ಕೋಲಾರ ನಗರದಲ್ಲಿ ಏರಿತ್ತಿರುವ ತಾಪಮಾನ

Published : Apr 09, 2023, 09:05 AM IST
 ಕೋಲಾರ ನಗರದಲ್ಲಿ ಏರಿತ್ತಿರುವ ತಾಪಮಾನ

ಸಾರಾಂಶ

ಬಯಲು ಸೀಮೆಯಾದ ಕೋಲಾರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತಿದೆ ಶುಕ್ರವಾರ ಗರಿಷ್ಟ35 ಡಿಗ್ರಿ ತಾಪಮಾನವಾಗಿತ್ತು.

 ಕೋಲಾರ :  ಬಯಲು ಸೀಮೆಯಾದ ಕೋಲಾರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತಿದೆ ಶುಕ್ರವಾರ ಗರಿಷ್ಟ35 ಡಿಗ್ರಿ ತಾಪಮಾನವಾಗಿತ್ತು.

ಕಳೆದ ಒಂದು ವಾರದಿಂದ ತಾಪಮಾನ ದಿನೇ ದಿನೇ ಏರಿಕೆಯಿಂದ ಜನರು ಕತ್ತರಿಸಿ ಹೋಗಿದ್ದಾರೆ ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ ಐದು ಗಂಟೆಯ ತನಕ ಬಿಸಿಲು ಮತ್ತು ಸೆಕೆಯಿಂದಾಗಿ ಜನರು ಪರದಾಡಬೇಕಾಗಿದೆ ಜೊತೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ.

ತಂಪು ಪಾನೀಯ, ಹಣ್ಣುಗಳ ಸೇವನೆ

ಪ್ರತಿದಿನ ಎರಡು ಮೂರು ಬಾರಿ ಲೋಡ್‌ ಶೆಡ್ಡಿಂಗ್‌ ಇರುವ ಕಾರಣ ಜನರು ಸಂಕಷ್ಟವನ್ನು ಎದುರಿಸಬೇಕಾಗಿದೆ ತಾಪಮಾನ ಏರಿಕೆ ಹಾಗೂ ಲೋಡ್‌ ಶೆಡ್ಡಿಂಗ್‌ ನಿಂದಾಗಿ ಜನರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಇದರಿಂದಾಗಿ ಜನರು ದೇಹವನ್ನು ತಂಪಾಗಿ ಇರಿಸಿಕೊಳ್ಳಲು ಕಲ್ಲಂಗಡಿ, ಕರ್ಬೂಜ ಹಣ್ಣುಗಳ ಹಾಗೂ ಕಬ್ಬಿನ ಹಾಲು ಸೇವನೆಗೆ ಮುಂದಾಗಿದ್ದಾರೆ. ನಗರದಲ್ಲಿ ಹಲವಾರು ಕಡೆ ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣುಗಳು ಮಾರಾಟವಾಗುತ್ತಿದೆ. ಜನರು ಮುಗಿಬಿದ್ದು ಹಣ್ಣುಗಳನ್ನು ಖರೀದಿಸುತ್ತಿರುವುದು ಕಂಡುಬರುತ್ತಿದೆ.

ಕೋಲಾರದಲ್ಲಿ ತೀವ್ರವಾಗಿ ಏರಿಕೆಯಾಗುತ್ತಿರುವ ತಾಪಮಾನದಿಂದ ಬುಧವಾರ ಮದ್ಯಾಹ್ನ 35 ಡಿಗ್ರಿ ದಾಟಿತ್ತು, ಸಂಜೆಯಾಗುತ್ತಿದ್ದಂತೆ 32 ಕ್ಕೆ ಇಳಿಕೆಯಾಯಿತು. ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿರುವುದರಿಂದ ಕಲ್ಲಂಗಡಿ, ಕರ್ಬೂಜ,ಎಳೆನೀರು ಸೇರಿದಂತೆ ಇತರೆ ಹಣ್ಣುಗಳಿಗೆ ತೀವ್ರ ಬೇಡಿಕೆಗಳು ಹೆಚ್ಚಾಗುತ್ತಿವೆ, ಕಬ್ಬಿನ ಹಾಲು ಹಾಗು ಹಣ್ಣಿನ ರಸಗಳಿಗೂ ಹಾಗು ಐಸ್‌ ಕ್ರೀಂ ಗಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ. ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಅಲ್ಲಲ್ಲಿ ಅಲ್ಪ ಮಳೆ ಬೀಳುತ್ತಿರುವುದರಿಂದ ಸೆಖೆಯ ಪ್ರಮಾಣ ಮತ್ತಷ್ಟುಹೆಚ್ಚಾಗತೊಡಗಿದೆ.

ಹಣ್ಣಿನ ಬೆಲೆಗಳು ಗಗನಕ್ಕೆ

ಮೋಸಂಬಿ ಕಿಲೋ ಒಂದಕ್ಕೆ-80, ಕಿತ್ತಳೆ-110, ಬಾಳೆ-80, ಕಲ್ಲಂಗಡಿ-20, ಕರ್ಬೂಜ-50, ದಾಳಿಂಬೆ-200 , ಕಬ್ಬಿನ ಹಾಲು ಪ್ರತಿ ಗ್ಲಾಸ್‌ಗೆ 20 ರೂ. ಎಳೆನೀರು-40 ಹೀಗೆ ಹಣ್ಣುಗಳ ಬೆಲೆ ಗಗನಕ್ಕೇರಿದೆ ಇದರ ಮದ್ಯೆ ಐಸ್‌ಕ್ರೀಂ ಬೆಲೆಗಳು ಹೆಚ್ಚಾಗತೊಡಗಿವೆ.

ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಇದ್ದಷ್ಟುಉಷ್ಣಾಂಶ ಕೋಲಾರ ಜಿಲ್ಲೆಯಲ್ಲಿಯೂ ಕಳೆದ ವಾರದಿಂದ ಕಾಣಿಸಿಕೊಂಡಿದೆ. ದೇಹವನ್ನು ತಣ್ಣಿಗೆ ಮಾಡಿಕೊಳ್ಳಲು ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳ ಬೆಲೆ ಹಾಗು ಹಣ್ಣುಗಳ ರಸ ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿದೆ ಎನ್ನುತ್ತಾರೆ ಗ್ರಾಹಕ ನಾಗರಾಜ ಶೆಣೈ.

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು