ನಾಯಿ ಮರಿಗಳನ್ನು ಮಾರಿ ಕೊರೋನಾ ಪರಿಹಾರ ನಿಧಿಗೆ ಹಣ..!

By Kannadaprabha NewsFirst Published Apr 9, 2020, 11:24 AM IST
Highlights

ತಮ್ಮ ಮನೆಯಲ್ಲಿದ್ದ ಜರ್ಮನ್‌ ಶಫರ್ಡ್‌ ತಳಿಯ ಮೂರು ಶ್ವಾನದ ಮರಿಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ 25 ಸಾವಿರ ರುಪಾಯಿ ಹಣವನ್ನು ನಿವೃತ್ತ ಪೊಲೀಸ್‌ ಕಾವೇರಪ್ಪ ಅವರು ಮುಖ್ಯಮಂತ್ರಿ ಅವರ ಕೋವಿಡ್‌ -19 ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

ಮಡಿಕೇರಿ(ಏ.09): ತಮ್ಮ ಮನೆಯಲ್ಲಿದ್ದ ಜರ್ಮನ್‌ ಶಫರ್ಡ್‌ ತಳಿಯ ಮೂರು ಶ್ವಾನದ ಮರಿಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ 25 ಸಾವಿರ ರುಪಾಯಿ ಹಣವನ್ನು ನಿವೃತ್ತ ಪೊಲೀಸ್‌ ಕಾವೇರಪ್ಪ ಅವರು ಮುಖ್ಯಮಂತ್ರಿ ಅವರ ಕೋವಿಡ್‌ -19 ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

ಮಡಿಕೇರಿಯ ಕಾವೇರಪ್ಪ ಅವರು 20 ವರ್ಷಗಳ ಕಾಲ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಮನೆಯಲ್ಲಿರುವ ಜರ್ಮನ್‌ ಶಫರ್ಡ್‌ ಶ್ವಾನ ಕೆಲವು ದಿನಗಳ ಹಿಂದೆ 13 ಮರಿಗಳನ್ನು ಹಾಕಿತ್ತು. ಅದರಲ್ಲಿ 5 ಮರಿ ಮೃತಪಟ್ಟಿದ್ದವು.

ಲಾಕ್‌ಡೌನ್‌ ಎಫೆಕ್ಟ್: ಸೆಲೂನ್‌ ಶಾಪ್‌ ಬಂದ್‌, ಮನೆ ಬಾಗಿಲಿಗೆ ಕ್ಷೌರಿಕರು!

ಉಳಿದ 8 ಶ್ವಾನದ ಮರಿಯಲ್ಲಿ 7 ಮರಿಗಳನ್ನು ಮಾರಾಟ ಮಾಡಿದ್ದಾರೆ. ಒಂದು ಮರಿಗೆ 9 ಸಾವಿರ ರುಪಾಯಿಯಂತೆ ಮಾರಾಟ ಮಾಡಿದ್ದು, 3 ಮರಿಗೆ ಬಂದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಬುಧವಾರ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಮೊತ್ತವನ್ನು ಹಸ್ತಾಂತರ ಮಾಡಿದರು.

click me!