ರೇಪ್‌ಗೆ ಪ್ರಚೋದನೆ : ಬಿಜೆಪಿ ಮುಖಂಡನ ಉಚ್ಛಾಟನೆ

By Kannadaprabha News  |  First Published Nov 9, 2020, 1:06 PM IST

ರೇಪ್‌ಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಬಿಜೆಪಿ ಮುಖಂಡರೋರ್ವರನ್ನು ಉಚ್ಛಾಟನೆ ಮಾಡಲಾಗಿದೆ


ದಾವಣಗೆರೆ (ನ.09):  ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಸ್ಥಾನದಿಂದ ಜಗಳೂರು ತಾ. ಚಿಕ್ಕ ಉಜ್ಜಿನಿ ಗ್ರಾಮದ ಅಂಜಿನಪ್ಪಗೆ ತಕ್ಷಣದಿಂದ ಪಕ್ಷದ ಸ್ಥಾನಮಾನ, ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ ಆದೇಶ ಹೊರಡಿಸಿದ್ದಾರೆ. 

ಪಕ್ಷದ ಎಲ್ಲಾ ಜವಾಬ್ಧಾರಿಗಳಿಂದ ಚಿಕ್ಕ ಉಜ್ಜಿನಿ ಅಂಜಿನಪ್ಪಗೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tap to resize

Latest Videos

ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ ...

ಅನ್ಯ ಜಾತಿಯ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದರೂ ಬಿಡಿಸಿಕೊಂಡು ಬರುವುದಾಗಿ ವ್ಯಕ್ತಿಯೊಬ್ಬನ ಜೊತೆ ಮೊಬೈಲ್‌ ಸಂಭಾಷಣೆಯಲ್ಲಿ ಚಿಕ್ಕ ಉಜ್ಜಿನಿ ಅಂಜಿನಪ್ಪ ಹೇಳಿರುವ ಆಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ, ಅಂಜಿನಪ್ಪ ವಿರುದ್ಧ ಗ್ರಾಮಸ್ಥರೂ ಇದೀಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

 ಇತ್ತ ಜಿಲ್ಲಾ ಮಡಿವಾಳ ಸಮಾಜದಿಂದ ನ.9ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದೆಲ್ಲದರಿಂದ ಎಚ್ಚೆತ್ತ ಪಕ್ಷವು ಅಂಜಿನಪ್ಪಗೆ ಪಕ್ಷದ ಹುದ್ದೆ, ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಿರುವುದು ಗಮನಾರ್ಹ.

click me!