ಭಾರಿ ಏರಿಕೆಯಾದ ಘಾಟಿ ಸುಬ್ರಮಣ್ಯ ದೇಗುಲದ ಆದಾಯ

By Web Desk  |  First Published Feb 8, 2019, 1:52 PM IST

ಘಾಟಿ ಸುಬ್ರಮಣ್ಯ ದೇಗುಲದ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಬಾರಿ ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಆದಾಯದಲ್ಲಿ ಏರಿಕಯಾಗಿದೆ. 


ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ  ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ತಿಂಗಳ ಹುಂಡಿ ಎಣೆಕೆ ಕಾರ್ಯ ನಡೆದಿದ್ದು, ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. 

ಕಳೆದ ತಿಂಗಳು ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನಡೆದಿದ್ದು, ಇದರಿಂದಾಗಿ ಆದಾಯದಲ್ಲಿ ಹೆಚ್ಚಳವಾಗಿದೆ. ಭಕ್ತರಿಂದ ಕಳೆದ ಜನವರಿ ತಿಂಗಳಲ್ಲಿ ದೇಗುಲದಲ್ಲಿ 40,90,124 ರು. ನಗದು ಸಂಗ್ರಹವಾಗಿದೆ.  

Latest Videos

undefined

1 ಕೆಜಿ 740 ಗ್ರಾಂ ಬೆಳ್ಳಿ, ಮತ್ತು 200 ಮಿಲಿ ಬಂಗಾರ ಭಕ್ತರಿಂದ ದೇಗುಲಕ್ಕೆ ಅರ್ಪಣೆಯಾಗಿದೆ.  ಜತೆಗೆ ಬ್ಯಾನ್ ಆದ 500 ರೂಪಾಯಿ‌ಯ 22 ಹಳೆ ನೋಟು, 1000 ಮುಖ ಬೆಲೆಯ 6 ಹಳೆ ನೋಟುಗಳು ಸೇರಿದಂತೆ ಅಮೇರಿಕಾದ 5 ಡಾಲರಿನ 1  ನೋಟು ಹುಂಡಿಯಲ್ಲಿ ಪತ್ತೆಯಾಗಿವೆ. 

ಕಳೆದ ಡಿಸೆಂಬರ್ ತಿಂಗಳ ಹುಂಡಿ ಎಣಿಕೆಯಲ್ಲಿ 33,046 ರು. ನಗದು 1.5 ಕೆಜಿ ಬೆಳ್ಳಿ ಭಕ್ತರಿಂದ ದೇಣಿಗೆಯಾಗಿ ಸ್ವೀಕರಿಸಲ್ಪಟ್ಟಿತ್ತು.  ಕಳೆದ ಬಾರಿ ಆದಾಯಕ್ಕೆ ಹೋಲಿಸಿದಲ್ಲಿ ಈ ಬಾರಿ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

click me!