರೂ ಇಷ್ಟಕ್ಕೇ ನದಿ ತೊರೆಗಳಿಂದ ನೀರನ್ನು ಪಂಪ್ ಮಾಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. ಅನಿವಾರ್ಯ ಕಾರಣಗಳಿಂದ ನದಿಯಿಂದ ನೀರನ್ನು ಕುಡಿಯುವ ಉದ್ದೇಶಕ್ಕೆ ಅಲ್ಲದೆ ಬೇರೆ ಉದ್ದೇಶಕ್ಕೆ ನೀರು ಬಳಸದಂತೆ ಸೂಚಿಸಿದ್ದೇನೆ. ಇದನ್ನು ಜನರು ಅರ್ಥ ಮಾಡಿಕೊಂಡು ಸಹಕರಿಸಬೇಕು. ಇಲ್ಲದಿದ್ದರೆ ಕಾನೂನು ರೀತಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಬರದ ತೀವ್ರತೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವುದಂತು ಸತ್ಯ.