Davanagere: ನಾವು ಮಾಡಿದ ಸಾಧನೆಗಳೇ ನಮ್ಮ ಪರಿಶ್ರಮದ ಅಳತೆಗೋಲುಗಳಾಗಬೇಕು: ಭೈರತಿ ಬಸವರಾಜ್

By Suvarna News  |  First Published Jan 26, 2023, 11:17 AM IST

ಭಾರತ ದೇಶವು ಸಾರ್ವಭೌಮತೆಯ ಜ್ಯಾತ್ಯಾತೀತತೆ ಮತ್ತು ಪುಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಬಣ್ಣಿಸಿದರು.


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜ.26): ಭಾರತ ದೇಶವು ಸಾರ್ವಭೌಮತೆಯ ಜ್ಯಾತ್ಯಾತೀತತೆ ಮತ್ತು ಪುಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಬಣ್ಣಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ‌ 74 ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ‌ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ದೇಶವು ಸಾರ್ವಭೌಮತೆಯ ಸಾಮಾಜಿಕ ನ್ಯಾಯದ ಜ್ಯಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯವಾಗಿದೆ. ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತಮ್ಮ ತನು-ಮನ-ಧನಗಳಿಂದ ತ್ಯಾಗ, ಬಲಿದಾನ ಮಾಡಿದ ಮೇರು ನಾಯಕರುಗಳನ್ನು, ಅಸಂಖ್ಯಾತ ಯೋಧರನ್ನು ದೇಶಾಭಿಮಾನಿಗಳನ್ನು ಕೃತಜ್ಞತಾ ಭಾವನೆಯಿಂದ ನನೆಯುವುದು ಮತ್ತು ಅವರು ಆಶಿಸಿದಂತೆ, ನಮ್ಮ ರಾಷ್ಟ್ರವನ್ನು ಇನ್ನಷ್ಟು ಅಭ್ಯುದಯದ ಪಥದಲ್ಲಿ ಮುನ್ನಡೆಸುವುದು. ಭಾರತೀಯರಾದ ಕರ್ತವ್ಯವಾಗಿದೆ. 

Tap to resize

Latest Videos

ದೇಶದ ಅಖಂಡತೆಯ ಪ್ರತೀಕವಾದ ನಮ್ಮ ಸಂವಿಧಾನವನ್ನು 1950ರ ಜನವರಿ 26ರಂದು ಇಡೀ ದೇಶಕ್ಕೆ ಏಕೈಕ ಪೌರತ್ವವನ್ನು ಉಪಬಂಧಿಸಿ, ಎಲ್ಲಾ ಪೌರರಿಗೆ ಮೂಲಭೂತ ಹಕ್ಕುಗಳನ್ನು ದಯಪಾಲಿಸಿ, ಪ್ರಜೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಮೂಲಭೂತ ಕರ್ತವ್ಯಗಳನ್ನು ಸಹ ಸಂವಿಧಾನವು ನೀಡಿದೆ.ಇಂತಹ ಮಹತ್ ಪ್ರೇರಣಾದಾಯಕವಾದ ದಿನವಾದ ಇಂದು, ನಾವುಗಳು  ಸಂವಿಧಾನದ ವಿಧಿವಿಧಾನಗಳ ಅನುಷ್ಠಾನದ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲಾ ದಿಗ್ಗಜರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಬೇಕಾಗಿದೆ ಎಂದರು.2019 ರ ಜುಲೈನಲ್ಲಿ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಇಲ್ಲಿಯವರೆಗೂ ರಾಜ್ಯ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಯಾವುದೇ ಕ್ಷೇತ್ರ ಮತ್ತು ಇಲಾಖೆಗಳನ್ನು ಕಡೆಗಣಿಸದೇ, ಜನರ ಅವಶ್ಯಕತೆಗೆ ತಕ್ಕಂತೆ, ಆಧ್ಯತೆಯ ಮೇರೆಗೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲಾಗಿದೆ. ಇದು ನಮ್ಮ ಜವಾಬ್ದಾರಿ ಮತ್ತು ನಮ್ಮ ಸರ್ಕಾರಕ್ಕೆ ಇರುವ ಬದ್ಧತೆಯಾಗಿದೆ.

ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ!

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಎಲ್ಲಾ ದೇಶ ಬಾಂಧವರು ತಮ್ಮ ಕರ್ತವ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸಲು ನಾನು ಆಗ್ರಹ ಪಡಿಸುತ್ತೇನೆ. ನಾವು ಮಾಡಿದ ಸಾಧನೆಗಳೇ ನಮ್ಮ ಪರಿಶ್ರಮದ ಅಳತೆಗೋಲುಗಳಾಗಬೇಕು. ಪ್ರಯೋಜನ ಪಡೆದು, ತೃಪ್ತಿಗೊಂಡ ಜನರು -ನೀಡುವ ಉತ್ತೇಜನವೇ ನಮಗೆ ಶ್ರೀರಕ್ಷೆಯಾಗಬೇಕು. ಆಗ ಮಾತ್ರ, ನಮ್ಮ ಬದುಕು ಸಾರ್ಥಕವಾಗಿ ರಾಜ್ಯದ ಅಭ್ಯುದಯದೊಂದಿಗೆ ದೇಶದ ಅಭ್ಯುದಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

 

'ಗಣರಾಜ್ಯೋತ್ಸವ ಆಚರಣೆ ನಡೆಸಿ..' ಕೆಸಿಆರ್‌ ಸರ್ಕಾರಕ್ಕೆ ಖಡಕ್‌ ವಾರ್ನಿಂಗ್‌ ನೀಡಿದ ತೆಲಂಗಾಣ ಹೈಕೋರ್ಟ್‌!

ಸಮಾರಂಭದಲ್ಲಿ ಶಾಸಕ ಎಸ್ ಎ ರವೀಂದ್ರನಾಥ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್,ಮೇಯರ್ ಜಯಮ್ಮ ಗೋಪಿನಾಯ್ಕ್,ಜಿಲ್ಲಾಧಿಕಾರಿ ಶಿವಾನಂದ ಕಾಪಶಿ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ‌.ರಿಷ್ಯಂತ್ ,ಅಪರ ಜಿಲ್ಲಾಧಿಕಾರಿ ಪಿಎನ್ ಲೋಕೇಶ್ ಉಪಸ್ಥಿತರಿದ್ದರು. ೨೨ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು ಈ ಬಾರಿಯೂ ಕನ್ನಡದಲ್ಲಿ ಪಥಸಂಚಲನದ ಪ್ರಕ್ರಿಯೆ ನಡೆದಿದ್ದು ವಿಶೇಷವಾಗಿತ್ತು.ಹೊನ್ನೂರಪ್ಪ ನೇತೃತ್ವದ ವಾದ್ಯವೃಂದ ತಂಡ ಭಾಗವಹಿಸಿದ್ದು ಸೇವಾದಳದ ಅಣ್ಣಯ್ಯ ಧ್ವಜಸ್ತಂಭ ನಿರ್ವಹಣೆ ಮಾಡಿದ್ದರು.

click me!