ಬರ, ಬೇಸಿಗೆ ಹಿನ್ನೆಲೆ ಕುಡಿವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ರಾಯಚೂರು (ಮಾ.09): ಬರ, ಬೇಸಿಗೆ ಹಿನ್ನೆಲೆ ಕುಡಿವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು. ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಜಿಲ್ಲಾಧಿಕಾರಿ ತಂಡ ರಚನೆ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರ ಸಹ ಅಗತ್ಯ ಇರುವ ಅನುದಾನ ಬಿಡುಗಡೆ ಮಾಡಿದೆ. ಬೋರವೇಲ್, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಸೇರಿ ಯಾವುದೇ ನೀರಿನ ಸಮಸ್ಯೆ ಎದುರಾಗದಂತೆ ಸೂಚಿಸಲಾಗಿದೆ.
ಒಂದು ವೇಳೆ ಏನಾದರೂ ಸಮಸ್ಯೆಯಾದರೆ ಆಯಾ ಅಧಿಕಾರಿಗಳನ್ನ ಹೊಣೆಗಾರರನ್ನು ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ ಎಂದರು. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಪಕ್ಷದಿಂದ ಯಾರು ಅಭ್ಯರ್ಥಿಯನ್ನ ಮಾಡಬೇಕು ಎನ್ನುವ ಕುರಿತಂತೆ ಜಿಲ್ಲೆಯಿಂದ ಮೂರ್ನಾಲ್ಕು ಹೆಸರು ಹೋಗಿವೆ. ಯಾರನ್ನುಅಭ್ಯರ್ಥಿ ಮಾಡಬೇಕು ಎನ್ನುವ ಕುರಿತಂತೆ ಆಯಾ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಸರ್ವೇ ಮಾಡಿ, ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಶಾಸಕರಿದ್ದರೆ, ಮಾಜಿ ಶಾಸಕರಿದ್ದರೆ, ಮುಖ್ಯಸ್ಥರಿದ್ದರೆ, ಜನರ ಅಭಿಪ್ರಾಯ ಕೇಳಲಾಗಿದೆ.
undefined
ಅ ನಿಟ್ಟಿನಲ್ಲಿ ಪಕ್ಷದಲ್ಲಿ ಸರ್ವೇ ಮಾಡಲಾಗಿದೆ. ಅದರ ಪ್ರಕಾರ ಪಕ್ಷ, ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಪ್ರಕರಣದ ತನಿಖೆ ನಡೆಸುವವರಿಗೆ ಸರ್ಕಾರದಲ್ಲಿ ಸ್ವಾತಂತ್ರ್ಯವಾದ ಅಧಿಕಾರವನ್ನ ನೀಡಿದ್ದು, ಪ್ರಕರಣದ ತನಿಖೆ ಮಾಡುವವರು ಕಾನೂನುತ್ಮಾಕವಾಗಿ ಮಾಡುತ್ತಾರೆ. ತನಿಖೆ ನಡೆಸುವವರು ಮೇಲೆ ಅವಲಂಬನೆಯಾಗುತ್ತಿದ್ದು, ತನಿಖೆ ನಡೆಯುತ್ತಿರುವಾಗ ಎಲ್ಲಾ ಬಹಿರಂಗಪಡಿಸುವುದಿಲ್ಲ. ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತಿದ್ದಾರೆ. ಈಗಿನ ಸರ್ಕಾರದಲ್ಲಿ ತನಿಖೆ ಮಾಡುವವರಿಗೆ ಸಂಪೂರ್ಣವಾದ ಸಹಕಾರವಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ನಂತ್ರ ದಲಿತ ಸಿಎಂ ಬಗ್ಗೆ ದನಿ: ಸಚಿವ ಸತೀಶ್ ಜಾರಕಿಹೊಳಿ
ಪಾಕ್ ಘೋಷಣೆ ಹಾಕಿರುವ ಘಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕೀಯವಾಗಿ ಮಾತನಾಡುತ್ತಾಕ್ಕದು, ವಾತಾವರಣ ಕೆಡಿಸುವಂತಹ ರೀತಿಯಲ್ಲಿ ಅವರು ಆರೋಪ ಮಾಡಿ, ಒತ್ತಾಯ ಮಾಡುತ್ತಾರೆ. ಮಂಡ್ಯದಲ್ಲಿ ಬಿಜೆಪಿ 50 ಜನ ನಿಂತುಕೊಂಡು ಜೈ, ಜಿಂದಾಬಾದ್ ಅಂತಾ ಘೋಷಣೆ ಹಾಕಿದ್ದರು. ಅಂತಹವರಿಗೆ ಏನು ಮಾಡಬೇಕು ಎಂದು ಸಚಿವರು ಪ್ರಶ್ನಿಸಿದರು.