Uttara kannada: ಜಲಪಾತಗಳಿಗೆ ನಿರ್ಬಂಧ, ಕಡಲಿಗೆ ಬರದ ಪ್ರವಾಸಿಗರು!

By Kannadaprabha News  |  First Published Jul 30, 2023, 6:44 AM IST

ಸತತ ಎರಡು ದಿನಗಳ ಕಾಲ ರಜೆ ಹಾಗೂ ವಾರಾಂತ್ಯವಿದ್ದರೂ ಕರಾವಳಿ ಕಡಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದರೂ ಅಧಿಕಾರಿಗಳು ಅನುವು ಮಾಡುತ್ತಿಲ್ಲ.


ಕಾರವಾರ (ಜು.30) :  ಸತತ ಎರಡು ದಿನಗಳ ಕಾಲ ರಜೆ ಹಾಗೂ ವಾರಾಂತ್ಯವಿದ್ದರೂ ಕರಾವಳಿ ಕಡಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದರೂ ಅಧಿಕಾರಿಗಳು ಅನುವು ಮಾಡುತ್ತಿಲ್ಲ.

ಕಳೆದ ಕೆಲವು ದಿನಗಳ ಹಿಂದೆ ಸುರಿದ ಸತತ ಭಾರಿ ಮಳೆಯಿಂದಾಗಿ ನೆರೆ, ಪ್ರವಾಹ ಉಂಟಾಗಿದ್ದು, ವಾರಾಂತ್ಯ ಹಾಗೂ ಎರಡು ದಿನ ರಜೆಯಿದ್ದರೂ ಗೋಕರ್ಣ, ಮುರುಡೇಶ್ವರ ಒಳಗೊಂಡು ಪ್ರಮುಖ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಮುರುಡೇಶ್ವರ, ಗೋಕರ್ಣ, ಅಪ್ಸರಕೊಂಡದ ಕಡಲ ತೀರಗಳಿಗೆ ಹಾಗೂ ದೇವರ ದರ್ಶನಕ್ಕೆ ವಾರಾಂತ್ಯದಲ್ಲಿ ಎರಡು-ಮೂರು ರಜೆ ಸಿಕ್ಕದರೆ ಸಾವಿರಾರು ಜನರು ಆಗಮಿಸುತ್ತಿದ್ದರು. ಆದರೆ ಮಳೆಗಾಲದ ಅವಧಿಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ಅಲೆಗಳ ಅಬ್ಬರ ಹೆಚ್ಚಿರುವುದರಿಂದ ನೀರಿಗೆ ಇಳಿಯಲು ಬಿಡುವುದಿಲ್ಲ. ಕಾರಣ ಕರಾವಳಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಿದೆ.

Tap to resize

Latest Videos

undefined

ಮಳೆ ಅಬ್ಬರ ಅವಘಡಗಳ ಸರಣಿ, ಮುಳ್ಳಯ್ಯನಗಿರಿಯಲ್ಲಿ ಭೂ ಕುಸಿತ , ಪ್ರವಾಸಿಗರಿಗೆ ನಿರ್ಬಂಧ

ಪ್ರವೇಶಕ್ಕೆ ನಿರ್ಬಂಧ:

ಜೋಗ ಜಲಪಾತ, ಉಂಚಳ್ಳಿ, ವಿಭೂತಿ, ಸಾತೊಡ್ಡಿ, ಶಿರಲೆ, ಮಾಗೋಡ, ಹನುಮಾನಲಾಠಿ, ನಾಗರಮಡಿ ಒಳಗೊಂಡು ಹತ್ತುಹಲವು ಫಾಲ್ಸ್‌ಗಳು ಜಿಲ್ಲೆಯ ಮಲೆನಾಡು, ಕರಾವಳಿ ಭಾಗದಲ್ಲಿದ್ದು, ಕಳೆದ ವಾರ ಉತ್ತಮ ಮಳೆಯಾದ್ದರಿಂದ ಮೈದುಂಬಿ ಹರಿಯುತ್ತಿದೆ. ಆದರೆ ಜಿಲ್ಲಾಡಳಿತವು ಪ್ರವಾಸಿಗರ ಹಿತದೃಷ್ಟಿಯಿಂದ ಎಲ್ಲ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

2017ರಲ್ಲಿ ಕಾರವಾರ ತಾಲೂಕಿನ ನಾಗರಮಡಿ ಜಲಪಾತಕ್ಕೆ ಪಿಕ್‌ನಿಕ್‌ಗೆ ಬಂದಿದ್ದ ಗೋವಾದ ಪ್ರವಾಸಿಗರು ನೀರಿಗೆ ಇಳಿದಿದ್ದರು. ಏಕಾಏಕಿ ರಭಸದಿಂದ ನೀರು ಹರಿದುಬಂದ ಕಾರಣ ಆರು ಜನರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದರು. ಭಾರಿ ಮಳೆಯಾದಾಗ ಜಲಪಾತಗಳಿಗೆ ಏಕಾಏಕಿ ನೀರು ಹರಿದು ಬರುತ್ತದೆ. ಆದರೆ ಹೊರಗಿನಿಂದ ಆಗಮಿಸಿದವರಿಗೆ ಇದರ ಕಲ್ಪನೆ ಇಲ್ಲದೇ ನೀರಿಗಿಳಿದು ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ.

ಶಿರಲೆಗೆ ಬಂದವರಿಗೆ ನಿರಾಸೆ

ಶಿರಲೆ ಫಾಲ್ಸ್‌ಗೆ 80ಕ್ಕೂ ಅಧಿಕ ಜನರು ಶನಿವಾರ ಆಗಮಿಸಿದ್ದು, ಆದರೆ ಯಾರನ್ನೂ ಒಳಕ್ಕೆ ಬಿಟ್ಟಿಲ್ಲ. ಇದಲ್ಲದೇ ಮಾಗೋಡ, ಸಾತೊಡ್ಡಿಗೂ ಪ್ರವಾಸಿಗರು ಆಗಮಿಸಿದ್ದು, ಅಧಿಕಾರಿಗಳು ವಾಪಸ್‌ ಕಳಿಸಿದ್ದಾರೆ. ವರ್ಷದ ಹಿಂದೆ ಶಿರಲೆ ಫಾಲ್ಸ್‌ನಲ್ಲಿ ದುರಂತ ಸಂಭವಿಸಿ ನಾಲ್ವರು ಸಾವಿಗೀಡಾಗಿದ್ದರು. ಮಳೆಗಾಲ ಅರಂಭವಾದಾಗಿನಿಂದಲೆ ಫಾಲ್ಸ್‌ಗೆ ಹೋಗುವುದನ್ನು ನಿಷೇಧಿಸಿ ಭದ್ರತೆ ಕಲ್ಪಿಸಲಾಗಿದೆ. ವೀಕೆಂಡ್‌ಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಿಷೇಧ ಇರುವ ಕಾರಣ ವಾಪಸ್‌ ಹೋಗುವಂತಾಗಿದೆ.

ಕೆಆರ್‌ಎಸ್‌ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ನಿರ್ಬಂಧ

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎಲ್ಲ ಜಲಪಾತಗಳ ವೀಕ್ಷಣೆಗೆ ಮಳೆಗಾಲ ಮುಗಿಯುವವರೆಗೆ ಪ್ರವಾಸಿಗರಿಗೆ ನಿಬಂರ್‍ಧವನ್ನು ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌ರು ವಿಧಿಸಲು ಸೂಚಿಸಲಾಗಿದೆ. ಅಲೆಗಳ ಅಬ್ಬರ ಇರುವುದರಿಂದ ಕಡಲಿಗೂ ಯಾರೂ ಇಳಿಯದಂತೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ

click me!