370ನೇ ವಿಧಿ ರದ್ದು: ಮಂಗಳೂರಿನಲ್ಲಿ ಬಿಜೆಪಿ ಸಂಭ್ರಮ

Published : Aug 06, 2019, 10:39 AM IST
370ನೇ ವಿಧಿ ರದ್ದು: ಮಂಗಳೂರಿನಲ್ಲಿ ಬಿಜೆಪಿ ಸಂಭ್ರಮ

ಸಾರಾಂಶ

ಕೇಂದ್ರ ಸರ್ಕಾರವು ಜಮ್ಮ ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಹಿಂಪಡೆದದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪಕ್ಷದ ಕಾರ್ಯಾಲಯದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಕೋಟ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಕೋಟ ಅಮೃತೇಶ್ವರಿ ಸರ್ಕಲ್‌ ಬಳಿ ಸಿಹಿ ಹಂಚಿ ಪಟಾಕಿ ಸಿಡಿಸಿ ಕಾರ್ಯಕರ್ತರ ಸಂಭ್ರಮಿಸಿದರು.  

ಉಡುಪಿ(ಆ.06): ಕೇಂದ್ರ ಸರ್ಕಾರವು ಜಮ್ಮ ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಹಿಂಪಡೆದದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪಕ್ಷದ ಕಾರ್ಯಾಲಯದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್‌ ಹೆಗ್ಡೆ ಅವರು, ಈಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ರಾಜ್ಯಗಳು ಸಂಪೂರ್ಣವಾಗಿ ಭಾರತಕ್ಕೆ ಸೇರಿವೆ. ಇದರಿಂದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಕನಸು ನನಸಾಗಿದೆ ಎಂದರು.

ಅಂದು ನೆಹರೂ ಅವರ ಅವಿವೇಕದಿಂದ ಜಮ್ಮು ಕಾಶ್ಮೀರಕ್ಕೆ ದೇಶದ ಸಂವಿಧಾನ ಅನೇಕ ವಿಚಾರ ಅನ್ವಯವಾಗುತ್ತಿರಲಿಲ್ಲ. ಇದೀಗ 370 ಮತ್ತು 35ಎ ವಿಧಿ ರದ್ದುಗೊಳಿಸಿರುವುದರಿಂದ ಕಾಶ್ಮೀರಕ್ಕೂ ಭಾರತದ ಸಂವಿಧಾನ ಅನ್ವಯವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ಶೀಲಾ ಕೆ.ಶೆಟ್ಟಿ, ಪ್ರಭಾಕರ್‌ ಪೂಜಾರಿ, ಶ್ರೀಶ ನಾಯಕ್‌, ನಳಿನಿ ಪ್ರದೀಪ್‌ ರಾವ್‌, ಗಿರೀಶ್‌ ಅಂಚನ್‌, ಬಾಲಕೃಷ್ಣ ಶೆಟ್ಟಿ, ಮಂಜುನಾಥ ಮಣಿಪಾಲ, ರಾಘವೇಂದ್ರ ಕಿಣಿ, ರಶ್ಮಿತಾ ಶೆಟ್ಟಿ, ರೋಹಿಣಿ, ದಯಾಶಿನಿ, ಜಯಂತಿ ಸೇರಿದಂತೆ ಮೊದಲಾದವರಿದ್ದರು.

ಕೋಟದಲ್ಲಿಯೂ ಸಂಭ್ರಮಾಚರಣೆ:

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಹಿನ್ನೆಲೆಯಲ್ಲಿ ಕೋಟ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಕೋಟ ಅಮೃತೇಶ್ವರಿ ಸರ್ಕಲ್‌ ಬಳಿ ಸಿಹಿ ಹಂಚಿ ಪಟಾಕಿ ಸಿಡಿಸಿ ಕಾರ್ಯಕರ್ತರ ಸಂಭ್ರಮಿಸಿದರು.

ಆರ್ಟಿಕಲ್ 370 ರದ್ದು: ‘ಎಂಎಸ್‌ಡಿ’ ಸೀಕ್ರೆಟ್‌ ಆಪರೇಷನ್‌ ಸಕ್ಸಸ್!

ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಭರತ್‌ ಕುಮಾರ ಶೆಟ್ಟಿ, ಪದಾಧಿಕಾರಿಗಳಾದ ಕಾರ್ಕಡ ರಾಜು ಪೂಜಾರಿ, ಕೇಶವ ಆಚಾರ್ಯ, ದಿನೇಶ್‌ ಗಾಣಿಗ, ಅಜಿತ್‌ ದೇವಾಡಿಗ, ಮಹೇಶ್‌ ಹೊಳ್ಳ, ತಾ.ಪಂ. ಸದಸ್ಯ ಲಲಿತಾ ಪೂಜಾರಿ, ಗೋಪಾಲ ಪೈ, ರವೀಂದ್ರ ಜೋಗಿ, ಸಂತೋಷ್‌ ಪ್ರಭು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಐಷಾರಾಮಿ ಕಾರಿನ ಎರಡು ಡೋರ್ ಓಪನ್ ಮಾಡಿ ಸ್ಟಂಟ್; ಇನ್‌ಸ್ಟಾ ವಿಡಿಯೋ ನೋಡಿ ಕೇಸ್ ಜಡಿದ ಕಬ್ಬನ್ ಪಾರ್ಕ್ ಪೊಲೀಸರು!
ಇದು ಸಂವಿಧಾನಕ್ಕೆ ಮಾಡಿದ ಅಪಚಾರ: ರಾಜ್ಯಪಾಲರ ನಡೆಗೆ ಗೃಹ ಸಚಿವ ಪರಮೇಶ್ವರ್ ತೀವ್ರ ಅಸಮಾಧಾನ!