ರೈತರಿಗೆ ಹೆಚ್ಚು ಆದಾಯ ತರುವ ಮತ್ತು ಜೀವನ ಸುಧಾರಣೆಯ ಅತ್ಯುತ್ತಮ ಬೆಳೆ ರೇಷ್ಮೆ. ರೇಷ್ಮೆ ಬೆಳೆಗಾರರನ್ನು ಹೆಚ್ಚು ಪ್ರೋತ್ಸಾಹಿಸುವ ಮೂಲಕ ಸೌಲಭ್ಯ ಹಾಗೂ ಉತ್ತಮ ಮಾರ್ಗದರ್ಶನ ನೀಡುವಂತೆ ಶಾಸಕ ಎಚ್.ವಿ.ವೆಂಕಟೇಶ್ ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಕರೆ ನೀಡಿದರು.
ಪಾವಗಡ : ರೈತರಿಗೆ ಹೆಚ್ಚು ಆದಾಯ ತರುವ ಮತ್ತು ಜೀವನ ಸುಧಾರಣೆಯ ಅತ್ಯುತ್ತಮ ಬೆಳೆ ರೇಷ್ಮೆ. ರೇಷ್ಮೆ ಬೆಳೆಗಾರರನ್ನು ಹೆಚ್ಚು ಪ್ರೋತ್ಸಾಹಿಸುವ ಮೂಲಕ ಸೌಲಭ್ಯ ಹಾಗೂ ಉತ್ತಮ ಮಾರ್ಗದರ್ಶನ ನೀಡುವಂತೆ ಶಾಸಕ ಎಚ್.ವಿ.ವೆಂಕಟೇಶ್ ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಕರೆ ನೀಡಿದರು.
ಶನಿವಾರ ಇಲ್ಲಿನ ತುಮಕೂರು ರಸ್ತೆಯ ರೇಷ್ಮೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಬೆಳೆಗಾರರ ತಾಲೂಕು ಮಟ್ಟದ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇತ್ತೀಚೆಗೆ ತಾಲೂಕಿನಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದ್ದು, ರೇಷ್ಮೆ ಬೆಳೆ ಬೆಳವಣಿಗೆ ಮತ್ತು ಆದಾಯ ಹಾಗೂ ಮಾರುಕಟ್ಟೆಯ ವ್ಯವಸ್ಥೆ ಕುರಿತು ರೈತರಿಗೆ ಮನವರಿಕೆ ಮಾಡಬೇಕು. ರೇಷ್ಮೆ ಬೆಳೆಗಾರರ ಉತ್ತೇಜನಕ್ಕೆ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ರೇಷ್ಮೆ ಬೆಳೆಯ ಬಗ್ಗೆ ಆಸಕ್ತಿ ಹೊಂದಿದ್ದ ರೈತರಿಗೆ ಸರ್ಕಾರ ಸೌಲಭ್ಯ ಕಲ್ಪಿಸಬೇಕು. ಇಲಾಖೆಯಲ್ಲಿ ಸಿಗಬಹುದಾದ ಸಹಾಯಧನದ ಸೌಲಭ್ಯ ಮತ್ತು ನರೇಗಾ ಯೋಜನೆಯ ಉಪಯುಕ್ತದ ಬಗ್ಗೆ ಮಾರ್ಗದರ್ಶನ ನೀಡಬೇಕು. ತಾಲೂಕಿನಲ್ಲಿ ರೇಷ್ಮೆ ಬೆಳೆಗೆ ಬೇಕಾದ ಫಲವತ್ತಾದ ಮಣ್ಣಿನ ಜಮೀನುಗಳಿವೆ. ರೈತರ ನೀರಾವರಿಯ ಜಮೀನುಗಳಿಗೆ ತೆರಳಿ, ಮಣ್ಣಿನ ಫಲವತ್ತತೆ ಕುರಿತು ಪರಿಶೀಲಿಸಬೇಕು. ರೇಷ್ಮೆ ಬೆಳೆಗೆ ಹೆಚ್ಚು ಉತ್ತೇಜನ ನೀಡಬೇಕು. ರೇಷ್ಮೆ ಒಂದು ಆದಾಯ ತರುವಂತಹ ಬೆಳೆ, ಹೆಚ್ಚು ಶ್ರಮವಿಲ್ಲದೇ ಆಧುನಿಕ ಪರಿಕರಗಳ ಬಳಕೆಯಿಂದ ಹುಲುಗಳ ಸಂರಕ್ಷಣೆ ಮತ್ತು ಗುಣಮಟ್ಟದ ರೇಷ್ಮೆ ಗೂಡು ತಯಾರಿಕೆ ಸಾಧ್ಯವಾಗಲಿದೆ ಎಂದು ರೇಷ್ಮೆ ಬೆಳೆಯ ಪ್ರಗತಿ ಮತ್ತು ರೈತರ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಈ ವೇಳೆ ತಾಲೂಕು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ರೇಷ್ಮೆ ಇಲಾಖೆಯ ಅಭಿವೃದ್ಧಿ ಅಧಿಕಾರಿಗಳಾದ ಅಚ್ಚಮ್ಮನಹಳ್ಳಿ ನಾರಾಯಣಪ್ಪ, ಈರಣ್ಣ, ಬೊಮ್ಮಯ್ಯ, ಮುಖಂಡ ಬೊಮ್ಮತನಹಳ್ಳಿ ತಿಪ್ಪೇಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷರಾದ ನರಸಿಂಹರೆಡ್ಡಿ, ಕೃಷ್ಣರಾವ್, ಕೊಂಡನ್ನ ಇಲಾಖೆಯ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ರೇಷ್ಮೆ ಬೆಲೆ ದಿಢೀರ್ ಕುಸಿತ
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಜು.08): ರೇಷ್ಮೆ ಬೆಲೆ ದಿಢೀರ್ ಕುಸಿತದಿಂದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರೇಷ್ಮೆ ಗೂಡಿಗೆ ಅರ್ಧದಷ್ಟು ಬೆಲೆ ಕಡಿತವಾಗಿದೆ. ಸಾಲಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು ಇದೀಗ ಬೆಂಬಲ ಬೆಲೆ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ.
ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ರೈತರು ಒತ್ತಾಯ: ಮುಂಗಾರು ಮಳೆ ಕೊರತೆ ಹಾಗೂ ದಲ್ಲಾಳಿಗಳ ಕಿರುಕುಳದಿಂದ ಬೇಸತ್ತಿದ್ದ ರೇಷ್ಮೆ ಬೆಳೆಗಾರರಿಗೆ ಇದೀಗ ಬೆಲೆ ಕುಸಿತದ ಶಾಕ್ ತಟ್ಟಿದೆ. ರೇಷ್ಮೆ ಗೂಡಿನ ದಿಢೀರ್ ಬೆಲೆ ಕುಸಿತಕ್ಕೆ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ. ಉತ್ಪಾದನೆ ಹೆಚ್ಚಳ ಹಾಗೂ ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆ ರಾಜ್ಯದ ರೇಷ್ಮೆಗೆ ಅರ್ಧದಷ್ಟು ಬೆಲೆ ಕುಸಿತವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ರೇಷ್ಮೆ ನೂಲು ಆಮದಾಗಿರುವುದು ರೇಷ್ಮೆ ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ಮೊದಲೇ ಮಧ್ಯವರ್ತಿಗಳ ಹಾವಳಿಯಿಂದ ಸೂಕ್ತ ಬೆಲೆ ಸಿಗದೇ ಒದ್ದಾಡುತ್ತಿದ್ದ ರೈತರಿಗೆ ಈಗ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.
ಗೃಹಜ್ಯೋತಿ ಅರ್ಜಿ ಸ್ಥಿತಿ ತಿಳಿಯಲು ಪ್ರತ್ಯೇಕ ಲಿಂಕ್ ಬಿಡುಗಡೆ: ಮೊಬೈಲ್‌ನಲ್ಲೇ ಪರಿಶೀಲನೆ ಮಾಡಿ
ಏಷ್ಯಾದಲ್ಲೇ ಅತೊದೊಡ್ಡ ಮಾರುಕಟ್ಟೆ: ಏಷ್ಯಾದಲ್ಲೇ ಅತಿಹೆಚ್ಚು ರೇಷ್ಮೆ ಗೂಡಿನ ವಹಿವಾಟು ನಡೆಯುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಕಳೆದ ವರ್ಷ ಉತ್ತಮವಾದ ದರ ಸಿಕ್ಕಿತ್ತು. ಆದರೆ ಈ ವರ್ಷ ದ್ವಿತಳಿ ಹಾಗೂ ಬೈ ವೋಲ್ಟಿನ್ ಗೂಡುಗಳನ ದರ ಅರ್ಧದಷ್ಟು ಕಡಿತವಾಗಿದರ. ಈ ಹಿಂದೆ ಬೈ ವೋಲ್ಟಿನ್ ರೇಷ್ಮೆ ಪ್ರತಿ ಕೆಜಿಗೆ 550 ರಿಂದ 600 ರೂ ಧಾರಣೆ ಇತ್ತು. ಆದರೆ ಈಗ 250ರಿಂದ 350 ರೂ ಗೆ ಕುಸಿತ ಕಂಡಿದೆ.
ಹಾಗೆಯೇ ದ್ವಿತಳಿ ಗೂಡಿನ ದರ ಹಿಂದೆ 950ರಿಂದ 1000 ರೂ ಇತ್ತು. ಇದೀಗ ಕೇವಲ 550 ರಿಂದ 650 ರೂ ಗೆ ಕುಸಿತ ಕಂಡಿದೆ. ಇದರ ಮಧ್ಯೆ ರೇಷ್ಮೆ ಗೂಡಿನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇದ್ರೂ ದಲ್ಲಾಳಿಗಳು ಗೂಡು ಮುಟ್ಟೋದಿಲ್ಲ. ಒಂದು ಕೆ.ಜೆ.ರೇಷ್ಮೆ ಬೆಳೆಯಲು ರೈತರಿಗೆ ಸುಮಾರು 500ರೂ ವೆಚ್ಚ ತಲುಲಲಿದ್ದು ಪ್ರಸಕ್ತ ದರಕ್ಕೆ ಮಾರಾಟ ಮಾಡಿದ್ರೆ ಹೆಚ್ಚನ ನಷ್ಟ ಉಂಟಾಗಲಿದೆ. ಹಾಗಾಗಿ ದಿಕ್ಕುಕಾಣದ ರೈತರು ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿದ್ದಾರೆ.